For Quick Alerts
ALLOW NOTIFICATIONS  
For Daily Alerts
 

DC vs SRH: ಈ ಮೈಲಿಗಲ್ಲುಗಳ ಮೇಲೆ ಪಂತ್, ವಿಲಿಯಮ್ಸನ್ ಮತ್ತು ವಾರ್ನರ್ ಕಣ್ಣು

IPL 2022: Delhi Capitals vs Sunrisers Hyderabad players records and approaching milestones

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 50ನೇ ಪಂದ್ಯದಲ್ಲಿ ಇಂದು ( ಮೇ 5 ) ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಇತ್ತಂಡಗಳ ನಡುವಿನ ಈ ಪಂದ್ಯ ಮುಂಬೈನ ಬ್ರಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇನ್ನು ಟೂರ್ನಿಯ ಆರಂಭದಲ್ಲಿ ಎರಡು ಪಂದ್ಯಗಳಲ್ಲಿ ಸೋತು ಕಳಪೆ ಆರಂಭವನ್ನು ಪಡೆದುಕೊಂಡಿದ್ದ ಸನ್ ರೈಸರ್ಸ್ ಹೈದರಾಬಾದ್ ನಂತರ ಸತತವಾಗಿ ಗೆಲುವು ಕಂಡು ಪ್ಲೇಆಫ್ ರೇಸ್‌ಗೆ ಇಳಿದಿತ್ತು. ಹೀಗೆ ಸಾಲು ಸಾಲು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಸನ್ ರೈಸರ್ಸ್ ಹೈದರಾಬಾದ್ ನಂತರದ ಎರಡು ಪಂದ್ಯಗಳಲ್ಲಿ ಸೋಲುಂಡಿದ್ದು, ಇಲ್ಲಿಯವರೆಗೂ ಒಟ್ಟು 9 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಗೆದ್ದು 4 ಪಂದ್ಯಗಳಲ್ಲಿ ಸೋತು 10 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಇನ್ನು ಸನ್ ರೈಸರ್ಸ್ ಹೈದರಾಬಾದ್ ಯಾರ ಮೇಲೂ ಅವಲಂಬಿತವಾಗದೇ ಪ್ಲೇಆಫ್ ಪ್ರವೇಶಿಸಬೇಕೆಂದರೆ ಉಳಿದ 5 ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಗೆಲ್ಲಲೇಬೇಕಿದೆ ಹಾಗೂ 3 ಪಂದ್ಯಗಳಲ್ಲಿ ಗೆದ್ದರೂ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಪ್ಲೇಆಫ್ ಪ್ರವೇಶಿಸುವ ಅವಕಾಶವಿದ್ದು, ಸನ್ ರೈಸರ್ಸ್ ಹೈದರಾಬಾದ್ ತನ್ನಷ್ಟೇ ಅಂಕಗಳನ್ನು ಪಡೆಯುವ ಇತರೆ ತಂಡಗಳಿಗಿಂತ ಹೆಚ್ಚಿನ ನೆಟ್ ರನ್ ರೇಟ್ ಹೊಂದಬೇಕಾದ ಅನಿವಾರ್ಯತೆ ಇದೆ. ಅತ್ತ ಟೂರ್ನಿಯಲ್ಲಿ ಇಲ್ಲಿಯವರೆಗೂ 9 ಪಂದ್ಯಗಳನ್ನಾಡಿ 4 ಪಂದ್ಯಗಳಲ್ಲಿ ಗೆದ್ದು 5 ಪಂದ್ಯಗಳಲ್ಲಿ ಸೋತು 8 ಅಂಕಗಳನ್ನು ಪಡೆದುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದು, ಯಶಸ್ವಿಯಾಗಿ ಯಾವ ತಂಡದ ಅಂಕಗಳ ಮೇಲೂ ಅವಲಂಬಿತವಾಗದೇ ಪ್ಲೇಆಫ್ ತಲುಪಲು ಉಳಿದ 5 ಪಂದ್ಯಗಳ ಪೈಕಿ ಎಲ್ಲಾ ಪಂದ್ಯಗಳಲ್ಲಿಯೂ ಗೆಲ್ಲಬೇಕಿದೆ ಹಾಗೂ ಉಳಿದ 4 ಪಂದ್ಯಗಳಲ್ಲಿ ಗೆದ್ದರೂ ಡೆಲ್ಲಿ ಕ್ಯಾಪಿಟಲ್ಸ್‌ಗೆ ಪ್ಲೇಆಫ್ ಪ್ರವೇಶಿಸುವ ಅವಕಾಶವಿರಲಿದೆ, ಆದರೆ ತನ್ನಷ್ಟೇ ಅಂಕಗಳನ್ನು ಹೊಂದಲಿರುವ ತಂಡಗಳಿಗಿಂತ ಹೆಚ್ಚಿನ ನೆಟ್ ರನ್ ರೇಟ್‌ನ್ನು ಡೆಲ್ಲಿ ಕ್ಯಾಪಿಟಲ್ಸ್ ಸಂಪಾದಿಸಲೇಬೇಕಾಗಿದೆ.

ಹೀಗೆ ಇತ್ತಂಡಗಳಿಗೂ ಗೆಲ್ಲಲೇಬೇಕಾದ ಪರಿಸ್ಥಿತಿ ನಿರ್ಮಿಸಿರುವ ಈ ಪಂದ್ಯದಲ್ಲಿ ಆಟಗಾರರು ಕೆಲ ವೈಯಕ್ತಿಕ ಮೈಲಿಗಲ್ಲುಗಳನ್ನು ಮುಟ್ಟುವ ಸನಿಹದಲ್ಲಿದ್ದಾರೆ. ಅಂತಹ ದಾಖಲೆಗಳ ಪಟ್ಟಿ ಈ ಕೆಳಕಂಡಂತಿದೆ.

* 249 ಟಿ ಟ್ವೆಂಟಿ ವಿಕೆಟ್‌ಗಳನ್ನು ಪಡೆದುಕೊಂಡಿರುವ ಮುಸ್ತಫಿಜರ್ ರಹಮಾನ್ 250 ವಿಕೆಟ್‌ಗಳ ಮೈಲಿಗಲ್ಲನ್ನು ಮುಟ್ಟಲು ಇನ್ನೊಂದು ವಿಕೆಟ್ ಪಡೆಯಬೇಕಾದ ಅಗತ್ಯವಿದೆ. ಮುಸ್ತಫಿಜರ್ ರಹಮಾನ್ ಈ ಮೈಲಿಗಲ್ಲನ್ನು ಮುಟ್ಟಿದರೆ ಶಕಿಬ್ ಅಲ್ ಹಸನ್ ನಂತರ 250 ವಿಕೆಟ್ ಪಡೆದ ಬಾಂಗ್ಲಾದೇಶದ ಎರಡನೇ ಬೌಲರ್ ಎನಿಸಿಕೊಳ್ಳಲಿದ್ದಾರೆ.

* ರಿಷಭ್ ಪಂತ್ ಈ ಪಂದ್ಯದಲ್ಲಿ 56 ರನ್ ಬಾರಿಸಿದರೆ 4000 ಟಿ ಟ್ವೆಂಟಿ ರನ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

* ಡೇವಿಡ್ ವಾರ್ನರ್ ಇಲ್ಲಿಯವೆರಗೂ 398 ಟಿ ಟ್ವೆಂಟಿ ಸಿಕ್ಸರ್ ಬಾರಿಸಿದ್ದು 400 ಸಿಕ್ಸರ್ ಮೈಲಿಗಲ್ಲನ್ನು ಮುಟ್ಟಲು ಇನ್ನೆರಡು ಸಿಕ್ಸರ್ ಬಾರಿಸಬೇಕಾದ ಅಗತ್ಯವಿದೆ. ವಾರ್ನರ್ ಈ ಮೈಲಿಗಲ್ಲನ್ನು ಮುಟ್ಟಿದರೆ ಶೇನ್ ವಾಟ್ಸನ್ ಮತ್ತು ಆರನ್ ಫಿಂಚ್ ನಂತರ 400 ಟಿ ಟ್ವೆಂಟಿ ಸಿಕ್ಸರ್ ಬಾರಿಸಿದ ಆಸ್ಟ್ರೇಲಿಯಾದ ಮೂರನೇ ಆಟಗಾರ ಎಂಬ ಸಾಧನೆ ಮಾಡಲಿದ್ದಾರೆ.

* ಟಿ ಟ್ವೆಂಟಿ ಕ್ರಿಕೆಟ್‌ನಲ್ಲಿ 98 ಕ್ಯಾಚ್‌ಗಳನ್ನು ಹಿಡಿದಿರುವ ಕೇನ್ ವಿಲಿಯಮ್ಸನ್ ಈ ಪಂದ್ಯದಲ್ಲಿ ಇನ್ನೆರಡು ಕ್ಯಾಚ್‌ಗಳನ್ನು ಹಿಡಿದರೆ 100 ಟಿ ಟ್ವೆಂಟಿ ಕ್ಯಾಚ್‌ಗಳ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

* ಇಲ್ಲಿಯವೆರಗೂ ಒಟ್ಟು 190 ಐಪಿಎಲ್ ಬೌಂಡರಿಗಳನ್ನು ಬಾರಿಸಿರುವ ಪೃಥ್ವಿ ಶಾ ಈ ಪಂದ್ಯದಲ್ಲಿ ಹತ್ತು ಬೌಂಡರಿಗಳನ್ನು ಬಾರಿಸಿದರೆ 200 ಬೌಂಡರಿ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

Story first published: Thursday, May 5, 2022, 16:24 [IST]
Other articles published on May 5, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+