ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಅಜಿತ್ ಅಗರ್ಕರ್ ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್

IPL 2022: Delhi Capitals likely to appoint Ajit Agarkar as assistant coach

ಮುಂಬರುವ ಮಾರ್ಚ್ 26ರಿಂದ ಆರಂಭವಾಗಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕುರಿತಾಗಿ ದಿನದಿಂದ ದಿನಕ್ಕೆ ಕುತೂಹಲ ಹಾಗೂ ಚರ್ಚೆಗಳು ಹೆಚ್ಚಾಗುತ್ತಿವೆ. ಅದರಲ್ಲಿಯೂ ಇದೇ ತಿಂಗಳ 12 ಹಾಗೂ 13ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಈ ಕುತೂಹಲ ಹಾಗೂ ಚರ್ಚೆಗಳನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಈ ಹರಾಜಿನಲ್ಲಿ ಒಟ್ಟು 590 ಆಟಗಾರರು ಭಾಗವಹಿಸಿದ್ದು, 203 ಆಟಗಾರರು ಯಶಸ್ವಿಯಾಗಿ ಬಿಕರಿಯಾಗಿದ್ದಾರೆ. ಹೀಗೆ ಯಶಸ್ವಿಯಾಗಿ ಹರಾಜಾದ ಆಟಗಾರರ ಪೈಕಿ 66 ವಿದೇಶಿ ಆಟಗಾರರಿದ್ದರೆ, ಇನ್ನುಳಿದ 137 ಆಟಗಾರರು ಭಾರತೀಯರಾಗಿದ್ದಾರೆ. ಇನ್ನು ಈ ಆಟಗಾರರನ್ನು ಖರೀದಿಸಲು ಎಲ್ಲಾ 10 ಫ್ರಾಂಚೈಸಿಗಳು ಖರ್ಚು ಮಾಡಿರುವ ಒಟ್ಟು ಮೊತ್ತ 551.7 ಕೋಟಿ ರೂಪಾಯಿಗಳು. ಅಷ್ಟೇ ಅಲ್ಲದೆ ಇದಕ್ಕೂ ಮುನ್ನ ನಡೆದ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಫ್ರಾಂಚೈಸಿಗಳು 33 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು 324.2 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದವು.

ಹೀಗೆ ಆಟಗಾರರಿಗೆ ಕೋಟಿ ಕೋಟಿ ರೂಪಾಯಿಗಳನ್ನು ಸುರಿದಿರುವ ಎಲ್ಲಾ ಹತ್ತೂ ಫ್ರಾಂಚೈಸಿಗಳು ಆಟಗಾರರಿಗೆ ಮಾರ್ಗದರ್ಶನವನ್ನು ನೀಡುವ ಮತ್ತು ತರಬೇತಿಗಳನ್ನು ಕೊಡುವ ಕೋಚ್‌ಗಳ ಆಯ್ಕೆ ಮಾಡಿಕೊಳ್ಳುವಿಕೆಯಲ್ಲಿ ನಿರತವಾಗಿವೆ. ಹೌದು, ಒಂದು ಕ್ರಿಕೆಟ್ ತಂಡ ಯಶಸ್ವಿಯಾಗಬೇಕೆಂದರೆ ಆಟಗಾರರು ಎಷ್ಟು ಮುಖ್ಯವೋ ಅದೇ ರೀತಿ ತರಬೇತಿ ವರ್ಗ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಹೀಗಾಗಿ ಉತ್ತಮ ತರಬೇತಿ ಸಿಬ್ಬಂದಿ ವರ್ಗವನ್ನು ಹೊಂದುವ ಪ್ರಯತ್ನದಲ್ಲಿರುವ ಫ್ರಾಂಚೈಸಿಗಳು ಕ್ರಿಕೆಟ್‍ನಲ್ಲಿ ಉತ್ತಮ ಅನುಭವವನ್ನು ಹೊಂದಿರುವಂತಹ ವ್ಯಕ್ತಿಗಳನ್ನು ಕೋಚ್ ಸ್ಥಾನಗಳಿಗೆ ನೇಮಕ ಮಾಡುತ್ತಿವೆ. ಈಗಾಗಲೇ ಹಲವಾರು ಮಾಜಿ ಕ್ರಿಕೆಟಿಗರು ವಿವಿಧ ಫ್ರಾಂಚೈಸಿಗಳ ಕೋಚ್ ಆಗಿ ಆಯ್ಕೆಗೊಂಡಿದ್ದು ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಭಾರತದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಅವರನ್ನು ಸಹಾಯಕ ಕೋಚ್ ಆಗಿ ನೇಮಕ ಮಾಡಿದೆ ಎನ್ನಲಾಗುತ್ತಿದೆ.

ಪಾಕಿಸ್ತಾನ ಪ್ರವಾಸಕ್ಕೆ 16 ಆಟಗಾರರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ: ತಂಡದ ಮೇಲಿದೆ ಐಪಿಎಲ್ ಎಫೆಕ್ಟ್!ಪಾಕಿಸ್ತಾನ ಪ್ರವಾಸಕ್ಕೆ 16 ಆಟಗಾರರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ: ತಂಡದ ಮೇಲಿದೆ ಐಪಿಎಲ್ ಎಫೆಕ್ಟ್!

ಇಎಸ್‌ಪಿಎನ್ ಕ್ರಿಕ್ಇನ್ಫೋ ವರದಿಯೊಂದರ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭಾರತದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಅವರನ್ನು ಸಹಾಯಕ ತರಬೇತುದಾರನನ್ನಾಗಿ ನೇಮಿಸಿಕೊಂಡಿದೆ. ಸದ್ಯ ಇದೇ ತಿಂಗಳಲ್ಲಿ ಆರಂಭವಾಗಲಿರುವ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಸರಣಿಗಳಲ್ಲಿ ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್ ಬ್ರಾಡ್‌ಕ್ಯಾಸ್ಟ್ ಪ್ಯಾನೆಲ್ ಸದಸ್ಯನಾಗಿ ಆಯ್ಕೆಯಾಗಿರುವ ಅಜಿತ್ ಅಗರ್ಕರ್ ಈ ಹಿಂದೆ ಇದೇ ಡೆಲ್ಲಿ ಫ್ರಾಂಚೈಸಿ ಪರ ಆಟಗಾರನಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿದಿರುವ ಅನುಭವವನ್ನು ಕೂಡ ಹೊಂದಿದ್ದಾರೆ. ಒಟ್ಟಾರೆಯಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 42 ಪಂದ್ಯಗಳನ್ನಾಡಿರುವ ಭಾರತದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ 179 ರನ್ ಕಲೆಹಾಕಿದ್ದು, 29 ವಿಕೆಟ್‍ಗಳನ್ನು ಪಡೆದಿದ್ದಾರೆ.

ಪಿಎಸ್ಎಲ್: ಮೈದಾನದಲ್ಲಿಯೇ ಸಹ ಆಟಗಾರ ಕಮ್ರಾನ್ ಕೆನ್ನೆಗೆ ಬಾರಿಸಿದ ಪಾಕ್ ಪ್ರಮುಖ ಆಟಗಾರ!ಪಿಎಸ್ಎಲ್: ಮೈದಾನದಲ್ಲಿಯೇ ಸಹ ಆಟಗಾರ ಕಮ್ರಾನ್ ಕೆನ್ನೆಗೆ ಬಾರಿಸಿದ ಪಾಕ್ ಪ್ರಮುಖ ಆಟಗಾರ!

11 ವರ್ಷದ ಮಗುವಿನ ಜೀವ ಉಳಿಸಿದ ಕನ್ನಡಿಗ ಕೆಎಲ್ ರಾಹುಲ್ | Oneindia Kannada

ಈ ಬಾರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಮೆಗಾ ಹರಾಜಿನ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರ ಪಟ್ಟಿ ಹೀಗಿದೆ: ರಿಷಭ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ, ಅನ್ರಿಚ್ ನಾರ್ಟ್ಜೆ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶಾರ್ದೂಲ್ ಠಾಕೂರ್, ಮುಸ್ತಾಫಿಜುರ್ ರೆಹಮಾನ್, ಕುಲದೀಪ್ ಯಾದವ್, ಅಶ್ವಿನ್ ಹೆಬ್ಬಾರ್, ಅಭಿಷೇಕ್ ಶರ್ಮಾ, ಕಮಲೇಶ್ ನಾಗರಕೋಟಿ, ಕೆಎಸ್ ಭರತ್, ಮನದೀಪ್ ಸಿಂಗ್, ಖಲೀಲ್ ಸದ್ಕಾವ್, ಚೇತನ್ ಸದ್ಕಾವ್, ಚೇತನ್ ಸದ್ಕಾವ್ , ರಿಪಾಲ್ ಪಟೇಲ್, ಯಶ್ ಧುಲ್, ರೋವ್‌ಮನ್ ಪೊವೆಲ್, ಪ್ರವೀಣ್ ದುಬೆ, ಲುಂಗಿ ಎನ್‌ಗಿಡಿ, ವಿಕಿ ಓಸ್ಟ್ವಾಲ್, ಸರ್ಫರಾಜ್ ಖಾನ್.

Story first published: Wednesday, February 23, 2022, 9:48 [IST]
Other articles published on Feb 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X