Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2022, CSK vs KKR: ಈ ಮೈಲಿಗಲ್ಲುಗಳತ್ತ ಕಣ್ಣಿಟ್ಟಿದ್ದಾರೆ ಬ್ರಾವೋ, ಧೋನಿ, ರಸೆಲ್

IPL 2022 CSK vs KKR: Players records, Key stats and players to watch out for

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇಂದಿನಿಂದ ( ಮಾರ್ಚ್ 26 ) ಆರಂಭಗೊಳ್ಳುತ್ತಿದ್ದು, ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಳೆದ ಬಾರಿಯ ಐಪಿಎಲ್ ಆವೃತ್ತಿಯ ರನ್ನರ್ ಅಪ್ ಆಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಣಕ್ಕಿಳಿಯುತ್ತಿವೆ. ಇತ್ತಂಡಗಳ ನಡುವಿನ ಈ ಪಂದ್ಯ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಪಂದ್ಯವು ಸಂಜೆ 7.30ಕ್ಕೆ ಆರಂಭಗೊಳ್ಳಲಿದೆ.

ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಈ ಎರಡೂ ತಂಡಗಳು ನೂತನ ನಾಯಕರನ್ನು ಪಡೆದಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರವೀಂದ್ರ ಜಡೇಜಾ ನಾಯಕನಾಗಿ ಮುನ್ನಡೆಸಿದರೆ, ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಶ್ರೇಯಸ್ ಅಯ್ಯರ್ ನೂತನ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಐದನೇ ಟ್ರೋಫಿ ಗೆಲ್ಲುವತ್ತ ಕಣ್ಣಿಟ್ಟಿದ್ದರೆ, ಕಳೆದ ಬಾರಿಯ ಟೂರ್ನಿಯಲ್ಲಿ ಟ್ರೋಫಿ ಎತ್ತಿ ಹಿಡಿಯುವ ಅವಕಾಶವನ್ನು ಅಂತಿಮ ಹಂತದಲ್ಲಿ ಕೈ ತಪ್ಪಿಸಿಕೊಂಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಈ ಬಾರಿಯ ಟೂರ್ನಿಯಲ್ಲಿ ತನ್ನ ಮೂರನೇ ಟ್ರೋಫಿಯನ್ನು ಗೆಲ್ಲುವ ಗುರಿಯನ್ನು ಹೊಂದಿದೆ.

ಹೀಗೆ ಟ್ರೋಫಿಯನ್ನು ಗೆಲ್ಲುವುದರ ಮೂಲಕ ದಾಖಲೆ ನಿರ್ಮಿಸುವತ್ತ ಕಣ್ಣಿಟ್ಟಿರುವ ಇತ್ತಂಡಗಳ ಕೆಲ ಆಟಗಾರರು ಎರಡೂ ತಂಡಗಳ ನಡುವೆ ನಡೆಯಲಿರುವ ಇಂದಿನ ಪಂದ್ಯದಲ್ಲಿ ಈ ಕೆಳಕಂಡ ಮೈಲಿಗಲ್ಲುಗಳನ್ನು ದಾಖಲೆಗಳನ್ನು ನಿರ್ಮಿಸುವ ಸಾಧ್ಯತೆಗಳಿವೆ.

• ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಇಲ್ಲಿಯವರೆಗೂ ಐಪಿಎಲ್ ಪಂದ್ಯಗಳಲ್ಲಿ ಒಟ್ಟು 196 ಬೌಂಡರಿಗಳನ್ನು ಬಾರಿಸಿದ್ದು, 200 ಬೌಂಡರಿ ಮೈಲುಗಲ್ಲನ್ನು ಮುಟ್ಟಲು ಈ ಪಂದ್ಯದಲ್ಲಿ 4 ಬೌಂಡರಿ ಬಾರಿಸಬೇಕಾದ ಅಗತ್ಯತೆಯಿದೆ.

• ಅಜಿಂಕ್ಯ ರಹಾನೆ ಇಲ್ಲಿಯವರೆಗೂ ಒಟ್ಟು 3941 ಐಪಿಎಲ್ ರನ್ ಕಲೆಹಾಕಿದ್ದು 4000 ಐಪಿಎಲ್ ರನ್ ಮೈಲುಗಲ್ಲನ್ನು ಮುಟ್ಟಲು ಈ ಪಂದ್ಯದಲ್ಲಿ 59 ರನ್ ಬಾರಿಸಬೇಕಿದೆ.

• ಐಪಿಎಲ್ ಇತಿಹಾಸದಲ್ಲಿ ಒಟ್ಟು 143 ಸಿಕ್ಸರ್ ಬಾರಿಸಿರುವ ಆ್ಯಂಡ್ರೆ ರಸೆಲ್ 150 ಸಿಕ್ಸರ್ ಮೈಲಿಗಲ್ಲನ್ನು ಮುಟ್ಟಲು 7 ಸಿಕ್ಸರ್ ಬಾರಿಸಬೇಕಾದ ಅಗತ್ಯತೆಯಿದೆ.

• ಶ್ರೇಯಸ್ ಅಯ್ಯರ್ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 4409 ರನ್ ಕಲೆಹಾಕಿದ್ದು, 4500 ರನ್ ಮೈಲುಗಲ್ಲನ್ನು ಮುಟ್ಟಲು 91 ರನ್ ಗಳಿಸಬೇಕಿದೆ.

• ಡ್ವೇನ್ ಬ್ರಾವೋ ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೂ ಚೆನ್ನೈ ಸೂಪರ್ ಕಿಂಗ್ಸ್ ಪರ 47 ಸಿಕ್ಸರ್ ಬಾರಿಸಿದ್ದು 50 ಸಿಕ್ಸರ್ ಮೈಲುಗಲ್ಲನ್ನು ಮುಟ್ಟಲು 3 ಸಿಕ್ಸರ್ ಬಾರಿಸಬೇಕಿದೆ.

• ಎಂಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ಒಟ್ಟು 292 ಬೌಂಡರಿಗಳನ್ನು ಬಾರಿಸಿದ್ದು ಈ ಪಂದ್ಯದಲ್ಲಿ 8 ಬೌಂಡರಿ ಬಾರಿಸಿ 300 ಐಪಿಎಲ್ ಬೌಂಡರಿ ಬಾರಿಸಿದ ಆಟಗಾರ ಎಂಬ ಮೈಲಿಗಲ್ಲನ್ನು ಮುಟ್ಟುವ ಸಾಧ್ಯತೆಗಳಿವೆ.

• ಅಂಬಟಿ ರಾಯುಡು ಐಪಿಎಲ್ ಇತಿಹಾಸದಲ್ಲಿ ಒಟ್ಟು 149 ಸಿಕ್ಸರ್ ಬಾರಿಸಿದ್ದು 150 ಸಿಕ್ಸರ್ ಮೈಲಿಗಲ್ಲನ್ನು ಮುಟ್ಟಲು 1 ಸಿಕ್ಸರ್ ಬಾರಿಸದ ಬೇಕಾದ ಅವಶ್ಯಕತೆಯಿದೆ.

Story first published: Saturday, March 26, 2022, 10:48 [IST]
Other articles published on Mar 26, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+