Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020 : ಡೆಲ್ಲಿ ನಾಯಕ ಪಂತ್ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ ವ್ಯಾಟ್ಸನ್

 S watson

ಮುಂಬೈನ ವಾಂಖಡೇ ಮೈದಾನದಲ್ಲಿ ಶುಕ್ರವಾರ ಡೆಲ್ಲಿ ಮತ್ತು ರಾಜಸ್ಥಾನ ಪಂದ್ಯದ ಕೊನೆಯ ಓವರ್‌ ನಲ್ಲಿ ನಡೆದ ಘಟನೆ ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಅಂತಿಮವಾಗಿ ಈ ಪಂದ್ಯದಲ್ಲಿ ಡೆಲ್ಲಿ ತಂಡ 15 ರನ್‌ಗಳಿಂದ ಸೋಲು ಅನುಭವಿಸುವಂತಾಗಿದೆ. ಆದ್ರೇ ಡೆಲ್ಲಿ ತಂಡದ ಕೋಚ್‌ ಶೇನ್ ವ್ಯಾಟ್ಸನ್, ಕೊನೆಯ ಓವರ್‌ನಲ್ಲಿ ನಾಯಕ ರಿಷಬ್ ಪಂತ್ ಅವರ ವರ್ತನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊನೆಯ ಓವರ್‌ ನಲ್ಲಿ ಡೆಲ್ಲಿ ತಂಡದ ಗೆಲುವಿಗೆ 36 ರನ್‌ಗಳ ಅವಶ್ಯಕತೆ ಇತ್ತು. ಈ ಸಂದರ್ಭದಲ್ಲಿ ರೋವ್‌ಮನ್ ಪೊವೆಲ್ ಮೊದಲ ಮೂರು ಎಸೆತಗಳಲ್ಲಿ ಮೂರು ಸಿಕ್ಸರ್‌ಗಳನ್ನು ಸಿಡಿಸಿದರು, ಆದರೆ ಓವರ್‌ನ ಮೂರನೇ ಎಸೆತವು ಫುಲ್ ಟಾಸ್ ಆಗಿತ್ತು. ಅತಿ ಎತ್ತರಕ್ಕೆ ಇರುವ ಕಾರಣ ನೋ-ಬಾಲ್ ನೀಡಬೇಕು ಎಂದು ಅಂಪೈರ್್ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ತಕಾರಾರು ಮಾಡಿದರು.

ಅಂಪೈರ್ ಸ್ಪಂದಿಸದೇ ಇದ್ದಾಗ ನಾಯಕ ಪಂತ್ ಓವರ್‌ನ ಅರ್ಧದಾರಿಯಲ್ಲೇ, ತನ್ನ ಬ್ಯಾಟರ್‌ಗಳನ್ನು ಹಿಂತಿರುಗುವಂತೆ ಸನ್ನೆ ಮಾಡಿದರು. ಜೊತೆಗೆ ತಂಡದ ಬ್ಯಾಟಿಂಗ್ ಕೋಚ್ ಪ್ರವೀಣ್ ಆಮ್ರೆ ಅಂಪೈರ್‌ಗಳಿಗೆ ನೋಬಾಲ್ ನೀಡುವಂತೆ ತಿಳಿಹೇಳಲು ಮೈದಾನಕ್ಕೆ ತೆರಳಿದರು, ಹೀಗಾಗಿ ಕೆಲ ನಿಮಿಷ ಗಳ ಕಾಲ ಪಂದ್ಯವನ್ನು ನಿಲ್ಲಿಸಿರುವುದು ಗೊಂದಲಕ್ಕೆ ಕಾರಣವಾಯಿತು.

ಪಂದ್ಯಾವಳಿಯ ನಂತರ ತಂಡದ ಕೊಚ್ ಶೇನ್ ವ್ಯಾಟ್ಸನ್, ನಾಯಕ ರಿಷಬ್ ಪಂತ್ ಅವರ ವರ್ತನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಆ ಕೊನೆಯ ಓವರ್‌ನಲ್ಲಿ ಉಂಟಾಗಿರುವ ಗೊಂದಲ ತುಂಬಾ ನಿರಾಶಾದಾಯಕವಾಗಿತ್ತು. ಘಟನೆಗೆ ಕಾರಣ ಏನೇ ಇರಲಿ ಘಟನೆಯ ಪರವಾಗಿ ನಿಲ್ಲುವುದು ಉತ್ತಮ ಬೆಳವಣಿಗೆಯಲ್ಲ" ಎಂದು ಹೇಳಿದ್ದಾರೆ.

R pant

ಮುಂದುವರೆದು ಮಾತನಾಡಿದ ಅವರು, ಅಂಪೈರ್ ನಿರ್ಧಾರ ಸರಿಯಾಗಿರಲಿ ಅಥವಾ ತಪ್ಪಾಗಿರಲಿ ಆ ತೀರ್ಪನ್ನು ಒಪ್ಪಿಕೊಳ್ಳುವುದು ಆಟದ ನಿಯಮವಾಗಿದೆ. ಮ್ಯಾಚ್ ನ ಅರ್ಧದಲ್ಲಿ ಬ್ಯಾಟಿಂಗ್ ಕೋಚ್ ಪ್ರವೀಣ್ ಆಮ್ರೆ ಮೈದಾನಕ್ಕಿಳಿದಿರುವುದು ತಪ್ಪು, ಯಾರೇ ಆಗಲಿ ಆಟದ ಮಧ್ಯದಲ್ಲಿ ಮೈದಾನಕ್ಕೆ ಹೋಗಬಾರದು, ಹಾಗೇ ಹೋಗುವುದು ತಪ್ಪು. ಮೊದಲು ನಾವು ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕಿದೆ. ಈ ಘಟನೆ ಉತ್ತಮ ಬೆಳವಣಿಗೆಯಲ್ಲ ಎಂದು ವ್ಯಾಟ್ಸನ್ ಹೇಳಿದ್ದಾರೆ.

ಅಂಪೈರ್ ನಿರ್ಧಾರವು ಒಳ್ಳೆಯದಾಗಿರಲಿ ಅಥವಾ ಒಳ್ಳೆಯದಾಗಿರದಿರಲಿ ನೀವು ಅದನ್ನು ಒಪ್ಪಿಕೊಳ್ಳಬೇಕು. ಆದ್ದರಿಂದ ಕೊನೆಯಲ್ಲಿ ನಾವು ಆಟವನ್ನು ಮುಂದುವರಿಸಿದೆವು. ಈ ಸಂದರ್ಭದಲ್ಲಿ ನಾನು ಪಂತ್ ಅವರಿಗೆ ಕಿವಿ ಮಾತು ಹೇಳಲು ಯತ್ನಿಸಿದೆ. ಅಂಪೈರ್‌ನ ನಿರ್ಧಾರವನ್ನು ಒಪ್ಪಿಕೊಳ್ಳಬೇಕು ಎಂದು ಯಾವಾಗಲೂ ಯುವಕರಿಗೆ ಕಲಿಸಬೇಕಾಗುತ್ತದೆ ಅದನ್ನು ನಾವು ಮಾಡಿದೇವು ಎಂದು ಹೇಳಿದರು.

ಪಂತ್ ಅವರ ವರ್ತನೆ ಮತ್ತು ಕೋಚ್ ಮೈದಾನಕ್ಕಿಳಿದು ಸೃಷ್ಠಿಸಿದ ಗೊಂದಲದಿಂದ ಪಂದ್ಯವನ್ನು ನಿಲ್ಲಿಸಲಾಗಿತ್ತು. ನಂತರದಲ್ಲಿಪುನಃ ಪಂದ್ಯವನ್ನು ಆರಂಭಿಸಲಾಯಿತು. ಮೊದಲ ಮೂರು ಎಸೆತಗಳಲ್ಲಿ ಮೂರು ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದ ಮೆಕಾಯ್, ತಮ್ಮ ಮುಂದಿನ ಮೂರು ಎಸೆತಗಳಲ್ಲಿ ಕೇವಲ ಎರಡು ರನ್ ಬಿಟ್ಟುಕೊಟ್ಟರು.

ಕಳೆದ ಮೂರು ಎಸೆತಗಳಲ್ಲಿ ಆಟವು ಸ್ಥಗಿತಗೊಂಡಿತ್ತು. ಅಂತಹ ಆಟದ ದೊಡ್ಡ ನಿಲುಗಡೆಯಾದಾಗ, ಅದು ಆವೇಗವನ್ನು ಬದಲಾಯಿಸುತ್ತದೆ ಎಂಬುದರಲ್ಲಿ ಯಾವುದೇ ಪ್ರಶ್ನೆಯಿಲ್ಲ. ಇದು ಒಬೆಡ್ ಮೆಕಾಯ್‌ಗೆ ಅವರಿಗೆ ಆಟದ ಮೇಲೆ ಮತ್ತಷ್ಟು ಹಿಡಿತ ಸಾಧಿಸಲು ಸಮಯ ನೀಡಿತು. ಆಟವು ಸ್ಥಗಿತಗೊಂಡ ಹಿನ್ನಲೆಯಲ್ಲಿ ರಾಜಸ್ಥಾನ ರಾಯಲ್ಸ್‌ನ ಗೆಲುವಿಗೆ ಕಾರಣವಾಯ್ತು ,ಇದು ದುರದೃಷ್ಟಕರ ಸಂಗತಿಯಾಗಿದೆ ಎಂದು ವ್ಯಾಟ್ಸನ್ ಬೇಸರ ವ್ಯಕ್ತ ಪಡಿಸಿದ್ದಾರೆ.

Story first published: Saturday, April 23, 2022, 16:47 [IST]
Other articles published on Apr 23, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+