For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ಗೆ ಆರಂಭದಲ್ಲಿಯೇ ಹಿನ್ನಡೆ: ಮೊದಲ ವಾರ ಅಲಭ್ಯವಾಗಲಿರುವ ಆಟಗಾರರ ಪಟ್ಟಿ

IPL 2022: Glenn Maxwell to Quinton de Kock Top foreign Players Who Could Miss First Week of IPL

ಐಪಿಎಲ್ ಟೂರ್ನಿಯ ಆರಂಭಕ್ಕೆ ಇನ್ನು ಎರಡು ವಾರಗಳಷ್ಟೇ ಬಾಕಿಯಿದೆ. ಬೆಂಗಳೂರಿನಲ್ಲಿ ನಡೆಯುತ್ತಿರು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯ ಅಂತಿಮಗೊಳ್ಳುತ್ತಿದ್ದಂತೆಯೇ ಕ್ರಿಕಕೆಟ್ ಅಭಿಮಾನಿಗಳ ಸಂಪೂರ್ಣ ಚಿತ್ತ ಐಪಿಎಲ್‌ನತ್ತ ಹೊರಳಲಿದೆ. ಈಗಾಗಲೇ ಕೆಲ ತಂಡಗಳು ಅಭ್ಯಾಸ ಶಿಬಿರಗಳನ್ನು ಕೂಡ ಆರಂಭಿಸಿದ್ದು ಭರದ ಸಿದ್ಧತೆ ನಡೆಸುತ್ತಿದೆ.

ಈ ಮಧ್ಯೆ ಐಪಿಎಲ್‌ನಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಕೆಲ ಸ್ಟಾರ್ ಆಟಗಾರರು ಟೂರ್ನಿ ಆರಂಭದಲ್ಲಿಯೇ ಅಲಭ್ಯವಾಗುವುದು ಬಹುತೇಕ ಖಚಿತವಾಗಿದೆ. ತಮ್ಮ ದೇಶದ ಪರವಾಹಿ ದ್ವಿಪಕ್ಷೀಯ ಸರಣಿಯಲ್ಲಿ ಭಾಗಿಯಾಗಲಿರುವ ಕಾರಣದಿಂದಾಗಿ ಈ ಆಟಗಾರರು ಟೂರ್ನಿಯ ಆರಂಭಿಕ ವಾರದಲ್ಲಿ ಹೊರಗುಳಿಯಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಹಾಗಾದರೆ ಮೊದಲ ವಾರದ ಐಪಿಎಲ್ ಟೂರ್ನಿಯಿಂದ ಹೊರಗುಳಿಯಲಿರುವ ಸ್ಟಾರ್ ವಿದೇಶಿ ಆಟಗಾರರು ಯಾರ್ಯಾರು? ಮುಂದೆ ಓದಿ..

ಐಪಿಎಲ್ 2022 vs ದ್ವಿಪಕ್ಷೀಯ ಸರಣಿಗಳು

ಐಪಿಎಲ್ 2022 vs ದ್ವಿಪಕ್ಷೀಯ ಸರಣಿಗಳು

ಈ ಬಾರಿಯ ಐಪಿಎಲ್ ಆವೃತ್ತಿಯ ಆರಂಭದಲ್ಲಿ ಪ್ರಮುಖ ವಿದೇಶಿ ಆಟಗಾರರು ಅಲಭ್ಯವಾಗಲು ಕಾರಣ ಮೂರು ದ್ವಿಪಕ್ಷೀಯ ಸರಣಿಯಗಳು ಈ ಅವಧಿಯಲ್ಲಿ ನಡೆಯುತ್ತಿದೆ. ಈ ಕಾರಣದಿಂದಾಗಿ ದ್ವಿಪಕ್ಷೀಯ ಸರಣಿಯಲ್ಲಿ ಭಾಗಿಯಾಗುತ್ತಿರುವ ರಾಷ್ಟ್ರೀಯ ತಂಡಗಳ ಆಟಗಾರರು ಟೂರ್ನಿಯ ಆರಂಭಿಕ ಹಂತದಲ್ಲಿ ಅಲಭ್ಯವಾಗಲಿದ್ದಾರೆ.

ಐಪಿಎಲ್ ವೇಳಾಪಟ್ಟಿಗೆ ಅಡ್ಡಿಯಾಗುತ್ತಿರುವ ದ್ವಿಪಕ್ಷೀಯ ಸರಣಿಗಳು

ಐಪಿಎಲ್ ವೇಳಾಪಟ್ಟಿಗೆ ಅಡ್ಡಿಯಾಗುತ್ತಿರುವ ದ್ವಿಪಕ್ಷೀಯ ಸರಣಿಗಳು

ವೆಸ್ಟ್ ಇಂಡೀಸ್ vs ಇಂಗ್ಲೆಂಡ್: ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಈಗಾಗಲೇ ಟೆಸ್ಟ್ ಸರಣಿಯಲ್ಲಿ ಆಡುತ್ತಿದ್ದು ಈ ಸರಣಿ ಅಂತಿಮ ಪಂದ್ಯ ಮಾರ್ಚ್ 28ರಿಂದ ಆರಂಭವಾಗಲಿದೆ. ಹೀಗಾಗಿ ಐಪಿಎಲ್‌ನಲ್ಲಿ ಒಪ್ಪಂದ ಹೊಂದಿರುವ, ಈ ಸರಣಿಯಲ್ಲಿ ಭಾಗಿಯಾಗಿರುವ ಇಂಗ್ಲೆಂಡ್ ಆಟಗಾರರು ಮೊದಲ ವಾರದ ಐಪಿಎಲ್ ಟೂರ್ನಿಯಿಂದ ಹೊರಗುಳಿಯಿವ ಸಾಧ್ಯತೆಯಿದೆ.

ಆಸ್ಟ್ರೇಲಿಯಾ vs ಪಾಕಿಸ್ತಾನ: ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳು ಸದ್ಯ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಿದ್ದು ಮೂರು ಪಂದ್ಯಗಳ ಟೆಸ್ಟ್ ಸರಣಿ ಅಂತ್ಯವಾಗುತ್ತಿದ್ದಂತೆಯೇ ಮೂರು ಏಕದಿನ ಹಾಘೂ ಒಂದು ಟಿ20 ಪಂದ್ಯದ ಸರಣಿ ನಡೆಯಲಿದೆ.ಟೆಸ್ಟ್ ಸರಣಿ ಮಾರ್ಚ್ 25ರಂದು ಅಂತ್ಯವಾಗಲಿದ್ದು ಏಪ್ರಿಲ್ 5ರಂದು ಪ್ರವಾಸ ಅಂತ್ಯವಾಗಲಿದೆ.

ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ: ದಕ್ಷಿಣ ಆಪ್ರಿಕಾ ಕ್ರಿಕೆಟ್ ತಂಡ ಬಾಂಗ್ಲಾದೇಶದ ವಿರುದ್ಧ ಮೂರು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದ್ದು ಏಕದಿನ ಮಾರ್ಚ್ 23ರಂದು ಅಂತಿಮವಾಗಲಿದೆ. ಆದರೆ ಟೆಸ್ಟ್ ಪಂದ್ಯ ಅಂತ್ಯವಾಗುವುದು ಏಪ್ರಿಲ್ 12ರಂದು.

ಅಳೆದೂ ತೂಗಿ ಫಾಫ್ ಡು ಪ್ಲೆಸಿಸ್ ಗೆ ಕ್ಯಾಪ್ಟನ್ ಪಟ್ಟ! | Oneindia Kannada
ಐಪಿಎಲ್‌ಗೆ ಮೊದಲ ವಾರ ಅಲಭ್ಯವಾಗುವ ಸಂಭವವಿರುವ ಸ್ಟಾರ್ ವಿದೇಶಿ ಆಟಗಾರರು

ಐಪಿಎಲ್‌ಗೆ ಮೊದಲ ವಾರ ಅಲಭ್ಯವಾಗುವ ಸಂಭವವಿರುವ ಸ್ಟಾರ್ ವಿದೇಶಿ ಆಟಗಾರರು

ಡ್ವೈನ್ ಪ್ರಿಟೋರಿಯಸ್, ಜೋಫ್ರಾ ಆರ್ಚರ್, ಪ್ಯಾಟ್ ಕಮ್ಮಿನ್ಸ್, ಆರೋನ್ ಫಿಂಚ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಮಾರ್ಕೊ ಜಾನ್ಸೆನ್, ಸೀನ್ ಅಬಾಟ್, ಐಡೆನ್ ಮಾರ್ಕ್ರಮ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಅನ್ರಿಚ್ ನಾರ್ಕಿಯಾ (ಗಾಯ), ಮುಸ್ತಫಿಜುರ್ ರೆಹಮಾನ್, ಲುಂಗಿ ಮಗ್ರೆನ್‌ಡಿವೆಲ್, ಜೇಸನ್ ಬೆರ್ನೆಂಡ್‌ವೆಲ್, ಜಿಸನ್ ಬೆರ್ನೆಂಡ್‌ವೆಲ್ ಜೋಶ್ ಹ್ಯಾಜಲ್‌ವುಡ್, ಜಾನಿ ಬೈರ್‌ಸ್ಟೋವ್, ಕಗಿಸೊ ರಬಾಡ, ನಾಥನ್ ಎಲ್ಲಿಸ್, ಮಾರ್ಕಸ್ ಸ್ಟೊಯ್ನಿಸ್, ಜೇಸನ್ ಹೋಲ್ಡರ್, ಕೈಲ್ ಮೇಯರ್ಸ್, ಮಾರ್ಕ್ ವುಡ್, ಕ್ವಿಂಟನ್ ಡಿ ಕಾಕ್, ಡೇವಿಡ್ ಮಿಲ್ಲರ್, ಅಲ್ಜಾರಿ ಜೋಸೆಫ್

Story first published: Monday, March 14, 2022, 16:01 [IST]
Other articles published on Mar 14, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+