ಐಪಿಎಲ್ 2022: ಟೂರ್ನಿ ಆರಂಭಕ್ಕೂ ಮುನ್ನವೇ ಸಿಎಸ್‌ಕೆಗೆ ಕೈಕೊಟ್ಟ ಕೋಟಿ ಕೋಟಿ ಪಡೆದ ಬಲಿಷ್ಠ ಆಟಗಾರ

ಮುಂಬರುವ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತು ಕಳೆದ ವರ್ಷಗಳಿಂದಲೇ ಚಟುವಟಿಕೆಗಳು ಆರಂಭವಾಗಿದ್ದು ಕುತೂಹಲಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಇದೇ ತಿಂಗಳ 12 ಹಾಗೂ 13ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಈ ಬಾರಿಯ ಟೂರ್ನಿಯ ಮೇಲಿನ ನಿರೀಕ್ಷೆ ಹಾಗೂ ಕುತೂಹಲವನ್ನು ದುಪ್ಪಟ್ಟು ಮಾಡಿತು. ಹಾಗೂ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಟ್ರೋಫಿಗಾಗಿ ಹತ್ತು ತಂಡಗಳು ಸೆಣಸಾಟ ನಡೆಸಲಿರುವುದು ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಇನ್ನು ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ಪರ ಕಳೆದ ಆವೃತ್ತಿಗಳಲ್ಲಿ ಕಣಕ್ಕಿಳಿದಿದ್ದ ಆಟಗಾರರಾದ ದೀಪಕ್ ಚಹರ್, ಡ್ವೇನ್ ಬ್ರಾವೊ ಮತ್ತು ರಾಬಿನ್ ಉತ್ತಪ್ಪ ಅವರನ್ನು ಖರೀದಿಸಿ ಮರಳಿ ತಂಡ ಸೇರಿಸಿಕೊಳ್ಳುವುದರಲ್ಲಿ ಯಶಸ್ವಿಯಾಯಿತು. ಅದರಲ್ಲಿಯೂ ದೀಪಕ್ ಚಹರ್ ಮೇಲೆ ಬರೋಬ್ಬರಿ 14 ಕೋಟಿ ಹೂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗಳ ಜತೆ ಪೈಪೋಟಿಯನ್ನು ನಡೆಸಿ ದೀಪಕ್ ಚಹರ್ ಅವರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಹೀಗೆ ದೀಪಕ್ ಚಹರ್ ಮೇಲೆ 14 ಕೋಟಿ ಹೂಡಿಕೆ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಟಗಾರನೊಬ್ಬನ ಮೇಲೆ ಹರಾಜಿನಲ್ಲಿ 10 ಕೋಟಿಗೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದಂತಾಯಿತು. ಇನ್ನು ಇಷ್ಟು ದೊಡ್ಡ ಮಟ್ಟದ ಬೇಡಿಕೆಯನ್ನು ಹೊಂದಿ ಕೊನೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮರಳಿ ಸೇರ್ಪಡೆಗೊಂಡ ದೀಪಕ್ ಚಹರ್ ಈ ಬಾರಿಯೂ ಕೂಡ ಎಂಎಸ್ ಧೋನಿ ನಾಯಕತ್ವದ ತಂಡದಡಿಯಲ್ಲಿ ಕಣಕ್ಕಿಳಿಯಲಿದ್ದು ತಾವು ಪಡೆದ ದೊಡ್ಡ ಮೊತ್ತಕ್ಕೆ ತಕ್ಕಂಥ ಪ್ರದರ್ಶನವನ್ನು ನೀಡಲಿದ್ದಾರೆ ಎಂಬ ನಿರೀಕ್ಷೆಗಳು ಕೂಡ ಇದ್ದವು. ಆದರೆ, ಈ ನಿರೀಕ್ಷೆಗಳೆಲ್ಲ ಇದೀಗ ಹುಸಿಯಾಗುವ ಹಂತದಲ್ಲಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ ದೀಪಕ್ ಚಹರ್ ಈ ಕೆಳಕಂಡ ಕಾರಣಗಳಿಂದ ಟೂರ್ನಿಯ ಕೆಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎನ್ನಲಾಗುತ್ತಿದೆ.

ಭುಜದ ಗಾಯದಿಂದ ಬಳಲುತ್ತಿರುವ ದೀಪಕ್ ಚಹರ್
ಕಳೆದ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟಿ ಟ್ವೆಂಟಿ ಸರಣಿಯಲ್ಲಿ ಭಾಗವಹಿಸಿದ್ದ ದೀಪಕ್ ಚಹರ್ ವೆಸ್ಟ್ ಇಂಡೀಸ್ ತಂಡದ ವಿರುದ್ಧದ ಅಂತಿಮ ಟಿ ಟ್ವೆಂಟಿ ಪಂದ್ಯದ ವೇಳೆ ಭುಜದ ಗಾಯದ ಸಮಸ್ಯೆಗೊಳಗಾದರು. ಹೀಗೆ ಗಾಯದ ಸಮಸ್ಯೆಗೆ ಒಳಗಾದ ದೀಪಕ್ ಚಹರ್ ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೂ ಅಲಭ್ಯರಾಗಿದ್ದರು.

ಐಪಿಎಲ್ ಆರಂಭದ ಪಂದ್ಯಗಳಿಗೆ ದೀಪಕ್ ಚಹರ್ ಅಲಭ್ಯ
ಸದ್ಯ ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿರುವ ದೀಪಕ್ ಚಹರ್ ಚೇತರಿಸಿಕೊಳ್ಳಲು ಹೆಚ್ಚು ದಿನಗಳ ಅವಶ್ಯಕತೆ ಇರುವ ಕಾರಣದಿಂದಾಗಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಒಂದುವೇಳೆ ಗಾಯದ ತೀವ್ರತೆ ಹೆಚ್ಚಾಗಿ ದೀಪಕ್ ಚಹಾರ್ ಚೇತರಿಸಿಕೊಳ್ಳುವುದು ತಡವಾದರೆ ಈ ಬಾರಿ ಸಂಪೂರ್ಣ ಐಪಿಎಲ್ ಟೂರ್ನಿಗೆ ದೀಪಕ್ ಚಹರ್ ಅಲಭ್ಯರಾಗಲಿದ್ದಾರೆ ಎಂಬ ಮಾತುಗಳು ಕೂಡ ಹರಿದಾಡುತ್ತಿವೆ. ಸದ್ಯ ಈ ಆತಂಕ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಪಾಳಯದಲ್ಲಿ ಮೂಡಿದ್ದು, ತಮ್ಮ ತಂಡದ ಖಾಯಂ ಆಟಗಾರನ ಅಲಭ್ಯತೆ ಟೂರ್ನಿಯಲ್ಲಿ ತಂಡಕ್ಕೆ ಹಿನ್ನಡೆಯನ್ನುಂಟುಮಾಡುವ ಸಾಧ್ಯತೆಗಳಿವೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ
ರವೀಂದ್ರ ಜಡೇಜಾ, ಎಂಎಸ್ ಧೋನಿ, ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್, ಡ್ವೇನ್ ಬ್ರಾವೋ, ಅಂಬಟಿ ರಾಯುಡು, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಸುಭ್ರಾಂಶು ಸೇನಾಪತಿ, ಆಡಮ್ ಮಿಲ್ನೆ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿ ಹರಿ ನಿಶಾಂತ್, ಎನ್ ಜಗದೀಶ್, ಭಗದೀಸನ್, ಭಗದೀಶ್ ವರ್ದನ್, ರಾಬಿನ್ ಉತ್ತಪ್ಪ, ದೀಪಕ್ ಚಹಾರ್, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಕೆಎಂ ಆಸಿಫ್, ಶಿವಂ ದುಬೆ, ಮಹೇಶ್ ತೀಕ್ಷಣ, ರಾಜವರ್ಧನ್ ಹಂಗರ್ಗೇಕರ್, ಸಮರ್ಜಿತ್ ಸಿಂಗ್, ಡೆವೊನ್ ಕಾನ್ವೇ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications