ಈ ಬಾರಿಯ ಐಪಿಎಲ್ ಟ್ರೋಫಿಯನ್ನು ಇವರೇ ಗೆಲ್ಲಲಿ: ಕ್ರಿಸ್ ಗೇಲ್ ಹೇಳಿದ ಆ ತಂಡ ಯಾವುದು?

ಐಪಿಎಲ್ 2022ರ ಆವೃತ್ತಿಗೆ ಕ್ರಿಕೆಟ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಟೂರ್ನಿಯ ಆರಂಭಕ್ಕೆ ಇನ್ನು ಒಂದು ತಿಂಗಳಿಗೂ ಕಡಿಮೆ ಸಮಯವಿದ್ದು ಅಭಿಮಾನಿಗಳು ಹಾಗೂ ಆಟಗಾರರ ಚಿತ್ತ ಈ ಮಹತ್ವದ ಟೂರ್ನಿಯತ್ತ ನೆಟ್ಟಿದೆ. ಲೀಗ್ ಹಂತದಲ್ಲಿ ನಡೆಯಲಿರುವ 70 ಪಂದ್ಯಗಳು ಮಹಾರಾಷ್ಟ್ರದಲ್ಲಿ ನಡೆಯಲಿದ್ದು ಪ್ಲೇಆಫ್ ಪಂದ್ಯಗಳ ತಾಣವನ್ನು ಇನ್ನಷ್ಟೇ ಘೋಷಣೆ ಮಾಡಬೇಕಿದೆ.
ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಕೆಲ ಪ್ರಮುಖ ಆಟಗಾರರು ಟೂರ್ನಿಯಿಂದ ಹೊರಗುಳಿದಿದ್ದಾರೆ. ಸುರೇಶ್ ರೈನಾ, ಎಬಿ ಡಿವಿಲಿಯರ್ಸ್, ಕ್ರಿಸ್ ಗೈಲ್ ಮುಂತಾದ ಐಪಿಎಲ್‌ನ ದಿಗ್ಗಜ ಆಟಗಾರರ ಪ್ರದರ್ಶನವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ. ಆದರೆ ಈ ಬಾರಿ ಟೂರ್ನಿಯಲ್ಲಿ ಭಾಗವಹಿಸದಿರಲು ಟಿ20 ಕ್ರಿಕೆಟ್‌ನ ದಿಗ್ಗಜ ಆಟಗಾರ ಕ್ರಿಸ್ ಗೇಲ್ ನಿರ್ಧರಿಸಿದ್ದರೂ ತನ್ನ ಬೆಂಬಲ ಯಾರಿಗೆ ಎಂಬ ಮಾತನ್ನು ಹೇಳಿದ್ದಾರೆ. ಆರ್‌ಸಿಬಿ ತಂಡದ ಅಭಿಮಾನಿಗಳು ಕ್ರಿಸ್ ಗೇಲ್ ಮಾತಿನಿಂದ ನಿಜಕ್ಕೂ ಹರ್ಷಗೊಂಡಿದ್ದಾರೆ.

ಐಪಿಎಲ್‌ನಲ್ಲಿ ಮೂರು ತಂಡದ ಪರ ಆಡಿರುವ ಕ್ರಿಸ್ ಗೇಲ್
ಟಿ20 ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಕ್ರಿಸ್ ಗೇಲ್ ಐಪಿಎಲ್‌ನ ಪ್ರಮುಖ ಆಕರ್ಷಣೆಯಾಗಿದ್ದ ಆಟಗಾರ. 2009ರ ಆವೃತ್ತಿಯಿಂದ ಐಪಿಎಲ್‌ನ ಭಾಗವಾಗಿರುವ ಕ್ರಿಸ್ ಗೇಲ್ ಈವರೆಗೆ ಒಟ್ಟು ಮೂರು ತಂಡದ ಪರವಾಗಿ ಆಡಿದ್ದಾರೆ. 2009ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಮೂಲಕ ಐಪಿಎಲ್ ವೃತ್ತಿ ಜೀವನ ಆರಂಭಿಸಿದ ಗೇಲ್ ನಂತರ ಆರ್‌ಸಿಬಿ ಪರವಾಗಿ ಸುದೀರ್ಘ ಕಾಲ ಮಿಂಚಿದ್ದರು. ನಂತರ ಪಂಜಾಬ್ ಕಿಂಗ್ಸ್ ಪರವಾಗಿ ಕ್ರಿಸ್ ಗೇಲ್ ಕಣಕ್ಕಿಳಿದಿದ್ದರು.

ಮುಂದಿನ ಐಪಿಎಲ್‌ನಲ್ಲಿ ಯಾರಿಗೆ ಬೆಂಬಲ
ಇನ್ನು ಸಾಮಾಜಿಕ ಜಾಲತಾಣದಲ್ಲಿ ಕ್ರಿಸ್ ಗೇಲ್ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ಸೆಶನ್‌ನಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಈ ಬಾರಿಯ ಐಪಿಎಲ್‌ನಲ್ಲಿ ನಿಮ್ಮ ಬೆಂಬಲ ಯಾರಿಗೆ ಎಂದು ಕೇಳಿದ್ದಾರೆ. ಇದಕ್ಕೆ ಕ್ರಿಸ್ ಗೇಲ್ ಉತ್ತರವನ್ನು ನೀಡಿದ್ದಾರೆ. ಈ ಸಂದರ್ಬದಲ್ಲಿ ಎರಡು ತಂಡಗಳನ್ನು ಗೇಲ್ ಹೆಸರಿಸಿದ್ದಾರೆ. "ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಈ ಎರಡು ತಂಡಗಳ ಮಧ್ಯೆ ಯಾವುದಾದರೂ ಒಮದು ತಮಡ ಟೂರ್ನಿಯನ್ನು ಗೆಲ್ಲಲಿ" ಎಂದು ಕ್ರಿಸ್ ಗೇಲ್ ಹೇಳಿದ್ದಾರೆ. ಈ ಮೂಲಕ ತಮ್ಮ ಹಳೇಯ ತಂಡಕ್ಕೂ ಕೂಡ ಕ್ರಿಸ್ ಗೇಲ್ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಹರಾಜಿನಲ್ಲಿ ಭಾಗಿಯಾಗಿಲ್ಲ ಕ್ರಿಸ್ ಗೇಲ್
ಇನ್ನು ಈ ಬಾರಿಯ ಐಪಿಎಲ್ ಆವೃತ್ತಿಗೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆದಿದ್ದು ಈ ಹರಾಜಿನಲ್ಲಿ ಕ್ರಿಸ್ ಗೇಲ್ ಭಾಗಿಯಾಗಿರಲಿಲ್ಲ. ಹರಾಜು ಪ್ರಕ್ರಿಯೆಗೆ ತಮ್ಮ ಹೆಸರನ್ನು ಗೇಲ್ ನೊಂದಾಯಿಸಿರಲಿಲ್ಲ. ಈ ಮೂಲಕ ಟೂರ್ನಿಯಲ್ಲಿ ಕ್ರಿಸ್ ಗೇಲ್ ಭಾಗವಹಿಸುವುದಿಲ್ಲ ಎಂಬುದು ಈ ಮೊದಲೇ ಖಚಿತವಾಗಿದೆ. ಸ್ಪೋಟಕ ಪ್ರದರ್ಶನದ ಮೂಲಕ ಐಪಿಎಲ್‌ನಲ್ಲಿ ಕ್ರಿಕೆಟ್ ಅಭಿಮಾನಿಗಳ ಮನಸೂರೆಗೊಂಡಿರುವ ಕೆರೇಬೊಯನ್ ನಾಡಿನ ಈ ಆಟಗಾರನನ್ನು ಐಪಿಎಲ್ ಅಭಿಮಾನಿಗಳು ಕೂಡ ಮಿಸ್ ಮಾಡಿಕೊಳ್ಳಲಿದ್ದಾರೆ.

ಪಂಜಾಬ್ ಕಿಂಗ್ಸ್ ತಂಡಕ್ಕೆ ನೂತನ ನಾಯಕನ ನೇಮಕ
ಇನ್ನು ಪಂಜಾಬ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್ ಆವೃತ್ತಿಗೂ ಮುನ್ನ ನೂತನ ನಾಯಕನನ್ನು ಘೋಷಣೆ ಮಾಡಿದೆ. ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯನ್ನು ತೊರೆದಿರುವ ಕಾರಣ ಮಯಾಂಕ್ ಅಗರ್ವಾಲ್ ಅವರನ್ನು ತಂಡದ ನಾಯಕನನ್ನಾಗಿ ಘೋಷಣೆ ಮಾಡಿದೆ. ಆದರೆ ವಿರಾಟ್ ಕೊಹ್ಲಿ ನಾಯಕತ್ವ ತೊರೆದಿರುವ ಕಾರಣ ಆರ್‌ಸಿಬಿ ತಂಡ ಕೂಡ ಈ ಬಾರಿ ನೂತನ ನಾಯಕನನ್ನು ನೇಮಿಸಿಕೊಳ್ಳಬೇಕಿದ್ದು ನೂತನ ನಾಯಕ ಯಾರು ಎಂಬ ಪ್ರಶ್ನೆಗೆ ಇನ್ನೂ ಅಧಿಕೃತವಾಗಿ ಉತ್ತರ ದೊರೆತಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications