
ಈ ಬಾರಿಯ ಐಪಿಎಲ್ ಟೂರ್ನಿ ರೋಚಕವಾಗಿ ಆರಂಭವಾಗಿದ್ದು ಮೊದಲ ವಾರದಲ್ಲಿಯೇ ಅಭಿಮಾನಿಗಲ ಮನರಂಜಿಸುವಲ್ಲಿ ಟೂರ್ನಿ ಯಶಸ್ವಿಯಾಗಿದೆ. ಪಂದ್ಯಗಳು ಅಂತಿಮ ಹಂತದವರೆಗೂ ಕುತೂಹಲವನ್ನು ಮೂಡಿಸುತ್ತಿರುವುದು ಟೂರ್ನಿಯ ರೋಚಕತೆಯನ್ನು ಹೆಚ್ಚಿಸಿದೆ. ಈ ಸಂದರ್ಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಶ್ರೇಯಸ್ ಐಯ್ಯರ್ ನಾಯಕತ್ವದಲ್ಲಿ ಕೊಲ್ಕತ್ತಾ ಮೂಲದ ಫ್ರಾಂಚೈಸಿ ಉತ್ತಮ ಭವಿಷ್ಯವನ್ನು ಹೊಂದಿದೆ ಎಂದಿದ್ದಾರೆ ಇರ್ಫಾನ್ ಪಠಾಣ್.
ಈ ಬಾರಿಯ ಹರಾಜಿನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಹರಾಜಾಗಿದ್ದ ಶ್ರೇಯಸ್ ಐಯ್ಯರ್ ನಂತರ ತಂಡದ ನಾಯಕನಾಗಿ ನೇಮಕಗೊಂಡಿದ್ದರು. ಟೂರ್ನಿಯಲ್ಲಿ ಕೆಕೆಆರ್ ತಂಡ ಈವರೆಗೆ ಎರಡು ಪಂದ್ಯಗಳನ್ನು ಆಡಿದ್ದು ಈ ಎರಡು ಪಂದ್ಯಗಳಲ್ಲಿಯೂ ನಾಯಕನಾಗಿ ಶ್ರೇಯಸ್ ಐಯ್ಯರ್ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ ವಿರುದ್ಧದ ಪಂದ್ಯದೊಂದಿಗೆ ಟೂರ್ನಿಯನ್ನು ಆರಂಭಿಸಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದ ಕಳಪೆ ಪ್ರದರ್ಶನದ ಹೊರತಾಗಿಯೂ ಬೌಲಿಂಗ್‌ನಲ್ಲಿ ಅದ್ಭುತ ಹೋರಾಟ ನಡೆಸಿದ ತಂಡ ಹೋರಾಡಿ ಸೋಲು ಅನುಭವಿಸಿತ್ತು.
ಈ ಎರಡು ಪಂದ್ಯಗಳನ್ನು ನೋಡಿದ ನಂತರ ಮಾತನಾಡಿದ ಇರ್ಫಾನ್ ಪಠಾಣ್ "ಶ್ರೇಯಸ್ ಐಯ್ಯರ್ ಓರ್ವ ಚಾಣಾಕ್ಷ ನಾಯಕ. ಶ್ರೇಯಸ್ ಐಯ್ಯರ್ ಕೂಡ ರೋಹಿತ್ ಶರ್ಮಾ 2013ರಲ್ಲಿ ಮುಂಬೈ ಇಂಡಿಯನಮ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡ ರೀತಿಯಲ್ಲಿಯೇ ನಾಯಕತ್ವವನ್ನು ಟೂರ್ನಿಯ ಮಧ್ಯಭಾಗದಲ್ಲಿ ವಹಿಸಿಕೊಂಡರು" ಎಂದಿದ್ದಾರೆ ಇರ್ಫಾನ್ ಪಠಾಣ್.
"ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಶ್ರೇಯಸ್ ಐಯ್ಯರ್ ರಿಕಿ ಪಾಂಟಿಂಗ್ ಮಾರ್ಗದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ನಾಯಕತ್ವ ವಹಿಸಿಕೊಂಡ ಮೊದಲ ಆವೃತ್ತಿಯಲ್ಲಿಯೇ ಐಯ್ಯರ್ ತಮ್ಮ ನಿರ್ಧಾರಗಳನ್ನು ಉತ್ತಮಗೊಳಿಸುತ್ತಾ ಸಾಗಿದ್ದರು. ಈ ಬಾರಿಯ ಟೂರ್ನಿ ಮುಂದುವರಿಯುತ್ತಿದ್ದಂತೆಯೇ ಶ್ರೇಯಸ್ ಐಯ್ಯರ್ ಅವರ ನಾಯಕತ್ವದ ಬಗ್ಗೆ ಮತ್ತಷ್ಟು ಪರಿಚಯವಾಗಲಿದೆ ಎಂದಿದ್ದಾರೆ ಇರ್ಫಾನ್ ಪಠಾಣ್.
ಕೆಕೆಆರ್ ಸಂಪೂರ್ಣ ಸ್ಕ್ವಾಡ್: ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಶ್ರೇಯಸ್ ಅಯ್ಯರ್(ನಾಯಕ), ಪ್ಯಾಟ್ ಕಮ್ಮಿನ್ಸ್, ನಿತೀಶ್ ರಾಣಾ, ಶಿವಂ ಮಾವಿ, ಶೆಲ್ಡನ್ ಜಾಕ್ಸನ್, ಅಜಿಂಕ್ಯ ರಹಾನೆ, ರಿಂಕು ಸಿಂಗ್, ಅನುಕುಲ್ ರಾಯ್, ರಸಿಖ್ ದಾರ್, ಚಮಿಕಾ ಕರುಣಾರತ್ನೆ, ಬಾಬಾ ಇಂದ್ರಜಿತ್, ಬಾಬಾ ಇಂದ್ರಜಿತ್ , ಅಭಿಜೀತ್ ತೋಮರ್, ಸ್ಯಾಮ್ ಬಿಲ್ಲಿಂಗ್ಸ್, ಆರೋನ್ ಫಿಂಚ್, ರಮೇಶ್ ಕುಮಾರ್, ಮೊಹಮ್ಮದ್ ನಬಿ, ಅಮನ್ ಖಾನ್, ಉಮೇಶ್ ಯಾದವ್.