ಸಿಎಸ್‌ಕೆಯಲ್ಲಿ ಬ್ರಾವೋ ಸ್ಥಾನ ತುಂಬಲಿದ್ದಾರೆ ಕ್ರಿಸ್ ಜೋರ್ಡಾನ್ : ಬ್ರಾಥ್‌ವೈಟ್ ಭವಿಷ್ಯ

ಮುಂಬರುವ ವರ್ಷಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಡ್ವೇನ್ ಬ್ರಾವೋ ಮತ್ತು ಕ್ರಿಸ್ ಜೋರ್ಡಾನ್ ಅವರ ಸ್ಥಾನ ಬದಲಾಗಲಿದೆ. ಜೋರ್ಡಾನ್ ಅವರು ಪರಿಪೂರ್ಣವಾಗಿ ಬ್ರಾವೋ ಅವರ ಸ್ಥಾನ ಬರಿಸಲಿದ್ದಾರೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟಿಗ ಕಾರ್ಲೋಸ್ ಬ್ರಾಥ್‌ವೈಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿಎಸ್‌ಕೆ ತಂಡವನ್ನು ಆಲ್ ರೌಂಡರ್ ಸ್ಥಾನದಲ್ಲಿಟ್ಟುಕೊಂಡು ಮುನ್ನೆಡೆಸುವ ಆಟಗಾರರ ಅವಶ್ಯಕತೆ ಇದೆ. ಬ್ರಾವೋ 2011 ರಲ್ಲಿ ಸಿಎಸ್‌ಕೆ ಗೆ ಸೇರಿದಾಗಿನಿಂದ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ತಂಡದ ಒಟ್ಟಾರೆ ಯಶಸ್ಸಿಗೆ ಅತ್ಯುತ್ತಮವಾದ ಕೊಡುಗೆ ನೀಡಿದ್ದಾರೆ. ಆದ್ರೆ 38 ವರ್ಷದ ಬ್ರಾವೋ ನಂತರ ಸಿಎಸ್್ಕೆ ತಂಡಕ್ಕೆ ಉತ್ತಮ ಆಲ್ ರೌಂಡರ್ ಅವಶ್ಯಕತೆ ಉಂಟಾಗಲಿದೆ ಎಂದು ಹೇಳಿದ್ದಾರೆ.

ಸಿಎಸ್‌ಕೆ ತಂಡದ ದಂತಕಥೆಯ ಪಾತ್ರವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಜೋರ್ಡಾನ್ ಹೊಂದಿದ್ದಾರೆ. ಗುಣಮಟ್ಟದ ಡೆತ್ ಬೌಲರ್ ಎಂದು ಹೆಸರುವಾಸಿಯಾಗಿರುವ ಇಂಗ್ಲಿಷ್ ವೇಗಿ ಈ ಆವೃತ್ತಿಯಲ್ಲಿ ಉತ್ತಮ ಆರಂಭವನ್ನು ಹೊಂದಿಲ್ಲದಿದ್ದರೂ, ಭವಿಷ್ಯವನ್ನು ಪರಿಗಣಿಸಿ ಚೆನ್ನೈ ತಂಡ ಅವರಿಗೆ ಅವಕಾಶ ನೀಡಬೇಕು ಎಂದು ಬ್ರಾಥ್‌ವೈಟ್ ಹೇಳಿದ್ದಾರೆ.
ಜೋರ್ಡಾನ್ ಈ ಆವೃತ್ತಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ಇದುವರೆಗೆ ಕೇವಲ ಎರಡು ವಿಕೆಟ್‌ಗಳನ್ನು ಉರುಳಿಸಲು ಮಾತ್ರ ಯಶಸ್ವಿಯಾಗಿದ್ದಾರೆ. ಪ್ರತಿ ಓವರ್‌ಗೆ 10.52 ರನ್‌ಗಳ ದರದಲ್ಲಿ ದುಬಾರಿಯಾಗಿದ್ದಾರೆ. ಈವರೆಗೂ 28 ಐಪಿಎಲ್ ಮ್ಯಾಚ್‌ಗಳಲ್ಲಿ 27 ವಿಕೆಟ್ ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಯಾರಿಗೆ ಅವಕಾಶ ಲಭ್ಯವಾಗಲಿದೆ ಕಾದುನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications