Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022: ಗಾರ್ವೇರ್ ಕ್ಲಬ್ ಹೌಸ್‌ಗೆ ಆರ್ಥಿಕ ನಷ್ಟ; ವಾಂಖೆಡೆಯ ಪಂದ್ಯಗಳನ್ನು ಕಡಿತಗೊಳಿಸಲು ಪತ್ರ

ಮುಂಬೈ, ಮೇ 3: 15ನೇ ಆವೃತ್ತಿಯ ಐಪಿಎಲ್ ಈಗಾಗಲೇ ಅರ್ಧದಷ್ಟು ಭಾಗವನ್ನು ಮುಗಿಸಿದೆ. ಕೊರೊನಾ ಸೋಂಕಿನ ಕಾರಣಕ್ಕಾಗಿ ಕೇವಲ ಎರಡು ನಗರಗಳ ಸ್ಟೇಡಿಯಮ್‌ಗಳಲ್ಲಿ ಮಾತ್ರ ಆಯೋಜಿಸಲಾಗಿದೆ. ಮಹಾರಾಷ್ಟ್ರದ ಮುಂಬೈ ಮತ್ತು ಪುಣೆಯ ಪಿಚ್‌ಗಳಲ್ಲಿ ಮಾತ್ರ ಐಪಿಎಲ್ ಪಂದ್ಯಗಳು ನಡೆಯುತ್ತಿವೆ.

ಈ ಸುದೀರ್ಘ ಸರಣಿಯ ಪಂದ್ಯಗಳು ಹೆಚ್ಚಾಗಿ ಮುಂಬೈನ ವಾಂಖೆಡೆ ಸ್ಟೇಡಿಯಮ್‌ನಲ್ಲಿ ನಡೆಯುತ್ತಿವೆ. ಇದರಿಂದ ವಾಂಖೆಡೆ ಸ್ಟೇಡಿಯಂನ ಆವರಣದಲ್ಲಿರುವ ಗಾರ್ವೇರ್ ಕ್ಲಬ್ ಹೌಸ್, ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಅಧ್ಯಕ್ಷ ವಿಜಯ್ ಪಾಟೀಲ್ ಅವರಿಗೆ ಪತ್ರ ಬರೆದು ಕ್ಲಬ್‌ಗೆ ನಷ್ಟವನ್ನು ಉಲ್ಲೇಖಿಸಿ ಸ್ಥಳದಲ್ಲಿ ಐಪಿಎಲ್ ಪಂದ್ಯಗಳ ಸಂಖ್ಯೆಯನ್ನು 'ಮೊಟಕುಗೊಳಿಸುವಂತೆ' ಮನವಿ ಮಾಡಿದೆ.

ವಾಂಖೆಡೆ ಸ್ಟೇಡಿಯಂನಲ್ಲಿ ಮೇ 22ರಂದು ನಡೆಯಲಿರುವ ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಕೊನೆಯ ಪಂದ್ಯದೊಂದಿಗೆ 20 ಐಪಿಎಲ್ ಪಂದ್ಯಗಳನ್ನು ಆಯೋಜಿಸಲಾಗಿದೆ.

IPL 2022: Financial Loss to Garware Club House; Letter To Cut Wankhede Stadium Matches

"ಐಪಿಎಲ್ ಪಂದ್ಯಗಳ ಕಾರಣ, ಕ್ಲಬ್ ಹೌಸ್‌ಗೆ ಸದಸ್ಯರು ಮತ್ತು ಇತರ ಪ್ರಾಮಾಣಿಕ ಸಂದರ್ಶಕರು, ಮಾರಾಟಗಾರರ ಪ್ರವೇಶಕ್ಕೆ ಪೊಲೀಸ್ ಅಧಿಕಾರಿಗಳು ಸಾಕಷ್ಟು ನಿರ್ಬಂಧಗಳನ್ನು ವಿಧಿಸಿದ್ದಾರೆ. ಈ ಬಾರಿ 5/6 ಪಂದ್ಯಗಳ ಸಂಖ್ಯೆಯನ್ನು 21ಕ್ಕೆ ಹೆಚ್ಚಿಸಲಾಗಿದ್ದು, ಪುಣೆಯಲ್ಲಿ ನಡೆಯಲಿರುವ ಪಂದ್ಯಗಳನ್ನು ವಾಂಖೆಡೆ ಸ್ಟೇಡಿಯಂಗೆ ಸ್ಥಳಾಂತರಿಸುವ ಸಾಧ್ಯತೆಯೂ ಇದೆ.

ಇದರಿಂದಾಗಿ ನಮ್ಮ ಸದಸ್ಯರು ಸಾಕಷ್ಟು ಅನಾನುಕೂಲತೆ ಮತ್ತು ಕ್ಲಬ್ ಹೌಸ್‌ಗೆ ಹೆಚ್ಚಿನ ಆರ್ಥಿಕ ನಷ್ಟವನ್ನು ಉಂಟಾಗುತ್ತದೆ ಎಂದು ಗಾರ್ವೇರ್ ಕ್ಲಬ್ ಉಪಾಧ್ಯಕ್ಷ ರಾಜ್ ಪುರೋಹಿತ್ ಏಪ್ರಿಲ್ 26ರಂದು ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಅಧ್ಯಕ್ಷ ವಿಜಯ್ ಪಾಟೀಲ್ ಅವರಿಗೆ ಬರೆದಿದ್ದಾರೆ.

ಶಾಲಾ-ಕಾಲೇಜುಗಳಲ್ಲಿ ಬೇಸಿಗೆ ರಜೆ ಇರುವ ಕಾರಣ, ಸದಸ್ಯರ ಮಕ್ಕಳು ಸ್ಥಳದಲ್ಲಿ ಕ್ರೀಡೆ, ಜಿಮ್ ಮತ್ತು ಈಜುಕೊಳ ಸೌಲಭ್ಯಗಳನ್ನು ಪಡೆಯಲು ಬಯಸುತ್ತಾರೆ ಎಂದು ಪುರೋಹಿತ್ ತಿಳಿಸಿದ್ದು, "ಆದರೆ ಐಪಿಎಲ್ ಕ್ರಿಕೆಟ್ ಪಂದ್ಯಗಳ ಕಾರಣ, ಸದಸ್ಯರು ಪೊಲೀಸ್ ತಪಾಸಣೆಗೆ ಒಳಗಾಗಬೇಕಾಗುತ್ತದೆ, ಗೇಟ್‌ನ ಹೊರಗೆ ನಿಂತು ಭದ್ರತಾ ಸಿಬ್ಬಂದಿಯೊಂದಿಗೆ ವ್ಯವಹರಿಸಿ ಪ್ರವೇಶಕ್ಕೆ ಅನುಮತಿ ಪಡೆಯಬೇಕಾಗುತ್ತದೆ," ಎಂದು ಹೇಳಿದ್ದಾರೆ.

ಇನ್ನು ಮುಂದುವರೆಸಿ, "ಕ್ಲಬ್ ಹೌಸ್ ಸೌಲಭ್ಯಗಳನ್ನು ಪಡೆಯಲು ಸದಸ್ಯರು ತಮ್ಮ ಅತಿಥಿಗಳೊಂದಿಗೆ ಬಂದರೆ, ಅತಿಥಿಗಳು ಹಿಂತಿರುಗಬೇಕು ಅಥವಾ ಅತಿಥಿಗಳೊಂದಿಗೆ ಸದಸ್ಯರೂ ಹಿಂತಿರುಗಬೇಕಾಗಿದೆ. ಹೆಚ್ಚುವರಿಯಾಗಿ, ಸದಸ್ಯರು ಪಂದ್ಯದ ದಿನಗಳಲ್ಲಿ ಪಾರ್ಕಿಂಗ್ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಮತ್ತು ತಮ್ಮ ವಾಹನಗಳ ಸುರಕ್ಷತೆಯನ್ನು ರಾಜಿ ಮಾಡಿಕೊಳ್ಳುವ ಮೂಲಕ ತಮ್ಮ ವಾಹನಗಳನ್ನು ರಸ್ತೆಯ ಮೇಲೆ ನಿಲ್ಲಿಸಲು ಒತ್ತಾಯಿಸಲಾಗುತ್ತದೆ," ಎಂದು ಗಾರ್ವೇರ್ ಕ್ಲಬ್ ಉಪಾಧ್ಯಕ್ಷ ರಾಜ್ ಪುರೋಹಿತ್ ಪತ್ರ ಬರೆದಿದ್ದಾರೆ.

ಇಂತಹ ನಿರ್ಬಂಧಗಳಿಂದಾಗಿ, ಗಾರ್ವೇರ್ ಕ್ಲಬ್‌ನ ಸದಸ್ಯರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಮತ್ತು ಕೊಠಡಿಗಳು ಮತ್ತು ಔತಣಕೂಟಗಳ ಬುಕ್ಕಿಂಗ್‌ಗಳನ್ನು ರದ್ದುಗೊಳಿಸಬೇಕಾಗಿದೆ. "ಇದಲ್ಲದೆ, ಊಟ ಮತ್ತು ಬಾರ್ ಸೌಲಭ್ಯಗಳನ್ನು ಪಡೆಯುವ ಸದಸ್ಯರ ಸಂಖ್ಯೆಯೂ ಕಡಿಮೆಯಾಗಿದೆ. ಇದು ಕ್ಲಬ್ ಹೌಸ್‌ನ ಆರ್ಥಿಕ ಸ್ಥಿತಿಯ ಮೇಲೆ ಗಣನೀಯವಾಗಿ ಪರಿಣಾಮ ಬೀರಿದೆ. 2022ರ ಏಪ್ರಿಲ್ ಮತ್ತು ಮೇ ಅವಧಿಯಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ಅನೇಕ ಐಪಿಎಲ್ ಪಂದ್ಯಗಳು ನಡೆಯುವುದರಿಂದ ಸುಮಾರು ಕೋಟಿಗಳಷ್ಟು ಆದಾಯವು ನಷ್ಟವಾಗಿದೆ," ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

Story first published: Tuesday, May 3, 2022, 11:37 [IST]
Other articles published on May 3, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+