IPL 2022: ಮತ್ತೋರ್ವ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನಿಗೆ ಕೋವಿಡ್ ದೃಢ: ಪಂದ್ಯದ ಮೇಲೆ ಕರಿಛಾಯೆ!

ಡೆಲ್ಲಿ ಕ್ಯಾಪಿಟಲ್ಸ್ ಬಯೋಬಬಲ್‌ನ ಒಳಗೆ ಕೊರೊನಾವೈರಸ್ ಆಘಾತ ನೀಡುತ್ತಿದ್ದು ಇಂದು ಮತ್ತೋರ್ವ ವಿದೇಶಿ ಆಟಗಾರನಿಗೆ ಕೊರೊನಾವೈರಸ್ ದೃಢಪಟ್ಟಿದೆ ಎಂದು ವರದಿಯಾಗಿದೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಮಿಚೆಲ್ ಮಾರ್ಶ್ ಸಹಿತ ಫ್ರಾಂಚೈಸಿಯ ಐವರು ಸದಸ್ಯರಲ್ಲಿ ಕೊರೊನಾವೈರಸ್ ದೃಢಪಟ್ಟಿದೆ. ಇದೀಗ ಮತ್ತೋರ್ವ ಆಟಗಾರನಿಗೂ ಕೋವಿಡ್ ದೃಢಪಟ್ಟಿದೆ. ಹೀಗಾಗಿ ಇಂದು ನಡೆಯಲಿರುವ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ಮೇಲೆ ಕರಿಛಾಯೆ ಆವರಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಟಿಮ್ ಸೈಫರ್ಟ್ ಕೊರೊನಾವೈರಸ್‌ಗೆ ತುತ್ತಾದ ನಂತರ ಬುಧವಾರದ ಪಂದ್ಯದ ಮೇಲೆ ಅನುಮಾನಗಳು ಮೂಡಿದೆ. ಇದಕ್ಕೂ ಮುನ್ನ ಚಿಚೆಲ್ ಮಾರ್ಶ್ ಕುಡ ಕೋವಿಡ್‌ಗೆ ತುತ್ತಾಗಿದ್ದರು. ಈಗ ಡೆಲ್ಲಿ ಪಾಳಯದ;ಲ್ಲಿ ಒಟ್ಟು 6 ಮಂದಿಯಲ್ಲಿ ಕೊರೊನಾವೈರಸ್ ದೃಢಪಟ್ಟಂತಾಗಿದೆ.
ಬುಧವಾರ ಬೆಳಿಗ್ಗೆ ಪಂದ್ಯದ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ಕೊರೊನಾವೈರಸ್ ಪರೀಕ್ಷೆಯನ್ನು ನಡೆಸಲಾಯಿತು. ಇದರಲ್ಲಿ ಟಿಮ್ ಸೈಫರ್ಟ್ ಕೊವಿಡ್‌ಗೆ ಒಳಗಾಗಿರುವುದು ಪತ್ತೆಯಾಗಿದೆ. ಈ ಬಗ್ಗೆ ಬಿಸಿಸಿಐ ಮೂಲಗಳು ಮಾಧ್ಯಮಗಳಿಗೆ ಖಚಿತಪಡಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಮಿಚೆಲ್ ಮಾರ್ಶ್ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಈ ಮೊದಲೇ ಕೊರೊನಾವೈರಸ್ ದೃಢಪಟ್ಟಿತ್ತು. ಮಿಚೆಲ್ ಮಾರ್ಶ್ ಆಸ್ಪತ್ರೆಗೆ ದಾಖಲಾಗಿದ್ದು ತಂಡದ ಉಳಿದ ಎಲ್ಲಾ ಆಟಗಾರರ ಕೊರೊನಾಪರೀಕ್ಷೆಯ ವರದಿ ನೆಗೆಟಿವ್ ಬಂದಿತ್ತು. ಆದರೆ ಇಂದು ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಮತ್ತೋರ್ವ ಆಟಗಾರನಿಗೆ ಕೋವಿಡ್ ದೃಢಪಟ್ಟಿರುವುದು ಆತಂಕ ಮೂಡಿಸಿದೆ. ಈ ಮಧ್ಯೆ ಕೊರೊನಾವೈರಸ್‌ನ ಕಾರಣದಿಂದಾಗಿ ಬಿಸಿಸಿಐ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯವನ್ನು ಸ್ಥಳಾಂತರ ಮಾಡುವ ನಿರ್ಧಾರವನ್ನು ಮಂಗಳವಾರ ಬಿಸಿಸಿಐ ತೆಗೆದುಕೊಂಡಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಬುಧವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೊಸಿಯೇಶನ್ ಸ್ಟೇಡಿಯಂನಲ್ಲಿ ನಡೆಯಬೇಕಾಗಿತ್ತು. ಈ ಪಂದ್ಯವನ್ನು ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿದ್ದು ಮಂಗಳವಾರ ಈ ಬಗ್ಗೆ ಅಧಿಕರತ ಪ್ರಕಟಣೆಯನ್ನು ಹೊರಡಿಸಲಾಗಿದೆ. ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಿಸಿಸಿಐ "ಮತ್ತಷ್ಟು ಹೆಚ್ಚಿನ ಪ್ರಕರಣಗಳು ಬಯೋಬಬಲ್‌ನ ಒಳಗೆ ಕಾಣಿಸಿಕೊಳ್ಳುವುದನ್ನು ತಪ್ಪಿಸಲು ಈ ನಿರ್ಧಾರ ಮಾಡಲಾಗಿದೆ" ಎಂದು ಬಿಸಿಸಿಐ ಮಾಹಿತಿ ನೀಡಿದೆ.
ಬಿಸಿಸಿಐ ಕಳುಹಿಸಿರುವ ಮೇಲ್‌ನಲ್ಲಿ ಕೊರೊನಾವೈರಸ್ ದೃಢಪಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಐವರು ಸದಸ್ಯರನ್ನು ಪಟ್ಟಿಮಾಡಿದೆ. ಪಿಸಿಯೋತೆರಪಿಸ್ಟ್ ಫ್ರಾಟ್ರಿಕ್ ಫರ್ಹಾತ್, ಸ್ಪೋರ್ಟ್ಸ್ ಮಸಾಜ್ ಥೆರಪಿಸ್ಟ್ ಚೇತನ್ ಕುಮಾರ್, ಆಟಗಾರ ಮಿಚೆಲ್ ಮಾರ್ಶ್, ಟೀಮ್ ಡಾಕ್ಟರ್ ಅಭಿಜಿತ್ ಸಾಳ್ವಿ, ಸೋಶಿಯಲ್ ಮೀಡಿಯಾ ಕಂಟೆಂಟ್ ಟೀಮ್ ಮೆಂಬರ್ ಆಕಾಶ್ ಮಾನೆ ಈವರೆಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಳಯದಲ್ಲಿ ಕೊರೊನಾವೈರಸ್‌ಗೆ ತುತ್ತಾಗಿದವಾರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications