For Quick Alerts
ALLOW NOTIFICATIONS  
For Daily Alerts
 

IPL 2022: ಈ ವಿಂಡೀಸ್ ಆಟಗಾರನನ್ನು ಹೊರಗಿಡಿ: ಗ್ರೆಮ್ ಸ್ಮಿತ್ ಸಲಹೆ

IPL 2022: Graeme Smith suggests Punjab Kings should include Bhanuka Rajapaksa

ಈ ಬಾರಿಯ ಐಪಿಎಲ್ ಟೂರ್ನಿ ರೋಚಕವಾಗಿ ಸಾಗುತ್ತಿದ್ದು ಅಭಿಮಾನಿಗಳು ಭರಪೂರ ಮನರಂಜನೆ ಪಡೆಯುತ್ತಿದ್ದಾರೆ. ಬಹುತೇಕ ಪಂದ್ಯಗಳು ರೋಚಕವಾಗಿ ಅಂತ್ಯಗೊಳ್ಳುತ್ತಿದ್ದು ಟೂರ್ನಿಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಸಂದರ್ಭದಲ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಮಿಂಚಲು ವಿಫಲವಾಗಿರುವ ಪಂಜಾಬ್ ಕಿಂಗ್ಸ್ ತಂಡಕ್ಕೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಸಲಹೆ ನೀಡಿದ್ದಾರೆ. ಪಂಜಾಬ್ ಕಿಂಗ್ಸ್ ಆಡುವ ಬಳಗದಲ್ಲಿ ಪ್ರಮುಖ ಬದಲಾವಣೆಯೊಂದನ್ನು ಮಾಡಬೇಕಿದೆ ಎಂದಿದ್ದಾರೆ ಗ್ರೇಮ್ ಸ್ಮಿತ್.

ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಗ್ರೇಮ್ ಸ್ಮಿತ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ತಂಡದ ಸಮತೋಲನವನ್ನು ಕಾಪಾಡಿಕೊಳ್ಳಲು ವೆಸ್ಟ್ ಇಂಡೀಸ್‌ನ ಆಟಗಾರನನ್ನು ಹೊರಗೊಡುವಂತೆ ಸಲಹೆ ನೀಡಿದ್ದಾರೆ. ವಿಂಡೀಸ್ ಆಲ್‌ರೌಂಡರ್ ಓಡಿಯನ್ ಸ್ಮಿತ್ ಅವರನ್ನು ಪಂಜಾಬ್ ಕಿಂಗ್ಸ್ ಆಡುವ ಬಳಗದಿಂದ ಹೊರಗಿಟ್ಟು ಶ್ರೀಲಂಕಾದ ಭಾನುಕಾ ರಾಕಪಕ್ಷಗೆ ಆಡುವ ಬಳಗದಲ್ಲಿ ಅವಕಾಶ ಕಲ್ಪಸಬೇಕಿದೆ ಎಂದಿದ್ದಾರೆ ಗ್ರೇಮ್ ಸ್ಮಿತ್.

ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ನಡೆದ ಮೆಗಾ ಹರಾಜಿನಲ್ಲಿ ಓಡಿಯನ್ ಸ್ಮಿತ್ ಭಾರೀ ಬೇಡಿಯನ್ನು ಹೊಂದಿದ್ದರು. ಹೀಗಾಗಿ 6 ಕೋಟಿ ಮೊತ್ತವನ್ನು ನೀಡಿ ಪಂಜಾಬ್ ಕಿಂಗ್ಸ್ ಖರೀದಿಸಿತ್ತು. ಇದಕ್ಕೆ ಪೂರಕವಾಗಿ ಓಡಿಯನ್ ಸ್ಮಿತ್ ಮೊದಲ ಪಂದ್ಯದಲ್ಲಿಯೇ ಅಬ್ಬರದ ಪ್ರದರ್ಶನ ನಿಡಿದ್ದರು. ಆರ್‌ಸಿಬಿ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಕೇವಲ 8 ಎಸೆತಗಳಲ್ಲಿ 25 ರನ್‌ ಸಿಡಿಸಿ ಆರ್‌ಸಿಬಿಯಿಂದ ಗೆಲುವನ್ನು ಕಸಿದಿದ್ದರು.

ಆದರೆ ಅದಾದ ಬಳಿಕ ಓಡಿಯನ್ ಸ್ಮಿತ್ ಬ್ಯಾಟಿಂಗ್‌ನಲ್ಲಿ 8.67ರ ಸರಾಸರಿಯಲ್ಲಿ ಕೇವಲ 26 ರನ್‌ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳ ಗೊಂಚಲನ್ನು ಪಡೆದಿರುವುದನ್ನು ಹೊರತುಪಡಿಸಿದರೆ ಬೌಲಿಂಗ್‌ನಲ್ಲಿಯೂ ವೈಫಲ್ಯತೆಯನ್ನು ಅನುಭವಿಸುತ್ತಿದ್ದಾರೆ. ಇನ್ನು ಒಂದು ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ರಾಹುಲ್ ತೆವಾಟಿಯಾ ಓಡಿಯನ್ ಸ್ಮಿತ್ ಬೌಲಿಂಗ್‌ನ ಅಂತಿಮ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್ ಸಿಡಿಸಿ ಟೈಟನ್ಸ್ ಗೆಲುವಿಗೆ ಕಾರಣವಾಗಿದ್ದರು.

ಈ ವೈಫಲ್ಯದ ಕಾರಣದಿಂದಾಗಿ ಓಡಿಯನ್ ಸ್ಮಿತ್ ಬದಲಿಗೆ ಶ್ರೀಲಂಕಾದ ಎಡಗೈ ಬ್ಯಾಟರ್ ಭಾನುಕಾ ರಾಜಪಕ್ಷ ಅವರನ್ನು ಕಣಕ್ಕಿಳಿಸುವಂತೆ ಸಲಹೆ ನೀಡಿದ್ದಾರೆ. ಈ ಸೇರ್ಪಡೆ ತಂಡದ ಸಂಯೋಜನೆಗೂ ಬಹಳ ಸಹಕಾರಿಯಾಗಲಿದೆ ಎಂದಿದ್ದಾರೆ ಗ್ರೇಮ್ ಸ್ಮಿತ್.

"ನಾನು ರಾಜಪಕ್ಷ ಅವರನ್ನು ಆಡುವ ಬಳಗಕ್ಕೆ ಸೇರ್ಪಡಗೊಳಿಸುವುದಕ್ಕೆ ಬೆಂಬಲ ನೀಡುತ್ತೇನೆ. ಅವರು ಬ್ಯಾಟಿಂಗ್ ವಿಭಾಗಕ್ಕೆ ಮತ್ತಷ್ಟು ಬೆಂಬಲವನ್ನು ನೀಡಬಲ್ಲರು. ಇದು ಪಂಜಾಬ್ ಕಿಂಗ್ಸ್ ತಂಡದ ಸಲತೋಲನವನ್ನು ಹೆಚ್ಚುಗೊಳಿಸುತ್ತದೆ" ಎಂದಿದ್ದಾರೆ ಗ್ರೇಮ್ ಸ್ಮಿತ್.

ಈ ಬಾರಿಯ ಟೂರ್ನಿಯಲ್ಲಿ ಆರಂಭಿಕ ಮೂರು ಪಂದ್ಯಗಳಲ್ಲಿ ಭಾನುಕಾ ರಾಜಪಕ್ಷ ಕಣಕ್ಕಿಳಿದಿದ್ದರು. 27.66ರ ಸ್ಟ್ರೈಕ್‌ರೇಟ್‌ನಲ್ಲಿ ರಾಜಪಕ್ಷ 230.55ರ ಸ್ಟ್ರೈಕ್‌ರೇಟ್‌ನಲ್ಲಿ 83 ರನ್‌ಗಳಿಸಿದ್ದಾರೆ. ಇನ್ನು ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ಭಾನುಕಾ ರಾಜಪಕ್ಷ 108 ಪಂದ್ಯಗಳನ್ನು ಆಡಿದ್ದು 1995 ರನ್‌ಗಳಿಸಿದ್ದಾರೆ. ಇದರಲ್ಲಿ 10 ಅರ್ಧ ಶತಕಗಳಿವೆ. ಮಧ್ಯಮ ವೇಗದ ಬೌಲರ್ ಆಗಿಯೂ ನೆರವಾಗಬಲ್ಲರು ರಾಜಪಕ್ಷ.

IPL 2022: Graeme Smith suggests Punjab Kings should include Bhanuka Rajapaksa

ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಆಡಿರುವ 6 ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದು 6 ಅಂಕಗಳಿಸಿರುವ ಪಂಜಾಬ್ ಕಿಂಗ್ಸ್ ತಂಡ 7ನೇ ಸ್ಥಾನದಲ್ಲಿದೆ. ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯ ನಡೆಯಲಿದ್ದು ಕುತೂಹಲ ಮೂಡಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ಸಾಕಷ್ಟು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಒಂದೆಡೆ ಸೋಲು ತಂಡಕ್ಕೆ ಆಘಾತ ನೀಡುತ್ತಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ತಮಡದ ಬಯೋಬನಲ್‌ನಲ್ಲಿ ಕೊರೊನಾವೈಸರ್ ಕಾಣಿಸಿಕೊಂಡಿರುವುದು ಟೂರ್ನಿಯ ಮೇಲೆ ಆತಂಕದ ಛಾಯೆ ಮೂಡಿಸಿದೆ.

ಪಂಜಾಬ್ ಕಿಂಗ್ಸ್ ಸಂಪೂರ್ಣ ಸ್ಕ್ವಾಡ್ : ಶಿಖರ್ ಧವನ್, ಕಗಿಸೊ ರಬಾಡ, ಜಾನಿ ಬೈರ್‌ಸ್ಟೋವ್, ರಾಹುಲ್ ಚಾಹರ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಪ್ರಭಾಸಿಮ್ರಾನ್ ಸಿಂಗ್, ಇಶಾನ್ ಪೊರೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಒಡಿಯನ್ ಸ್ಮಿತ್, ಸಂದೀಪ್ ಶರ್ಮಾ, ರಾಜ್ ಅಂಗದ್ ಬಾವಾ, ರಿಷಿ ಧವನ್, ಪ್ರೇರಕ್ ಮಂಕಡ್, ಅಥರ್ವ ಟೈಡೆ, ವೈಭವ್ ಅರೋರಾ, ಭಾನುಕಾ ರಾಜಪಕ್ಸೆ, ರಿಟಿಕ್ ಚಟರ್ಜಿ, ಬಲ್ತೇಜ್ ಧಂಡಾ, ಅನ್ಶ್ ಪಟೇಲ್, ಜಿತೇಶ್ ಶರ್ಮಾ, ಬೆನ್ನಿ ಹೋವೆಲ್, ನಾಥನ್ ಎಲ್ಲಿಸ್

Story first published: Wednesday, April 20, 2022, 17:40 [IST]
Other articles published on Apr 20, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+