ಈ ವೇಗಿ ಭಾರತವನ್ನು ಪ್ರತಿನಿಧಿಸಲಿದ್ದಾನೆ: ಯುವ ಕ್ರಿಕೆಟಿಗನ ಬಗ್ಗೆ ಭವಿಷ್ಯ ನುಡಿದ ಸುನಿಲ್ ಗವಾಸ್ಕರ್

ಈ ಬಾರಿಯ ಐಪಿಎಲ್ ಟೂರ್ನಿ ಭಾರೀ ರೋಚಕತೆಯಿಂದ ನಡೆಯುತ್ತಿದ್ದು ಪ್ರತಿ ಪಂದ್ಯವೂ ಅಭಿಮಾನಿಗಳಿಗೆ ರಸದೌತಣ ನೀಡುತ್ತಿದೆ. ಈ ಬಾರಿಯ ಟೂರ್ನಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ನಂತರದ ನಾಲ್ಕು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸುವ ಮೂಲಕ ಎದುರಾಳಿ ತಂಡಗಳಿಗೆ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ. ಕೇನ್ ವಿಲಿಯಮ್ಸನ್ ನೇತೃತ್ವದ ಈ ತಂಡದಲ್ಲಿ ಭಾರತದ ಓರ್ವ ಯುವ ಆಟಗಾರ ಈಗ ಕ್ರಿಕೆಟ್ ಅಭಿಮಾನಿಗಳ ಚರ್ಚೆಯ ವಸ್ತುವಾಗಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೆ ದಿಗ್ಗಜ ಕ್ರಿಕೆಟಿಗರು ಕೂಡ ಈತನ ಬಗ್ಗೆ ಮಾತನಾಡುತ್ತಿದ್ದಾರೆ.
ಸುನಿಲ್ ಗವಾಸ್ಕರ್ ಕೂಡ ಈ ಬಗ್ಗೆ ಮಾತನಾಡಿದ್ದು ಸನ್‌ರೈಸರ್ಸ್ ಹೈದರಾಬಾದ್ ತಂಡದ ಈ ಯುವ ಆಟಗಾರ ಭವಿಷ್ಯದಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಲಿದ್ದಾರೆ ಎಂದಿದ್ದಾರೆ. ಆ ಯಯವ ಆಟಗಾರ ಬೇಲೆ ಯಾರೂ ಅಲ್ಲ ವೇಗದ ಬೌಲಿಂಗ್‌ಗೆ ಖ್ಯಾರವಾಗಿರುವ ಉಮ್ರಾನ್ ಮಲಿಕ್. 150 ಕಿ.ಮೀ ವೇಗದಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಉಮ್ರಾನ್ ಮಲಿಕ್ ವೇಗದ ಜೊತೆಗೆ ನಿಖರ ಬೌಲಿಂಗ್ ಮೂಲಕ ಎದುರಾಳಿಗಳಿಗೆ ಆಘಾತ ನೀಡುತ್ತಿದ್ದಾರೆ.
ಈ ಯುವ ವೇಗಿಯ ಬಗ್ಗೆ ಮಾತನಾಡಿರುವ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ "ಉಮ್ರಾನ್ ಮಲಿಕ್ ತಮ್ಮ ವೇಗದ ಮೂಲಕ ಎಲ್ಲರ ಮನಸೂರೆಗೊಂಡಿದ್ದಾರೆ. ಆದರೆ ಆತನ ವೇಗಕ್ಕಿಂತಲೂ ಆತನ ಬೌಲಿಂಗ್‌ನ ನಿಖರತೆ ಬಹಳ ಖುಷಿ ನೀಡುತ್ತದೆ ಎಂದಿದ್ದಾರೆ ಸುನಿಲ್ ಗವಾಸ್ಕರ್. ಬಹಳಷ್ಟು ಜನರು ಉಮ್ರಾನ್ ಮಲಿಕ್ ಎಸೆಯುವ ವೇಗದಲ್ಲಿ ಬೌಲಿಂಗ್ ಮಾಡಬಹುದು. ಆದರೆ ಉಮ್ರಾನ್ ಬಹಳಷ್ಟು ಕಡಿಮೆ ವೈಡ್ ಬಾಲ್‌ಗಳನ್ನು ಎಸೆದಿದ್ದಾರೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
"ಆತ ಲೆಗ್‌ಸೈಡ್‌ನಿಂದ ಉಂಟಾಗುವ ವೈಡ್ ಎಸೆತಗಳನ್ನು ನಿಯಂತ್ರಿಸಿದರೆ ಆತ ಭಯಾನಕ ಬೌಲರ್ ಆಗಬಲ್ಲರು. ಯಾಕೆಂದರೆ ಆ ಸಾಮರ್ಥ್ಯವನ್ನು ಪಡೆದರೆ ಎಲ್ಲಾ ಸಂದರ್ಭದಲ್ಲಿಯೂ ವಿಕೆಟ್‌ನ ಮೇಲೆ ದಾಳಿ ಮಾಡುವ ಸಾಮರ್ಥ್ಯವನ್ನು ಗಳಿಸಿಕೊಂಡಂತಾಗುತ್ತದೆ ಎಂದಿದ್ದಾರೆ. ಆತನ ವೇಗದ ಕಾರಣಕ್ಕೆ ನೇರವಾಗಿ ಅದನ್ನು ಬಾರಿಸುವುದು ಸಾಧ್ಯವಾಗುವುದಿಲ್ಲ. ಆತ ವಿಕೆಟ್‌ನಿಂದ ವಿಕೆಟ್‌ಗೆ ಬೌಲಿಂಗ್ ಮಾಡ ತೊಡಗಿದರೆ ಖಂಡಿತವಾಗಿಯೂ ಎದುರಿಸಲು ಅತ್ಯಂತ ಕಠಿಣ ಬೌಲರ್ ಎನಿಸಿಕೊಳ್ಳುತ್ತಾರೆ. ಆತ ಭಾರತ ತಂಡದ ಪರವಾಗಿ ಆಡಲಿದ್ದಾರೆ" ಎಂದು ಸುನಿಲ್ ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ.
ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗದ ಬೌಲಿಂಗ್ ಕೋಚ್ ಡೇಲ್ ಸ್ಟೇನ್ ಕೂಡ ಉಮ್ರಾನ್ ಮಲಿಕ್ ಬೌಲೀಂಗ್ ಬಗ್ಗೆ ಹರ್ಷಗೊಂಡಿದ್ದಾರೆ. ಕೊಲ್ಕತ್ತಾ ನೈಟ್ ರಯಡರ್ಸ್ ತಂಡದ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಿದ್ದಾಗ ಉಮ್ರಾನ್ ಕೆಕೆಆರ್ ನಾಯಕ ಶ್ರೇಯಸ್ ಐಯ್ಯರ್ ವಿಕೆಟ್ ಪಡೆದಿದ್ದ ಸಂದರ್ಭದಲ್ಲಿ ಡೇಲ್ ಸ್ಟೇನ್ ಡಗೌಟ್‌ನಲ್ಲಿ ತಮ್ಮದೇ ಶೈಲಿಯಲ್ಲಿ ಮುತ್ತಯ್ಯ ಮುರಳೀಧರನ್ ಜೊತೆಗೆ ಸಂಭಮಿಸಿದ್ದರು.
ಇನ್ನು ಈ ಬಾರಿಯ ಟೂರ್ನಿಯಲ್ಲಿ ಆರಂಭದಲ್ಲಿ ಮುಗ್ಗರಿಸಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಅಂತಿಮ ನಾಲ್ಕು ಪಂದ್ಯಗಳನ್ನು ಕೂಡ ಗೆದ್ದುಕೊಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 5ನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಆಡಿದ ಅಂತಿಮ ಪಂದ್ಯದಲ್ಲಿಯೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications