ಐಪಿಎಲ್ 2022: ಡೆಲ್ಲಿ ಕ್ಯಾಪಿಟಲ್ಸ್ ಸ್ಕ್ವಾಡ್ ಸೇರಿಕೊಂಡ ನಾಯಕ ರಿಷಭ್, ಅಕ್ಷರ್

ಐಪಿಎಲ್ 15ನೇ ಆವೃತ್ತಿಯ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಎಲ್ಲಾ ತಂಡಗಳ ಆಟಗಾರರು ತಮ್ಮ ತಮ್ಮ ಸ್ಕ್ವಾಡ್‌ಗೆ ಸೇರ್ಪಡೆಯಾಗುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ತಂಡದ ಸಹ ಆಟಗಾರ ಅಕ್ಷರ್ ಪಟೇಲ್ ಜೊತೆಗೆ ಮುಂಬೈಗೆ ಆಗಮಮಿಸಿದ್ದು ಡೆಲ್ಲಿ ಕ್ಯಾಪಿಟಲ್ಸ್ ಸ್ಕ್ವಾಡ್‌ಗೆ ಸೇರ್ಪಡೆಯಾಗಿದ್ದಾರೆ.
ಈ ಇಬ್ಬರು ಆಟಗಾರರಲ್ಲದೆ ಡೆಲ್ಲಿ ತಂಡದ ಇತರ ಆಟಗಾರರಾದ ಶಾರ್ದೂಲ್ ಠಾಕೂರ್, ಕೆಎಸ್ ಭರತ್, ಕುಲ್‌ದೀಪ್ ಯಾದವ್ ಮತ್ತು ಪೃಥ್ವಿ ಶಾ ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ಸ್ಕ್ವಾಡ್ ಸೇರಿಕೊಂಡಿದ್ದಾರೆ. ಈ ಆಟಗಾರರು ಮೂರು ದಿನಗಳ ಕಠಿಣ ಕ್ವಾರಂಟೈನ್ ಪೂರೈಸಿದ ನಂತರ ಸ್ಕ್ವಾಡ್‌ಗೆ ಸೇರಿಕೊಂಡಿದ್ದಾರೆ. ರಿಷಭ್ ಪಂತ್, ಅಕ್ಷರ್ ಪಟೇಲ್ ಮತ್ತು ಭರತ್ ಬಬಲ್ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಬಯೋಬಬಲ್‌ನಲ್ಲಿದ್ದ ಕಾರಣ ಬಬಲ್‌ನಿಂದ ಬಬಲ್‌ಗೆ ನೇರವಾಗಿ ಸೇರ್ಪಡೆಯಾಗಿದ್ದು ಕ್ವಾರಂಟೈನ್ ಪೂರೈಸದೆಯೇ ಸ್ಕ್ವಾಡ್‌ಗೆ ಸೇರಿಕೊಂಡಿದ್ದಾರೆ.
ಇದಕ್ಕೂ ಮುನ್ನ ಮಂಗಳವಾರ ಶೇನ್ ವಾಟ್ಸನ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅಸಿಸ್ಟೆಂಟ್ ಕೋಚ್ ಆಗಿ ನೇಮಕಗೊಂಡಿರುದ್ದಾರೆ. 40ರ ಹರೆಯದ ವಾಟ್ಸನ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚಿಂಗ್ ವಿಭಾಗವನ್ನು ಸೇರಿಕೊಂಡಿದ್ದು ಹೆಡ್ ಕೋಚ್ ರಿಕಿ ಪಾಂಟಿಂಗ್, ಪ್ರವೀಣ್ ಆಮ್ರೆ(ಅಸಿಸ್ಟೆಂಟ್ ಕೋಚ್), ಅಜಿತ್ ಅಗರ್ಕರ್ (ಅಸಿಸ್ಟೆಂಟ್ ಕೋಚ್), ಜೇಮ್ಸ್ ಹೋಪ್ಸ್ (ಬೌಲಿಂಗ್ ಕೋಚ್) ಅವರನ್ನು ಸೇರಿಕೊಳ್ಳಲಿದ್ದಾರೆ.
"ಐಪಿಎಲ್ ವಿಶ್ವದ ಅತ್ಯುತ್ತಮ ಕ್ರಿಕೆಟ್ ಲೀಗ್ ಆಗಿದೆ. ಆಟಗಾರನಾಗಿ ನನ್ನಲ್ಲಿ ಸಾಕಷ್ಟು ಅತ್ಯುತ್ತಮ ನೆನಪುಗಳಿವೆ. ಈಗ ನಾನು ಕೋಚಿಂಗ್ ಜವಾಬ್ಧಾರಿ ಹೊತ್ತು ಆಗಮಿಸುತ್ತಿದ್ದೇನೆ. ದಿಗ್ಗಜ ರಿಕಿ ಪಾಂಟಿಂಗ್ ಅವರೊಂದಿಗೆ ಕರ್ತವ್ಯ ನಿರ್ವಹಿಸುವ ಅವಕಾಶ ನನಗೆ ದೊರೆತಿದೆ. ಆತನೋರ್ವ ಅದ್ಭುತ ನಾಯಕ. ಈಗ ಅವರು ವಿಶ್ವದ ಅತ್ಯುತ್ತಮ ಕೋಚ್‌ಗಳಲ್ಲಿ ಒಬ್ಬರು. ನನಗೆ ಇದು ರಿಕಿ ಪಾಂಟಿಂಗ್ ಅವರಿಂದ ಕಲಿತುಕೊಳ್ಳಲು ದೊರೆತ ಅದ್ಭುತವಾದ ಅವಕಾಶ. ನಾನಿ ನಿಜಕ್ಕೂ ಸಾಕಷ್ಟು ಉತ್ಸುಕನಾಗಿದ್ದೇನೆ" ಎಂದಿದ್ದಾರೆ ಶೇನ್ ವಾಟ್ಸನ್.
ಐಪಿಎಲ್‌ನಲ್ಲಿ 13 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಶೇನ್ ವಾಟ್ಸನ್ 145 ಪಂದ್ಯಗಳನ್ನು ಆಡಿದ್ದು 3874 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಸೇರಿದೆ. ಅಲ್ಲದೆ ಬೌಲಿಂಗ್‌ನಲ್ಲಿಯೂ ವಾಟ್ಸನ್ 92 ವಿಕೆಟ್ ಪಡೆದಿದ್ದು ಐಪಿಎಲ್‌ನಲ್ಲಿ ಆಡಿರುವ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು ಎನಿಸಿದ್ದಾರೆ ಶೇನ್ ವಾಟ್ಸನ್.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್‌ನಲ್ಲಿ ಈವರೆಗೂ ಟ್ರೋಫಿ ಗೆಲ್ಲು ವಿಫಲವಾಗಿದ್ದರೂ 2020 ರ ಆವೃತ್ತಿಯಲ್ಲಿ ಫೈನಲ್ ಹಂತಕ್ಕೆ ತಲುಪಿತ್ತು. ಕಳೆದ ಆವೃತ್ತಿಯಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ಹಂತಕ್ಕೆ ತಲುಪಿವಲ್ಲಿ ಯಶಸ್ವಿಯಾಗಿತ್ತು. ಈ ಬಾರಿಯ ಆವೃತ್ತಿಯಲ್ಲಿ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಿರುದ್ಧ ಮಾರ್ಚ್ 27ರಂದು ಟೂರ್ನಿಯ ಅಭಿಯಾನ ಆರಂಭಿಸಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಸಂಪೂರ್ಣ ಸ್ಕ್ವಾಡ್ ಹೀಗಿದೆ: ಪೃಥ್ವಿ ಶಾ, ಅನ್ರಿಚ್ ನಾರ್ಟ್ಜೆ, ರಿಷಭ್ ಪಂತ್ (ನಾಯಕ), ಅಕ್ಷರ್ ಪಟೇಲ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶಾರ್ದೂಲ್ ಠಾಕೂರ್, ಮುಸ್ತಾಫಿಜುರ್ ರೆಹಮಾನ್, ಕುಲದೀಪ್ ಯಾದವ್, ಅಶ್ವಿನ್ ಹೆಬ್ಬಾರ್, ಸರ್ಫರಾಜ್ ಖಾನ್, ಕಮಲೇಶ್ ನಾಗರಕೋಟಿ, ಕೆಎಸ್ ಭರತ್, ಮನದೀಪ್ ಸಿಂಗ್, ಖಲೀಲ್ ಅಹ್ಮದ್, ಚೇತನ್ ಸಕರಿಯಾ, ಲಲಿತ್ ಯಾದವ್, ರಿಪಾಲ್ ಪಟೇಲ್, ಯಶ್ ಧುಲ್, ರೋವ್ಮನ್ ಪೊವೆಲ್, ಪ್ರವೀಣ್ ದುಬೆ, ಲುಂಗಿ ಎನ್ಗಿಡಿ, ಟಿಮ್ ಸೀಫರ್ಟ್, ವಿಕ್ಕಿ ಓಸ್ತ್ವಾಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications