Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022: ಗೌತಮ್ ಗಂಭೀರ್ ತಲೆ 'ಚಾಚಾ ಚೌದ್ರಿ'ಯಂತೆ ಚುರುಕು : ಆಕಾಶ್ ಚೋಪ್ರಾ

IPL 2022: Gautam Gambhirs brain is like chacha choudari Says Aakash Chopra

ಐಪಿಎಲ್ 2022ರ ಆವೃತ್ತಿಯಲ್ಲಿ ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್‌ ಅಬ್ಬರದ ಆಟವಾಡುತ್ತ ಪಂದ್ಯಗಳನ್ನ ಜಯಿಸುತ್ತಿದೆ. ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋತ ಬಳಿಕ ಹಿಂದಿರುಗಿ ನೋಡದ, ಎಲ್‌ಎಸ್‌ಜಿ ಬಲಿಷ್ಠ ತಂಡಗಳನ್ನ ಮಣ್ಣು ಮುಕ್ಕಿಸಿದೆ.

ಗೌತಮ ಗಂಭೀರ್ ಅವರ ಚಿಂತನಶೀಲ ನಿರ್ಧಾರಗಳು ಐಪಿಎಲ್ 2022ರಲ್ಲಿ ಲಕ್ನೋ ಸೂಪರ್‌ ಜೈಂಟ್ಸ್ ಯಶಸ್ಸಿಗೆ ಗಣನೀಯವಾಗಿ ಕೊಡುಗೆ ನೀಡಿದ್ದು ಅವರು ಚಾಚಾ ಚೌದ್ರಿಯಂತೆ ಚುರುಕು ಬುದ್ದಿವಂತರು ಎಂದು ಕ್ರಿಕೆಟಿಗ ಆಕಾಶ ಚೋಪ್ರಾ ಶ್ಲಾಘಿಸಿದ್ದಾರೆ.

ಗುರುವಾರ ರಾತ್ರಿ (ಏ. 08) ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಪಂದ್ಯ ಜಯಿಸಿದ ಎಲ್‌ಎಸ್‌ಜಿ ತಂಡವು ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಲಕ್ನೋ ಆಟಕ್ಕೆ ಮೆಚ್ಚಿರುವ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೆ.ಎಲ್ ರಾಹುಲ್ ನಾಯಕತ್ವದ ಜೊತೆಗೆ , ಮೆಂಟರ್‌ ಗೌತಮ್ ಗಂಭೀರ್ ಅನ್ನು ಹೊಗಳಿ ಅಟ್ಟಕ್ಕೇರಿಸಲಾಗಿದೆ.

ಈ ಪಂದ್ಯದ ಕುರಿತಾಗಿ ಮಾತನಾಡಿರುವ ಟೀಂ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ ಅವರು ಗೌತಮ್ ಗಂಭೀರ್ ಅವರ ಮೆದುಳು ಚಾಚಾ ಚೌಧರಿಯಂತೆ ಅತಿ ಚುರುಕಾಗಿದ್ದು, ಅತಿ ವೇಗವಾಗಿ ಪರಿಸ್ಥಿತಿಯನ್ನು ಅರಿತುಕೊಂಡು ತಂಡದ ಬ್ಯಾಟಿಂಗ್‌ ವಿಭಾಗದಲ್ಲಿ ಬದಲಾವಣೆಯನ್ನು ತರುವ ಚಾಕಚಕ್ಯತೆಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಗಂಭೀರ್ ಕೆಲವೊಮ್ಮೆ ಕೃನಾಲ್ ಪಾಂಡ್ಯ ಅವರನ್ನು ಟಾಪ್ ಬ್ಯಾಟಿಂಗ್ ಆರ್ಡರ್‌ಗೆ ಕಳುಹಿಸುತ್ತಾರೆ ಮತ್ತು ಇತರ ಸಮಯಗಳಲ್ಲಿ ಬಡೋನಿ, ಕೆಲವೊಮ್ಮೆ ಹೂಡಾ ಅವರನ್ನು ಆಯ್ಕೆಮಾಡು ತ್ತಾರೆ ಎಂದ ಹೊಗಳಿದ್ದಾರೆ.

ಎದುರಾಳಿ ತಂಡಗಳಲ್ಲಿ ಎಡಗೈ ಬೌಲರ್‌ಗಳಿದ್ದು, ಮನೀಶ್ ಪಾಂಡೆ ಅವರನ್ನು ಕೈ ಬಿಟ್ಟು ತಂಡದ ಬೌಲಿಂಗ್ ಅನ್ನು ಬಲಪಡಿಸಬೇಕು. ಈ ವಿಚಾರವಾಗಿ ಕೃಷ್ಣಪ್ಪ ಗೌತಮ್ ಅವರಿಗೆ ಅವಕಾಶ ನೀಡುವುದೇ ಅತಿ ಸೂಕ್ತ ಎಂದು ಸಲಹೆ ನೀಡಿದ್ದಾರೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಕೆ.ಎಲ್ ರಾಹುಲ್ ಪಡೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು 149 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ರವಿ ಬಿಷ್ಣೋಯಿ, ಕೃಷ್ಣಪ್ಪ ಗೌತಮ್ ಮತ್ತು ಕೃನಾಲ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಸಹ ಪಡೆದರು. ನಂತರ ಬ್ಯಾಟಿಂಗ್ ಆರಂಭಿಸಿದ ಎಲ್ಎಸ್‌ಜಿ ತಂಡ 6 ವಿಕೆಟ್‌ಗಳ ಜಯವನ್ನು ಸಾಧಿಸಿತು.

ಆರಂಭಿಕ ಜೊತೆಯಾಟ ಆಡಿದ ನಾಯಕ ಕೆ.ಎಲ್. ರಾಹುಲ್ ಮತ್ತು ಕ್ವಿಂಟನ್ ಡಿಕಾಕ್ 72 ಕಲೆಹಾಕಿದರು. ನಂತರ ನಾಯಕ ಕೆ.ಎಲ್ ರಾಹುಲ್ 25ಎಸೆತಗಳಲ್ಲಿ 24 ಗಳಿಸಿ ಪೆವಿಲಿಯತ್ತ ತೆರಳಿದರು. ಭರ್ಜರಿ ಹೊಡೆತಗಳ ಮೂಲಕ ಡಿಕಾಕ್ 52 ಎಸೆತಗಳಲ್ಲಿ 80 ಕಲೆಹಾಕಿದರು. ನಂತರ ಆಗಮಿಸಿದ ಕೃನಾಲ್ 14 ಎಸೆತಗಳಲ್ಲಿ 19 ರನ್ ಗಳಿಸುವ ಮೂಲಕ ತಂಡವನ್ನು ವಿಜಯದತ್ತ ಸಾಗಿಸಿದರು.

ಎಸ್‌ಎಲ್‌ಜಿಗೆ ಹ್ಯಾಟ್ರಿಕ್ ಜಯ

ರಸ್ತೆಯಲ್ಲೇ ಬಸ್ ನಿಲ್ಲಿಸಿದ ಧೋನಿ ಜಾಹೀರಾತು ಬ್ಯಾನ್? ಏನಿದು ಕಿರಿಕ್?? | Oneindia Kannada

ಪ್ರಸಕ್ತ ಸಾಲಿನಲ್ಲಿ ಮೊದಲ ಪಂದ್ಯವನ್ನೇ ಸೋತಿದ್ದ ಎಸ್‌ಎಲ್‌ಜಿ ಇನ್ನೂಳಿದ ಮೂರು ಪಂದ್ಯಗಳಲ್ಲಿ ಸತತವಾಗಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಜಯವನ್ನು ಸಾಧಿಸಿದ್ದಾರೆ. ರವಿ ಬಿಷ್ನೋಯ್ ಮತ್ತು ಕೃಷ್ಣಪ್ಪ ಗೌತಮ್ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಮತ್ತು ಕ್ವಿಂಟನ್ ಡಿಕಾಕ್ ಅವರ ಬ್ಯಾಟಿಂಗ್ ವೇಗದ ವೈಖರಿಯಿಂದ ಡೆಲ್ಲಿ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಅಂಕಪಟ್ಟಿಯಲ್ಲಿ ದ್ವೀತಿಯ ಸ್ಥಾನ ಪಡೆದುಕೊಂಡಿದೆ.

Story first published: Saturday, April 9, 2022, 9:39 [IST]
Other articles published on Apr 9, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+