ಧೋನಿ, ಹಾರ್ದಿಕ್ ಅಲ್ಲ; ಈ ಐಪಿಎಲ್‌ನ ಬೆಸ್ಟ್ ಕ್ಯಾಪ್ಟನ್ ಈತನೇ ಎಂದ ಮೈಕಲ್ ವಾನ್

ಇಂಡಿಯನ್ ಪ್ರೀಮಿಯರ್ ಲೀಗ್‌ನ 15ನೇ ಆವೃತ್ತಿ ಪ್ಲೇಆಫ್ ಹಂತಕ್ಕೆ ಹತ್ತಿರದಲ್ಲಿದೆ. ಈ ಹಂತದಲ್ಲಿ ಎಲ್ಲಾ ತಂಡಗಳು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದುಕೊಳ್ಳಲು ಸರ್ವ ಪ್ರಯತ್ನವನ್ನು ನಡೆಸುತ್ತಿದೆ. ಎಲ್ಲಾ ತಂಡಗಳು ಕೂಡ ಕನಿಷ್ಠ 11 ಪಂದ್ಯಗಳನ್ನು ಆಡಿದ್ದು ಮುಂಬೈ ಇಂಡಿಯನ್ಸ್ ಮಾತ್ರವೇ ಟೂರ್ನಿಯಿಂದ ಈ ಹಂತಕ್ಕೆ ಅಧಿಕೃತವಾಗಿ ಹೊರಬಿದ್ದಿರುವ ತಂಡವಾಗಿದೆ.
ಇನ್ನು ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಕಣಕ್ಕಿಳಿದಿರುವ ಎರಡು ತಂಡಗಳಾದ ಗುಜರಾತ್ ಟೈಟನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಇತರ ತಂಡಗಳಿಗೆ ಸವಾಲಾಗಿದೆ. ಇನ್ನು ಮಂಗಳವಾರ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿರುವ ಗುಜರಾತ್ ಟೈಟನ್ಸ್ ತಂಡ ಪ್ಲೇಆಫ್ ಹಂತಕ್ಕೆ ಅಧಿಕೃತವಾಗಿ ಪ್ರವೇಶ ಪಡೆದುಕೊಂಡಿದೆ. ಪ್ಲೇಆಫ್ ಹಂತಕ್ಕೇರಲು ಉಳಿದ ಮೂರು ಸ್ಥಾನಗಳಿದ್ದು ಅವುಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಪ್ರಯತ್ನವನ್ನು ಇತರ ತಂಡಗಳು ನಡೆಸಲಿದೆ.
ಕ್ರಿಕ್‌ಬಜ್‌ಗೆ ನೀಡಿದ ಸಂದರ್ಶನದಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಐಪಿಎಲ್ 15ನೇ ಆವೃತ್ತಿಯ ನಾಯಕರ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಈ ಆವೃತ್ತಿಯಲ್ಲಿ ಅತ್ಯುತ್ತಮ ನಾಯಕ ಯಾರು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾ. ಕುತೂಹಲಕಾರಿ ಸಂಗತಿಯೆಂದರೆ ಮೈಕಲ್ ವಾನ್ ಆಯ್ಕೆ ಮಾಡಿದ ಹೆಸರು ಆರ್‌ಸಿಬಿ ಅಭಿಮಾನಿಗಳಿಗೆ ಸಹಜವಾಗಿಯೇ ಖುಷಿ ಹೆಚ್ಚಿಸಿದೆ.

ಆರ್‌ಸಿಬಿ ನಾಯಕನನ್ನು ಹೆಸರಿಸಿದ ಮೈಕಲ್ ವಾನ್
ಒಂದಲ್ಲಾ ಒಂದು ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು ಸುದ್ದಿಯಲ್ಲಿರುವ ಮೈಕಲ್ ವಾನ್ ಈ ಬಾರಿ ಐಪಿಎಲ್ 15ನೇ ಆವೃತ್ತಿಯ ಅತ್ಯುತ್ತಮ ನಾಯಕ ಯಾರು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಈ ಬಾರಿಯ ಐಪಿಎಲ್‌ನ ಅತ್ಯುತ್ತಮ ನಾಯಕ ಎಂದಿದ್ದಾರೆ ಮೈಕಲ್ ವಾನ್. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಗೆಲುವಿನ ಬಳಿಕ ವಾನ್ ಈ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

"ಆರ್‌ಸಿಬಿ ಟ್ರೋಫಿ ಗೆಲ್ಲಲು ಉತ್ತಮ ಅವಕಾಶ"
ಮುಂದುವರಿದು ಮಾತನಾಡಿದ ಮೈಕಲ್ ವಾನ್ ಬೆಂಗಳೂರು ಮೂಲದ ಫ್ರಾಂಚೈಸಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲಲು ಅತ್ಯುತ್ತಮ ಅವಕಾಶವಿದೆ ಎಂದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದಾಗ ಫಾಫ್ ತಂಡ ಟ್ರೋಫಿಯನ್ನು ಗೆಲ್ಲುವಂತೆ ಮಾಡಿದ್ದರು ಎಂದು ದಕ್ಷಿಣ ಆಫ್ರಿಕಾ ಮೂಲದ ಕ್ರಿಕೆಟಿಗನ ಬಗ್ಗೆ ವಿಶೇಷ ಭರವಸೆಯ ಮಾತುಗಳನ್ನು ಆಡಿದ್ದಾರೆ ಇಂಗ್ಲೆಂಡ್ ತಂಡದ ಮಾಜಿ ನಾಯಕ.

ಅತ್ಯುತ್ತಮ ನಾಯಕ, ಅದ್ಭುತ ಚಿಂತಕರಾಗಿದ್ದರು
ಮೈಕಲ್ ವಾನ್ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಉತ್ತಮ ನಾಯಕ ಹಾಗೂ ಅದ್ಭುತ ಚಿಂತಕ ಎಂದಿದ್ದಾರೆ. "ನನ್ನ ಪ್ರಕಾರ ಆತ ಈ ಐಪಿಎಲ್‌ನ ಅತ್ಯುತ್ಯಮ ನಾಯಕ. ಆತನನ್ನು ನಾನು ಉತ್ತಮ ಚಿಂತಕ ಎಂದು ಭಾವಿಸುತ್ತೇನೆ. ಬ್ಯಾಟರ್ ಆಗಿ ಕಣಕ್ಕಿಳಿದಾಗ ಹಾಗೂ ನಾಯಕನಾಗಿ ಮೈದಾನಕ್ಕಿಳಿದಾಗ ಆತ ಇದನ್ನು ಸಾಬೀತುಪಡಿಸಿದ್ದಾರೆ. ಆತ ನಾಯಕನಾಗಿ ದೀರ್ಘ ಸಮಯದಿಂದ ಇರುವ ರೀತಿ ಹಾಗೂ ತಂಡವನ್ನು ಅತ್ಯುತ್ತಮವಾಗಿ ನಿರ್ವಹಿಸುವ ರೀತಿಯಿಂದಾಗಿ ಆತನನ್ನು ನಾನು ಇಷ್ಟಪಡುತ್ತೇನೆ" ಎಂದಿದ್ದಾರೆ.

ಫಾಫ್ ಕಾರಣದಿಂದಾಗಿ ಅತ್ಯುತ್ತಮ ಅವಕಾಶವಿದೆ ಎಂದಿದ್ದೆ
"ನಾನು ಇದನ್ನು ಆರಂಭದಿಂದಲೇ ಹೇಳಿಕೊಂಡಿದ್ದೆ. ಫಾಫ್ ಅವರ ಕಾರಣದಿಂದಾಗಿ ಆರ್‌ಸಿಇಬಿ ಈ ಬಾರಿ ಉತ್ತಮ ಅವಕಾಶವನ್ನು ಹೊಂದಿದೆ. ಯಾಕೆಂದರೆ ನೀವು ಅತ್ಯುತ್ತಮ ಅಸ್ತ್ರಗಳನ್ನು ಹೊಂದಿದ್ದೀರಿ. ಅಲ್ಲದೆ ಅತ್ಯುತ್ತಮ ಕ್ರಿಕೆಟ್ ಚಿಂತಕರನ್ನು ಕೂಡ ಹೊಂದಿದ್ದೀರಿ. ಚೆನ್ನೈ ತಂಡದಲ್ಲಿದ್ದುಕೊಂಡು ಫಾಫ್ ಟ್ರೋಫಿಗಳನ್ನು ಗೆದ್ದಿದ್ದಾರೆ. ಹಾಗಾಗಿ ಅವರಿಗೆ ಐಪಿಎಲ್‌ನಲ್ಲಿ ಗೆಲುವು ಸಾಧಿಸುವುದು ಹೇಗೆ ಎಂಬುದು ತಿಳಿದಿದೆ." ಎಂದಿದ್ದಾರೆ ಮೈಕಲ್ ವಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications