ಐಪಿಎಲ್ 2022: ಬಾಂಗ್ಲಾದೇಶ ಟೆಸ್ಟ್ ಸರಣಿಗೆ ಕೈ, ಐಪಿಎಲ್‌ಗೆ ಜೈ ಎಂದ ದ. ಆಫ್ರಿಕಾ ಕ್ರಿಕೆಟಿಗರು!

ಐಪಿಎಲ್ 15ನೇ ಆವೃತ್ತಿಯ ಆರಂಭಕ್ಕೆ ಇನ್ನು ಭರ್ತಿ ಹತ್ತು ದಿನಗಳು ಮಾತ್ರವೇ ಬಾಕಿಯಿದೆ. ಆದರೆ ಈ ಸಂದರ್ಭದಲ್ಲಿ ಹಲವು ವಿದೇಶಿ ಆಟಗಾರರ ಐಪಿಎಲ್ ಆರಂಭಿಕ ವಾರದಲ್ಲಿ ಅಲಭ್ಯವಾಗಲಿದ್ದಾರೆ ಎಂಬ ಸಂಗತಿ ಐಪಿಎಲ್ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಈ ಅವಧಿಯಲ್ಲಿ ಕೆಲ ದ್ವಿಪಕ್ಷೀಯ ಸರಣಿಗಳು ಆಯೋಜನೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಸರಣಿಯಲ್ಲಿ ಭಾಗಿಯಾಗುತ್ತಿರುವ ಆಟಗಾರರು ಸರಣಿಗಳ ಮುಕ್ತಾಯವಾಗುವವರೆಗೆ ಐಪಿಎಲ್‌ಗೆ ಲಭ್ಯವಾಗುವುದಿಲ್ಲ ಎಂಬ ಸುದ್ದಿ ಈ ನಿರಾಸೆಗೆ ಕಾರಣವಾಗಿತ್ತು.
ಆದರೆ ಇದೀಗ ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಐಪಿಎಲ್ ಹಾಗೂ ರಾಷ್ಟ್ರೀಯ ತಂಡದ ಪರವಾಗಿ ಆಡುವ ಆಯ್ಕೆಯಲ್ಲಿ ಐಪಿಎಲ್ ಪರವಾಗಿ ಆಡುವ ಆಯ್ಕೆಯನ್ನು ಆರಿಸಿಕೊಂಡಿದ್ದಾರೆ. ಹೀಗಾಗಿ ಐಪಿಎಲ್‌ನ ಆರಂಭದಿಂದಲೇ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಎಲ್ಲಾ ಫ್ರಾಂಚೈಸಿಗಳಿಗೆ ಲಭ್ಯವಾಗುವ ಸಾಧ್ಯತೆ ದಟ್ಟವಾಗಿದೆ.

ಬಾಂಗ್ಲಾ ವಿರುದ್ಧ ದಕ್ಷಿಣ ಆಪ್ರಿಕಾ ಟೆಸ್ಟ್ ಸರಣಿ
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಯೋಜಿಸಿದ್ದು ಈ ಸರಣಿ ಮಾರ್ಚ್ 31ರಿಂದ ಆರಂಭವಾಗಲಿದೆ. ಆದರೆ ಐಪಿಎಲ್ ಮಾರ್ಚ್ 26ರಿಂದ ಆರಂಭವಾಗಲಿರುವ ಕಾರಣ ಆರಂಭಿಕ ಹಂತದ ಐಪಿಎಲ್ ಪಂದ್ಯಗಳಿಗೆ ದಕ್ಷಿಣ ಆಪ್ರಿಕಾ ಆಟಗಾರರು ಅಲಭ್ಯವಾಗುವ ಅನಿವಾರ್ಯತೆ ಉಂಟಾಗಿತ್ತು. ಆದರೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಆಟಗಾರರಿಗೆ ದೇಶದ ಪರವಾಗಿ ಆಡುವ ಹಾಗೂ ಐಪಿಎಲ್‌ನಲ್ಲಿ ಭಾಗಿಯಾಗುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಆಟಗಾರರಿಗೆ ಸಂಪೂರ್ಣ ಸ್ವಾತಂತ್ಯವನ್ನು ನೀಡಿತ್ತು. ಹೀಗಾಗಿ ಬಹುತೇಕ ಆಟಗಾರರು ಐಪಿಎಲ್ ಆಯ್ಕೆ ಮಾಡುವ ಮನಸ್ಸು ಮಾಡಿದ್ದರು.

ದಕ್ಷಿಣ ಆಫ್ರಿಕಾ ಆಟಗಾರರ ಮನಸ್ಸು ಬದಲಿಸುವ ವ್ಯರ್ಥ ಪ್ರಯತ್ನ
ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಆಟಗಾರರಿಗೆ ಆಯ್ಕೆಯ ಅವಕಾಶವನ್ನು ನೀಡಿದ ಕಾರಣ ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಹಾಗೂ ತಂಡದ ಕೋಚ್ ಮಾರ್ಕ್ ಬೌಷರ್ ಹಲವು ಬಾರಿ ಆಟಗಾರರೊಂದಿಗೆ ಮಾತುಕತೆ ನಡೆಸಿ ಬಾಂಗ್ಲಾ ವಿರುದ್ಧಧ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲು ವಿನಂತಿಸಿದರು ಕೂಡ ಅದರಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ಬಳಿಕ ಟೆಸ್ಟ್ ನಾಯಕ ಡೀನ್ ಎಲ್ಗರ್ ಆಟಗಾರರಿಗೆ ಇದು ತಮ್ಮ ತಂಡದ ಮೇಲಿನ ನಿಷ್ಠೆಯನ್ನು ಸಾಬೀತುಪಡಿಸಲು ಇರುವ ಅವಕಾಶ ಎಂದು ಹೇಳುವ ಮೂಲಕ ಭಾವನಾತ್ಮಕವಾಗಿಯೂ ಆಟಗಾರರ ಮನಸ್ಸು ಬದಲಿಸುವ ಪ್ರಯತ್ನ ನಡೆಸಿದರು. ಆದರೆ ಅಂತಿಮವಾಗಿ ಐಪಿಎಲ್‌ನಲ್ಲಿ ಒಪ್ಪಂದ ಹೊಂದಿರುವ ಆಟಗಾರರು ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಒಂದು ಟೆಸ್ಟ್ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ ರಬಾಡ
ನಾಯಕ ಡೀನ್ ಎಲ್ಗರ್ ಮನವಿಯ ಬಳಿಕವೂ ದಕ್ಷಿಣ ಆಫ್ರಿಕಾಟ ಆಟಗಾರರಾದ ಮ್ಯಾಕ್ರೋ ಜಾನ್ಸನ್, ರಾಸ್ಸಿ ವಾನ್‌ಡರ್ ಡಸ್ಸೆನ್, ಲುಂಗಿ ಎನ್‌ಗಿಡಿಯಂತಾ ಆಟಗಾರರು ಸಂಪೂರ್ಣ ಐಪಿಎಲ್ ಟೂರ್ನಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಕಗಿಸೋ ರಬಡಾ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದ್ದು ಮೊದಲ ವಾರದ ಐಪಿಎಲ್ ಪಂದ್ಯಕ್ಕೆ ಅಲಭ್ಯವಾಗಲಿದ್ದಾರೆ ಎನ್ನಲಾಗಿದೆ. ಏಪ್ರಿಲ್ 8ರಿಂದ ರಬಾಡ ಐಪಿಎಲ್‌ಗೆ ಲಭ್ಯವಾಗುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ತಂಡವನ್ನು ಇನ್ನಷ್ಟೇ ಆಯ್ಕೆ ಮಾಡಬೇಕಿದ್ದು ಈ ಆಯ್ಕೆಯ ಬಳಿಕವೇ ಯಾರೆಲ್ಲಾ ಬಾಂಗ್ಲಾದೇಶ ಸರಣಿಯಿಂದ ಹಿಂದಕ್ಕೆ ಸರಿದಿದ್ದಾರೆ ಎಂಬುದು ಸ್ಪಷ್ಟವಾಗಲಿದೆ.

ಐಪಿಎಲ್‌ನಲ್ಲಿ ಭಾಗಿಯಾಗುತ್ತಿರುವ ದಕ್ಷಿಣ ಆಫ್ರಿಕಾ ಆಟಗಾರರು
ಕಗಿಸೊ ರಬಾಡ (ಪಂಜಾಬ್ ಕಿಂಗ್ಸ್), ಫಾಫ್ ಡು ಪ್ಲೆಸಿಸ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು), ಕ್ವಿಂಟನ್ ಡಿ ಕಾಕ್ (ಲಕ್ನೋ ಸೂಪರ್ ಜೈಂಟ್ಸ್), ಅನ್ರಿಚ್ ನಾರ್ನಿಯಾ (ಡೆಲ್ಲಿ ಕ್ಯಾಪಟಿಲ್ಸ್), ಮಾರ್ಕೊ ಜಾನ್ಸೆನ್ (ಸನ್‌ರೈರ್ಸ್ ಹೈದರಾಬಾದ್), ಡೇವಿಡ್ ಮಿಲ್ಲರ್ (ಗುಜರಾತ್ ಟೈಟನ್ಸ್), ಡೆವಾಲ್ಡ್ ಬ್ರೆವಿಸ್ (ಮುಂಬೈ ಇಂಡಿಯನ್ಸ್), ಏಡೆನ್ ಮಾರ್ಕ್ರಾಮ್ (ಸನ್‌ರೈರರ್ಸ್ ಹೈದರಾಬಾದ್), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (ರಾಜಸ್ಥಾನ್ ರಾಯಲ್ಸ್), ಲುಂಗಿ ಎನ್‌ಗಿಡಿ (ಡೆಲ್ಲಿ ಕ್ಯಾಪಿಟಲ್ಸ್), ಡ್ವೈನ್ ಪ್ರಿಟೋರಿಯಸ್ (ಚೆನ್ನೈ ಸೂಪರ್ ಕಿಂಗ್ಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications