ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡಿಸಿ vs ಎಸ್‌ಆರ್‌ಹೆಚ್: ವಾರ್ನರ್, ಪೋವೆಲ್ ಅಬ್ಬರ: ಹೈದರಾಬಾದ್‌ಗೆ ಬೃಹತ್ ಗುರಿ ನೀಡಿದ ಡೆಲ್ಲಿ

IPL 2022, DC vs SRH: Delhi Capitals Sets Target Of 208 Runs To SRH

ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಬಾರಿಯ ಐಪಿಎಲ್‌ನ 50ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ನಡೆಸಿ ಅಬ್ಬರದ ಪ್ರದರ್ಶನ ನೀಡಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದ ಡಿಸಿ 208 ರನ್‌ಗಳ ಬೃಹತ್ ಗುರಿಯನ್ನು ನಿಗದಿಪಡಿಸಿದೆ. ಡೇವಿಡ್ ವಾರ್ನರ್ ಹಾಗೂ ರೋವ್ಮನ್ ಅಬ್ಬರದ ಮುಂದೆ ಎಸ್‌ಆರ್‌ಹೆಚ್ ಬೌಲರ್‌ಗಳ ಆಟ ನಡೆಯಲಿಲ್ಲ.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭಿಕ ಆಘಾತವನ್ನು ಅನುಭವಿಸಿತು. ಮಂದೀಪ್ ಸಿಂಗ್ ಹಾಗೂ ಮಿಚೆಲ್ ಮಾರ್ಶ್ ಕನಿಷ್ಠ ಮೊತ್ತಕ್ಕೆ ವಿಕೆಟ್ ಕಳೆದುಕೊಂಡರು. ರಿಷಬ್ ಪಂತ್ ಕೂಡ 26 ರನ್‌ಗಳಿಗೆ ತಮ್ಮ ಇನ್ನಿಂಗ್ಸ್ ಮುಕ್ತಾಯಗೊಳಿಸಿದರು. ಆದರೆ ಆರಂಭಿಕ ಆಟಗಾರ ಡೇವಿಡ್‌ ವಾರ್ನರ್ ಹಾಗೂ ರೋವ್ಮನ್ ಪೋವೆಲ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಮುರಿಯದ ನಾಲ್ಕನೇ ವಿಕೆಟ್‌ಗೆ ಈ ಜೋಡಿ ಭರ್ಜರಿ 122 ರನ್‌ಗಳ ಜೊತೆಯಾಟವನ್ನು ನೀಡಿದ್ದಾರೆ. ಈ ಕಾರಣದಿಂದಾಗಿ ನಿಗದಿತ 20 ಓವರ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ ತಂಡ 3 ವಿಕೆಟ್ ಕಳೆದುಕೊಂಡು 207 ರನ್‌ಗಳಿಸಿತು.

ಎಂಎಸ್ ಧೋನಿ ಬದಲಿಗೆ ಜಡೇಜಾರನ್ನು ಕ್ಯಾಪ್ಟನ್ ಮಾಡಿದ್ದು ತಪ್ಪು ನಿರ್ಧಾರ; CSKಗೆ ಬೆಂಡೆತ್ತಿದ ಸೆಹ್ವಾಗ್ಎಂಎಸ್ ಧೋನಿ ಬದಲಿಗೆ ಜಡೇಜಾರನ್ನು ಕ್ಯಾಪ್ಟನ್ ಮಾಡಿದ್ದು ತಪ್ಪು ನಿರ್ಧಾರ; CSKಗೆ ಬೆಂಡೆತ್ತಿದ ಸೆಹ್ವಾಗ್

ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್, ಮನ್‌ದೀಪ್ ಸಿಂಗ್, ಮಿಚೆಲ್ ಮಾರ್ಷ್, ರಿಷಬ್ ಪಂತ್ (ನಾಯಕ & ವಿಕೆಟ್ ಕೀಪರ್), ಲಲಿತ್ ಯಾದವ್, ರೋವ್‌ಮನ್ ಪೊವೆಲ್, ರಿಪಾಲ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಅನ್ರಿಚ್ ನಾರ್ಟ್ಜೆ
ಬೆಂಚ್: ಪೃಥ್ವಿ ಶಾ, ಅಕ್ಸರ್ ಪಟೇಲ್, ಮುಸ್ತಾಫಿಜುರ್ ರೆಹಮಾನ್, ಚೇತನ್ ಸಕರಿಯಾ, ಶ್ರೀಕರ್ ಭರತ್, ಸರ್ಫರಾಜ್ ಖಾನ್, ಟಿಮ್ ಸೀಫರ್ಟ್, ಲುಂಗಿ ಎನ್‌ಗಿಡಿ, ಅಶ್ವಿನ್ ಹೆಬ್ಬಾರ್, ಪ್ರವೀಣ್ ದುಬೆ, ಕಮಲೇಶ್ ನಾಗರಕೋಟಿ, ಯಶ್ ಧುಲ್, ವಿಕ್ಕಿ ಓಸ್ತ್ವಾಲ್

ಡೆಲ್ಲಿ ಕ್ಯಾಪಿಟಲ್ಸ್: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಭುವನೇಶ್ವರ್ ಕುಮಾರ್, ಸೀನ್ ಅಬಾಟ್, ಕಾರ್ತಿಕ್ ತ್ಯಾಗಿ, ಉಮ್ರಾನ್ ಮಲಿಕ್
ಬೆಂಚ್: ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಟಿ ನಟರಾಜನ್, ರವಿಕುಮಾರ್ ಸಮರ್ಥ್, ಜಗದೀಶ ಸುಚಿತ್, ಗ್ಲೆನ್ ಫಿಲಿಪ್ಸ್, ವಿಷ್ಣು ವಿನೋದ್, ಪ್ರಿಯಾಂ ಗಾರ್ಗ್, ರೊಮಾರಿಯೋ ಶೆಫರ್ಡ್, ಫಜಲ್ಹಕ್ ಫಾರೂಕಿ, ಅಬ್ದುಲ್ ಸಮದ್, ಸೌರಭ್ ದುಬೆ

Story first published: Thursday, May 5, 2022, 21:33 [IST]
Other articles published on May 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X