
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರದಂದು ಐಎಪಿಲ್ 34 ನೇ ಪಂದ್ಯ ರಾಜಸ್ಥಾನ ರಾಯಲ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ಸೆಣಸಾಡಲಿವೆ. ಉಭಯ ತಂಡಗಳು ಕಳೆದ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿವೆ. ಕಳೆದ ಪಂದ್ಯಗಳಲ್ಲಿ ಎರಡು ತಂಡವು ವಿಜಯಶಾಲಿಯಾಗಿದ್ದು, ಈ ಪಂದ್ಯದಲ್ಲಿ ವಿಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದು ತಂಡದ ಪ್ರದರ್ಶನದ ಮೇಲೆ ಅವಲಂಭಿತವಾಗಿದೆ.
ಡೆಲ್ಲಿ ತಂಡದ ಶಿಬಿರದಲ್ಲಿ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಆದಾಗ್ಯೂ, ಬುಧವಾರ ನಡೆದ ಪಂಜಾಬ್ ಕಿಂಗ್ಸ್್ನ ವಿರುದ್ಧದ ಪಂದ್ಯದಲ್ಲಿ ಒಂಬತ್ತು ವಿಕೆಟ್‌ಗಳ ಜಯವನ್ನು ಸಾಧಿಸಿತ್ತು. ಆರು ಪಂದ್ಯಗಳನ್ನಾಡಿದ ಡೆಲ್ಲಿ ಮೂರು ಪಂದ್ಯಗಳಲ್ಲಿ ಜಯಗಳಿಸುವ ಮೂಲಕ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ರಾಜಸ್ಥಾನ ತಂಡವು ಆರು ಪಂದ್ಯಗಳನ್ನಾಡಿ ನಾಲ್ಕು ಪಂದ್ಯಗಳಲ್ಲಿ ಜಯಗಳಿಸಿ ಎಂಟು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಡೆಲ್ಲಿ ತಂಡ ಏ. 18ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಏಳು ರನ್‌ಗಳಿಂದ ಜಯಗಳಿಸಿದ್ದರು.
ವಾಂಖೆಡೆ ಕ್ರೀಡಾಂಗಣವು ಬೌಂಡರಿ ವಿಚಾರದಲ್ಲಿ ಅತಿ ಚಿಕ್ಕದಾಗಿರುವುದರಿಂದ ಬ್ಯಾಟಿಂಗ್ ಪಿಚ್ ಆಗಿದ್ದು, ಸಾಮಾನ್ಯವಾಗಿ ಹೆಚ್ಚಿನ ರನ್್ಗಳಾಗುತ್ತವೆ. ಆದರೂ ಈ ಮೈದಾನದಲ್ಲಿ ವೇಗಿ ಮತ್ತು ಸ್ಪಿನ್ನರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಬಹುದು. ಹೀಗಾಗಿ, ಇಂದು ರಾತ್ರಿ ನಡೆಯುವ ಡಿಸಿ ಮತ್ತು ಆರ್‌ಆರ್ ನಡುವಿನ ಪಂದ್ಯದಲ್ಲಿ ಹೆಚ್ಚು ವಿಕೆಟ್‌ಗಳನ್ನು ಪಡೆಯುವ ಮೂವರು ಬೌಲರ್‌ಗಳನ್ನು ನೋಡೋಣ.

ರಾಜಸ್ಥಾನ ರಾಯಲ್ಸ್ ಟ್ರೆಂಟ್ ಬೌಲ್ಟ್:
ಎಡಗೈ ವೇಗಿ ವಿಷಯಕ್ಕೆ ಬಂದರೆ, ಪವರ್‌ಪ್ಲೇ ಓವರ್‌ಗಳಲ್ಲಿ ಬೌಲ್ಟ್ ಅವರು ತಂಡದ ಗೆಲುವಿಗೆ ಅತಿ ಅವಶ್ಯಕವಾದ ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಪವರ್‌ಪ್ಲೇ ಓವರ್‌ಗಳಲ್ಲಿ ಅತ್ಯುತ್ತಮ ಲಯದಲ್ಲಿ ಬೌಲಿಂಗ್ ಮಾಡುತ್ತಿರುವ ಬೌಲ್ಟ್ ಉತ್ತಮ ಪ್ರದರ್ಶನ ನೀಡಿದ್ದಲ್ಲದೇ, ಕಳೆದ ಐದು ಪಂದ್ಯಗಳಲ್ಲಿ ಏಳು ವಿಕೆಟ್‌ಗಳನ್ನು ಪಡೆದಿದ್ದಾರೆ.
ನ್ಯೂಜಿಲೆಂಡ್ ತಂಡದ ಬೌಲ್ಟ್, ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್ ರಾಹುಲ್ ಅವರನ್ನು ಇನ್‌ಸ್ವಿಂಗರ್‌ನೊಂದಿಗೆ ಬೋಲ್ಡ್ ಮಾಡಿ ಪೆವಿಲಿಯನ್್ಗೆ ಕಳುಹಿಸಿದ್ದರು. ಅತ್ಯುತ್ತಮವಾಗಿ ಇನ್ಸ್ವಿಂಗ್ ಮಾಡುವ ಬೋಲ್ಟ್ ಅವರು ಟಿ20ಯಲ್ಲಿ ವಾರ್ನರ್ ಅವರನ್ನು ಎರಡು ಬಾರಿ ಔಟ್ ಮಾಡಿದ್ದಾರೆ. ಆದ್ರೆ ಐಪಿಎಲ್‌ನಲ್ಲಿ ವಾರ್ನರ್ ಅವರನ್ನು ಬೋಲ್ಡ್ ಮಾಡಲು ಸಾಧ್ಯವಾಗಿಲ್ಲ. ಉತ್ತಮ ಲಯದಲ್ಲಿ ಸ್ವಿಂಗ್ ಮಾಡುವವರಿಗೆ ವಾಂಖೆಡೆ ಕ್ರೀಡಾಂಗಣವು ಅದೇ ರೀತಿಯಲ್ಲಿ ಸಹಾಯ ಮಾಡುತ್ತದೆ ಈ ಅಂಶದ ಬಳಕೆಯನ್ನು ಬೋಲ್ಟ್ ಹೇಗೆ ಬಳಸಿಕೊಳ್ಳಲಿದ್ದಾರೆ ಕಾದುನೋಡಬೇಕಿದೆ.
ಕಿವೀಸ್ ವೇಗಿ, ಐಪಿಎಲ್‌ನಲ್ಲಿ ಪೃಥ್ವಿ ಶಾ ಅವರನ್ನು ಇಲ್ಲಿಯವರೆಗೆ ಐದು ಇನ್ನಿಂಗ್ಸ್‌ಗಳಲ್ಲಿ ಮೂರು ಬಾರಿ ಔಟ್ ಮಾಡಿದ್ದಾರೆ. ಹೊಸ ಚೆಂಡಿನೊಂದಿಗೆ ಉತ್ತಮ ವೇಗದಲ್ಲಿ ಬೌಲ್ ಸ್ವಿಂಗ್ ನೊಂದಿಗೆ ಹೆಚ್ಚು ವಿಕೆಟ್ ನಿರೀಕ್ಷಿಸಲಾಗಿದೆ.

ಡೆಲ್ಲಿಯ ಕುಲದೀಪ್ ಯಾದವ್ :
ಮೆಗಾ ಹರಾಜಿನಲ್ಲಿ ಡೆಲ್ಲಿಯನ್ನು ಸೇರಿಕೊಂಡಿರುವ ಕುಲದೀಪ್ ಯಾದವ್ ಈ ಆವೃತ್ತಿಯಲ್ಲಿ ಡೆಲ್ಲಿಯ ಪರ ಆರು ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ರೇಸ್ ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಡೆಲ್ಲಿ ತಂಡ ಗೆದ್ದಿರುವ ಮೂರು ಪಂದ್ಯಗಳಲ್ಲಿ ಕುಲದೀಪ್ ಯಾದವ್ ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಎಡಗೈ ಸ್ಪಿನ್ನರ್, ಕ್ಯಾಪಿಟಲ್ಸ್‌ಗೆ ಬೌಲಿಂಗ್ ವಿಭಾಗದಲ್ಲಿ ಭರವಸೆಯ ಅಸ್ತ್ರವಾಗಿದ್ದಾರೆ.
ಹಿಂದಿನ ಎರಡು ಆವೃತ್ತಿಗಳಲ್ಲಿ ಕೆಕೆಆರ್ ಪರವಾಗಿ ಉತ್ತಮ ಪ್ರದರ್ಶನ ನೀಡಿದ ಕುಲದೀಪ್ ಅವರನ್ನು ಈ ಆವೃತ್ತಿಯಲ್ಲಿ ಡೆಲ್ಲಿ ಫ್ರಾಂಚೈಸಿ 2 ಕೋಟಿಗೆ ಖರೀದಿ ಮಾಡಿದೆ. 27 ವರ್ಷದ ಕುಲದೀಪ್ ಯಾದವ್, ಡಿಸಿ ತಂಡದ ಬೌಲಿಂಗ್ ವಿಭಾಗದಲ್ಲಿ ನಿರ್ಣಾಯಕರಾಗಿರುತ್ತಾರೆ. ರಾಜಸ್ಥಾನ ತಂಡದಲ್ಲಿ ಜೋಸ್ ಬಟ್ಲರ್ ಮತ್ತು ಸಂಜು ಸ್ಯಾಮ್ಸನ್ ಉತ್ತಮ ಫಾರ್ಮ ನಲ್ಲಿದ್ದಾರೆ. ಇವರ ವಿರುದ್ದ ಕುಲದೀಪ್ ಅವರ ಸ್ಪಿನ್ ತಂತ್ರ ತಂಡಕ್ಕೆ ಗೆಲುವಿನ ಮಾರ್ಗ ತೊರಲಿದೆಯೇ ಕಾದು ನೋಡಬೇಕಿದೆ.

ರಾಜಸ್ಥಾನದ ಯುಜವೇಂದ್ರ ಚಾಹಲ್ :
ಆರ್‌ಸಿಬಿಯಿಂದ ಹೊರಬಂದ ಚಾಹಲ್ 6.50 ಕೋಟಿಗೆ ರಾಜಸ್ಥಾನವನ್ನು ಸೇರಿಕೊಂಡರು. ಭರವಸೆಯ ಸ್ಪಿನ್ ಬೌಲರ್ ಚಾಹಲ್ ಹಲವಾರು ಪಂದ್ಯಗಳಲ್ಲಿ ನಿರ್ಣಾಯಕ ಬೌಲಿಂಗ್ ಪ್ರದರ್ಶನದಿಂದ ತಂಡಕ್ಕೆ ಜಯ ಒದಗಿಸಿದ್ದಾರೆ. ಚಾಹಲ್ ಈ ಆವೃತ್ತಿಯಲ್ಲಿ ಮೊದಲ ಹ್ಯಾಟ್ರಿಕ್ ವಿಕೆಗಳಿಸಿರುವ ಏಕೈಕ ಸ್ಪಿನ್ನರ್ ಆಗಿದ್ದಾರೆ.
ಅಸಾಧಾರಣವಾಗಿ ಬೌಲ್ ಮಾಡುವ ಚಾಹಲ್ ಅವರು ವಿಕೆಟ್‌ಗಳ ನಡುವೆ ಸ್ಟಂಪ್ ಟು ಸ್ಟಂಪ್ ಬೌಲಿಂಗ್ ಮಾಡುತ್ತಾರೆ. ಅವರು ಐಪಿಎಲ್‌ನಲ್ಲಿ ಐದು ಇನ್ನಿಂಗ್ಸ್‌ಗಳಲ್ಲಿ ಎರಡು ಬಾರಿ ಪೃಥ್ವಿ ಶಾ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದ್ದಾರೆ. ಆದ್ರೆ, ಡೇವಿಡ್ ವಾರ್ನರ್ ಮತ್ತು ರಿಷಬ್ ಪಂತ್ ಚಾಹಲ್ ವಿರುದ್ಧ ಉತ್ತಮ ದಾಖಲೆಯನ್ನು ಹೊಂದಿದ್ದಾರೆ.
ಕಳೆದ 6 ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು ಪಡೆಯುವ ಮೂಲಕ ಚಾಹಲ್ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಈ ಪಂದ್ಯದಲ್ಲಿ ಚಾಹಲ್ ಅವರ ಪ್ರದರ್ಶನ ನಿರ್ಣಾಯಕ ಸ್ಥಾನ ವಹಿಸಲಿದ್ದಾರೆಯೇ ಎಂದು ಕಾದುನೋಡಬೇಕಿದೆ.
ಸ್ಪಿನ್ನರ್ ಗಳಿಗೆ ಈ ಮೈದಾನ ಹೇಗೆ ಸಾಥ್ ನೀಡಲಿದೆಯೋ ಹಾಗೇ ಬೌಂಡರಿಗಳು ಹತ್ತಿರದಲ್ಲಿರುವುದರಿಂದ ಬ್ಯಾಟರ್‌ಗಳಿಗೂ ಸಹ ಅಷ್ಟೇ ಸಹಾಯಕವಾಗಲಿದೆ. ಈ ಎರಡು ತಂಡಗಳು ಹಿಂದಿನ ಪಂದ್ಯದಲ್ಲಿ ಜಯಗಳಿಸಿವೆ. ಈ ಪಂದ್ಯದಲ್ಲಿ ಯಾವ ತಂಡ ಮೇಲುಗೈ ಸಾಧಿಸಲಿದೆ ಕಾದು ನೋಡಬೇಕಿದೆ.