ಧೋನಿ ಹೇಳಿದ ಆ ಮಾತುಗಳನ್ನು ಯಾವಾಗಲೂ ಕೇಳಿಸಿಕೊಳ್ಳುತ್ತಿರಬೇಕು ಎಂದ ಸಿಎಸ್‌ಕೆ ಯುವ ಆಟಗಾರ

ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದರೂ ಅದಕ್ಕೆ ಪೂರಕವಾಗಿ ಪ್ರದರ್ಶನ ನೀಡಲು ಸಾಧ್ಯವಾಗದ ಸಿಎಸ್‌ಕೆ 9ನೇ ಸ್ಥಾನದೊಂದಿಗೆ ಟೂರ್ನಿಯನ್ನು ಅಂತ್ಯಗೊಳಿಸಿತು. ಲೀಗ್ ಹಂತದ ಅಂತೊಮ ಪಂದ್ಯದಲ್ಲಿ ನಾಯಕ ಧೋನಿ ಮುಂದಿನ ಆವೃತ್ತಿಯಲ್ಲಿ ಮತ್ತೆ ಕಣಕ್ಕಿಳಿಯಲಿದ್ದೇನೆ ಎನ್ನುವ ಮೂಲಕ ಅಭಿಮಾನಿಗಳ ಮೊಗದಲ್ಲಿ ಮತ್ತೊಮ್ಮೆ ನಗು ಮೂಡಿಸುವಲ್ಲಿ ಯಶಸ್ವಿಯಾದರು. ಅಲ್ಲದೆ ತಂಡ ಬಲಿಷ್ಠವಾಗಿ ಬರುವ ಸುಳಿವನ್ನು ಕೂಡ ಮಾಹಿ ನೀಡಿದ್ದಾರೆ.
ಇನ್ನು ಈ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿದ ಎಂಎಸ್ ಧೋನಿ ಬಗ್ಗೆ ಮಾತನಾಡಿದ ಯುವ ವೇಗದ ಬೌಲರ್ ಸಿಮರ್ಜೀತ್ ಸಿಂಗ್ ಮೈದಾನದಲ್ಲಿ ಧೋನಿ ನೀಡಿದ ಬೆಂಬಲವನ್ನು ಸ್ಮರಿಸಿದ್ದಾರೆ. ಮೊದಲ ಪಂದ್ಯದಲ್ಲಿ ಆಡುವಾದ ತುಂಬಾ ಆತಂಕಗೊಂಡಿದ್ದ ತನ್ನನ್ನು ಧೋನಿ ಆ ಆತಂಕದಿಂದ ಹೊರಬರುವಂತೆ ಮಾಡಿದರು ಎಂದಿದ್ದಾರೆ.

ಒತ್ತಡದ ಸಂದರ್ಭದಲ್ಲಿ ಬೆಂಬಲ
"ಧೋನಿ ಅವರಿಂದ ನಾನು ಒತ್ತಡದ ಸಂದರ್ಭದಲ್ಲಿ ಹೇಗೆ ಶಾಂತವಾಗಿರುವುದು ಎಂಬುದನ್ನು ಕಲಿತುಕೊಂಡಿದ್ದೇನೆ. ಟಿವಿಯಲ್ಲಿ ಅವರನ್ನು ನೋಡುವುದಕ್ಕಿಂತಲೂ ಪಂದ್ಯದಲ್ಲಿ ಒಂದು ಓವರ್ ಮುಗಿಸಿದ ಬಳಿಕ ಏನಾಗುತ್ತದೆ ಎಂಬುದು ತಿಳಿಯುವುದಿಲ್ಲ. ಅವರು ಯಾವಾಗಲೂ ನನ್ನನ್ನು ಉತ್ತೇಜಿಸುತ್ತಿದ್ದರು. ಉತ್ತಮವಾಗಿ ಬೌಲಿಂಗ್ ನಡೆಸುವಂತೆ ಬೆಂಬಲ ನೀಡುತ್ತಿದ್ದರು" ಎಂದಿದ್ದಾರೆ ಸಿಮರ್ಜೀತ್ ಸಿಂಗ್.

ಆ ಮಾತನ್ನು ಯಾವಾಗಲೂ ಕೇಳಿಸಿಕೊಳ್ಳಬೇಕು
ಇನ್ನು ಈ ಸಂದರ್ಭದಲ್ಲಿ ಸಿಮರ್ಜೀತ್ ಸಿಂಗ್ ಎಂಎಸ್ ಧೋನಿ ಅವರಿಂದ ತಾನು ಕೇಳಿಸಿಕೊಂಡ ಹೆಮ್ಮೆಯ ವಾಕ್ಯವನ್ನು ಹಂಚಿಕೊಂಡಿದ್ದಾರೆ ಸಿಎಸ್‌ಕೆ ವೇಗಿ. "ಮಾಹಿ ಭಾಯಿ ನನ್ನಲ್ಲಿ ನಾನು ಉತ್ತವಾಗಿ ಬೌಲಿಂಗ್ ನಡೆಸುತ್ತೇನೆ ಎಂದಿದ್ದರು. ಈ ಮಾತನ್ನು ನಾನು ಯಾವಾಗಲೂ ಕೇಳಿಸಿಕೊಳ್ಳಲು ಬಯಸುತ್ತೇನೆ" ಎಂದಿದ್ದಾರೆ ಯುವ ವೇಗದ ಬೌಲರ್.

ಮೆಗಾ ಆಕ್ಷನ್‌ನಲ್ಲಿ ಸಿಎಸ್‌ಕೆ ಪಾಲಾಗಿದ್ದ ಸಿಂಗ್
ಸಿಮರ್ಜೀತ್ ಆರು ಪಂದ್ಯಗಳನ್ನು ಆಡಿದ್ದು ನಾಲ್ಕು ವಿಕೆಟ್ ಸಂಪಾದಿಸಿದ್ದಾರೆ. 7.67ರ ಎಕಾನಮಿಯಲ್ಲಿ ಬೌಲಿಂಗ್ ನಡೆಸಿದ ಅವರ ಅತ್ಯುತ್ತಮ ಬೌಲಿಂಗ್ ದಾಳಿ 2/27. ಇದಕ್ಕೂ ಹಿಂದಿನ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದ ಸಿಮರ್ಜೀತ್ ಸಿಂಗ್ ನಂತರ ಮೆಗಾ ಆಕ್ಷನ್‌ನಲ್ಲಿ 20 ಲಕ್ಷ ರೂಪಾಯಿಗೆ ಸಿಎಸ್‌ಕೆ ಪಾಲಾಗಿದ್ದರು.

ಹೈದರಾಬಾದ್ ವಿರುದ್ಧ ಆಡಿದ್ದು ವಿಭಿನ್ನ ಅನುಭವ
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಿದ್ದ ಪಂದ್ಯದಲ್ಲಿ ನಾನು ನರ್ವಸ್ ಆಗಿರಲಿಲ್ಲ ಎಂದು ಎಲ್ಲರಲ್ಲೂ ಹೇಳಿಕೊಂಡಿದ್ದೆ. ಆದರೆ ನಿಜವಾಗಿ ಹೇಳಬೇಕೆಂದರೆ ನಾನು ಆ ಪಂದ್ಯದಲ್ಲಿ ತುಂಬಾ ನರ್ವಸ್ ಆಗಿದ್ದೆ. ಮೊದಲ ಬಾರಿಗೆ ಸ್ಟೇಡಿಯಂಗೆ ಕಾಲಿಟ್ಟಾಗ ತುಂಬಿದ ಮೈದಾನದಲ್ಲಿ ವಿಭಿನ್ನ ಅನುಭವವನ್ನು ಪಡೆದುಕೊಂಡಿದ್ದೆ. ಆಡುವ ಬಳಗದಲ್ಲಿ ಇರುವುದಕ್ಕೂ ಬೆಂಚ್ ಕಾಯುವುದಕ್ಕೂ ಸಾಕಷ್ಟು ಭಿನ್ನತೆಗಳು ಇದೆ. ಹೊರಗಡೆಯಿಂದ ನನಗೆ ಯಾವುದೇ ಒತ್ತಡಗಳೂ ಇರಲಿಲ್ಲ" ಎಂದಿದ್ದಾರೆ ಸಿಮರ್ಜೀತ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications