Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹೀಂದ್ರಾದಲ್ಲಿ ' MAHI' ಎಂಬ ಅಕ್ಷರಗಳಿರುವುದಕ್ಕೆ ಸಂತೋಷವಾಗಿದೆ: ಆನಂದ್ ಮಹೀಂದ್ರಾ

MSD

ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ಗೆಲುವಿನ ರೂವಾರಿ ಎಂ.ಎಸ್‌ ಧೋನಿಗೆ ಪ್ರದರ್ಶನಕ್ಕೆ ಭಾರೀ ಶ್ಲಾಘನೆ ವ್ಯಕ್ರವಾಗಿದೆ. ಮುಂಬೈ ಮೂಲದ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ವಿಶೇಷ ಟ್ವೀಟ್‌ನೊಂದಿಗೆ ಧೋನಿ ಅವರ ಭರ್ಜರಿ ಪ್ರದರ್ಶನವನ್ನು ಕೊಂಡಾಡಿದ್ದಾರೆ.

ಅನುಭವಿ ವಿಕೆಟ್‌ ಕೀಪರ್ ಬ್ಯಾಟರ್ 156 ರನ್‌ಗಳ ಚೇಸಿಂಗ್ ನಲ್ಲಿ ಕೊನೆಯ ನಾಲ್ಕು ಎಸೆತಗಲ್ಲಿ 16 ರನ್ ಗಳಿಸಿ ತಮ್ಮ ಫ್ರಾಂಚೈಸಿಯನ್ನು ಗೆಲುವಿನತ್ತ ತೆಗೆದುಕೊಂಡು ಹೋಗಿದ್ದಾರೆ. ಕೊನೆಯ ನಾಲ್ಕು ಎಸೆತಗಳಲ್ಲಿ ಒಂದು ಸಿಕ್ಸರ್, ಎರಡು ಬೌಂಡರಿ ಸೇರಿದಂತೆ ಎರಡು ರನ್ ಗಳಿಸುವ ಮೂಲಕ ಅತ್ಯುತ್ತಮ ಫಿನಿಷರ್ ಎಂಬುದನ್ನು ಸಾಬೀತು ಪಡಿಸಿದ್ದಾರೆ.

40 ವರ್ಷದ ಧೋನಿ, ಈ ಆವೃತ್ತಿಯಲ್ಲಿ ಉತ್ತಮ ಫಾರ್ಮನಲ್ಲಿದ್ದಾರೆ. ಮುಂಬೈ ವಿರುದ್ದದ ಪಂದ್ಯದಲ್ಲಿ ಏಳನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಆಗಮಿಸಿ, ಕೇವಲ 13 ಎಸೆತಗಳಲ್ಲಿ ಅಜೇಯ 28 ರನ್ ಗಳಿಸಿದರು. ಜಯದೇವ್ ಉನಾದ್ಕಟ್ ಅವರ ಕೊನೆಯ ಓವರ್‌ನಲ್ಲಿ ಸಿಎಸ್‌ಕೆಗೆ 17 ರನ್ ಅಗತ್ಯವಿತ್ತು ಮತ್ತು ಧೋನಿ ಅದನ್ನು ಕೊನೆಯ ಎಸೆತದಲ್ಲಿ ನಾಲ್ಕು ರನ್‌ಗೆ ಇಳಿಸಿದರು. ಅಲ್ಲದೆ ಕೊನೆಯಲ್ಲಿ ಬೌಂಡರಿ ಸಿಡಿಸಿ ಯಶಸ್ವಿಯಾದ್ರು.

ಧೋನಿ ಅವರ ಫಿನಿಶಿಂಗ್ ಶೈಲಿಗೆ ವಿಶ್ವದಾದ್ಯಂತ ಅನೇಕ ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ವಿಶ್ಲೇಷಕರು ಶಬ್ಬಾಸ್‌ಗಿರಿ ನೀಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಕೂಡ ಧೋನಿ ಆಟವನ್ನು ಹೊಗಳಿ ಟ್ವೀಟ್ ಮಾಡಿದೆ. ಸ್ಟಾರ್ ಸ್ಪೋರ್ಟ್ಸ್‌ನ ಟ್ವೀಟ್‌ಗೆ ಆನಂದ್ ಮಹೀಂದ್ರ ಪ್ರತಿಕ್ರಿಯಿಸಿದ್ದು, 'ಮಹೀಂದ್ರಾ'ದಲ್ಲಿ " ಮಹಿ" ಎಂಬ ಅಕ್ಷರಗಳನ್ನು ಹೊಂದಿರುವುದು ಸಂತೋಷದ ವಿಷಯವಾಗಿದೆ ಎಂದು ಟ್ವಿಟ್ ಮಾಡಿದ್ದಾರೆ.

David Warner ಔಟ್ ಆದರೂ ಪಿಚ್ ಬಿಟ್ಟು ಹೋಗಲಿಲ್ಲ | Oneindia Kannada

''ಒಳ್ಳೆಯದು, ಮಹಿ-ಂದ್ರಾದಲ್ಲಿ MAHI ಅಕ್ಷರಗಳನ್ನು ಹೊಂದಿದ್ದಕ್ಕಾಗಿ ನನಗೆ ಸಂತೋಷವಾಗಿದೆ ಎಂದು ನಾನು ಹೇಳಬಲ್ಲೆ! #MSDhoni ಅದ್ಬುತ ಫಿನಿಶ್" ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

Story first published: Saturday, April 23, 2022, 10:07 [IST]
Other articles published on Apr 23, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+