ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ದಾಖಲಾಗಿದ್ದು 1062 ಸಿಕ್ಸರ್; ಹೆಚ್ಚು ಸಿಕ್ಸರ್ ಚಚ್ಚಿಸಿಕೊಂಡದ್ದು ಈ ತಂಡದ ಬೌಲರ್‌ಗಳು!

IPL 2022: List of sixes conceded by each teams in the tournament, RCB tops the list

ಮಾರ್ಚ್ ತಿಂಗಳಿನ ಅಂತಿಮ ವಾರದಲ್ಲಿ ಆರಂಭವಾಗಿದ್ದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕಳೆದ ಭಾನುವಾರ ನಡೆದ ಫೈನಲ್ ಪಂದ್ಯದ ಮೂಲಕ ಮುಕ್ತಾಯಗೊಂಡಿದ್ದು, ನೂತನ ಚಾಂಪಿಯನ್ ಈ ಬಾರಿ ಹೊರಹೊಮ್ಮಿದೆ.

IPL 2022: ಚೆನ್ನಾಗಿ ಆಡಿದ 11 ಆಟಗಾರರ ತಂಡ ರಚಿಸಿದ ಪೀಟರ್ಸನ್; ಡಿಕೆನೇ ಇಲ್ಲ, ಆರ್‌ಸಿಬಿಯ ಒಬ್ಬನಿಗೆ ಸ್ಥಾನ!IPL 2022: ಚೆನ್ನಾಗಿ ಆಡಿದ 11 ಆಟಗಾರರ ತಂಡ ರಚಿಸಿದ ಪೀಟರ್ಸನ್; ಡಿಕೆನೇ ಇಲ್ಲ, ಆರ್‌ಸಿಬಿಯ ಒಬ್ಬನಿಗೆ ಸ್ಥಾನ!

ಹೌದು, ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಮತ್ತು ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ ಪದಾರ್ಪಣೆ ಮಾಡಿದ ಆವೃತ್ತಿಯಲ್ಲಿಯೇ ಚಾಂಪಿಯನ್ ಆಗಿ ಹೊರಹೊಮ್ಮಿತು.

IPL 2022: ಅತಿಹೆಚ್ಚು ಬಾರಿ ಡಕ್‌ಔಟ್ ಆದ ಆಟಗಾರರಿವರು; ಈ ಕೆಟ್ಟ ದಾಖಲೆಯಲ್ಲಿ ಯಾರು ಟಾಪ್?IPL 2022: ಅತಿಹೆಚ್ಚು ಬಾರಿ ಡಕ್‌ಔಟ್ ಆದ ಆಟಗಾರರಿವರು; ಈ ಕೆಟ್ಟ ದಾಖಲೆಯಲ್ಲಿ ಯಾರು ಟಾಪ್?

ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ನೂತನ ತಂಡಗಳಾಗಿ ಸೇರ್ಪಡೆಯಾದ ಕಾರಣ ಲೀಗ್ ಹಂತದಲ್ಲಿ ಹೆಚ್ಚಿನ ಪಂದ್ಯಗಳು ನಡೆದವು. ಫೈನಲ್ ಪಂದ್ಯ, ಪ್ಲೇ ಆಫ್ ಸುತ್ತಿನ ಪಂದ್ಯಗಳು ಮತ್ತು ಲೀಗ್ ಹಂತದ 70 ಪಂದ್ಯಗಳೂ ಸೇರಿದಂತೆ ಟೂರ್ನಿಯಲ್ಲಿ ಒಟ್ಟು 74 ಪಂದ್ಯಗಳು ನಡೆದಿದ್ದು, ಒಟ್ಟು 1062 ಸಿಕ್ಸರ್ ದಾಖಲಾದವು. ಹಾಗೂ ಇದು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ ಆವೃತ್ತಿಯೊಂದರಲ್ಲಿ ದಾಖಲಾದ ಅತಿ ಹೆಚ್ಚು ಸಿಕ್ಸರ್ ಆಗಿದ್ದರೆ, 1000 ಸಿಕ್ಸರ್ ಗಡಿ ದಾಟಿದ್ದು ಈ ಆವೃತ್ತಿಯಲ್ಲಿಯೇ. ಹೀಗೆ ಈ ಬಾರಿಯ ಆವೃತ್ತಿ ಸಿಕ್ಸರ್ ವಿಷಯದಲ್ಲಿ ನೂತನ ದಾಖಲೆಯನ್ನು ಬರೆದಿದ್ದು, ದಾಖಲಾದ ಒಟ್ಟು 1062 ಸಿಕ್ಸರ್ ಪೈಕಿ ಯಾವ ತಂಡದ ಬೌಲರ್‌ಗಳು ಎಷ್ಟು ಸಿಕ್ಸರ್ ಚಚ್ಚಿಸಿಕೊಂಡಿದ್ದಾರೆ ಎಂಬುದರ ಕುರಿತ ವಿವರ ಮುಂದೆ ಇದೆ ಓದಿ.

ತಂಡಗಳು ನೀಡಿದ ಸಿಕ್ಸರ್ ಪಟ್ಟಿ

ತಂಡಗಳು ನೀಡಿದ ಸಿಕ್ಸರ್ ಪಟ್ಟಿ

1. ರಾಯಲ್ ಚಾಲೆಂಜರ್ಸ್ ಬೆಂಗಳೂರು - 147 ಸಿಕ್ಸರ್

2. ರಾಜಸ್ಥಾನ್ ರಾಯಲ್ಸ್ - 113 ಸಿಕ್ಸರ್

3. ಸನ್ ರೈಸರ್ಸ್ ಹೈದರಾಬಾದ್ - 112 ಸಿಕ್ಸರ್

4. ಮುಂಬೈ ಇಂಡಿಯನ್ಸ್ - 111 ಸಿಕ್ಸರ್

5. ಕೋಲ್ಕತ್ತಾ ನೈಟ್ ರೈಡರ್ಸ್ - 104 ಸಿಕ್ಸರ್

6. ಡೆಲ್ಲಿ ಕ್ಯಾಪಿಟಲ್ಸ್ - 103 ಸಿಕ್ಸರ್

7. ಗುಜರಾತ್ ಟೈಟನ್ಸ್ - 101 ಸಿಕ್ಸರ್

8. ಲಕ್ನೋ ಸೂಪರ್ ಜೈಂಟ್ಸ್ - 94 ಸಿಕ್ಸರ್

9. ಪಂಜಾಬ್ ಕಿಂಗ್ಸ್ - 91 ಸಿಕ್ಸರ್

10. ಚೆನ್ನೈ ಸೂಪರ್ ಕಿಂಗ್ಸ್ - 86 ಸಿಕ್ಸರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಚ್ಚು ಸಿಕ್ಸರ್ ನೀಡಿದ ತಂಡ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಚ್ಚು ಸಿಕ್ಸರ್ ನೀಡಿದ ತಂಡ

ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿ, ಎರಡನೇ ಕ್ವಾಲಿಫೈಯರ್ ಪಂದ್ಯದವರೆಗೂ ಲಗ್ಗೆ ಇಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತು ಫೈನಲ್ ಪ್ರವೇಶಿಸುವ ಅವಕಾಶವನ್ನು ಕೈ ತಪ್ಪಿಸಿಕೊಂಡಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್‌ಗಳು ಟೂರ್ನಿಯಲ್ಲಿ ಬರೋಬ್ಬರಿ 147 ಸಿಕ್ಸರ್ ಚಚ್ಚಿಸಿಕೊಳ್ಳುವುದರ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಿಟ್ಟುಕೊಟ್ಟ ತಂಡ ಎಂಬ ಬೇಡವಾದ ದಾಖಲೆಯನ್ನು ಫಾಫ್ ಡು ಪ್ಲೆಸಿಸ್ ಪಡೆ ಬರೆದುಕೊಂಡಿದೆ.

ಭಾರತದಲ್ಲಿರೋ ತನ್ನ ಅಭಿಮಾನಿಗಳಿಗೆ ವಿಶೇಷ ಸಂದೇಶದ ಮೂಲಕ ವಿದಾಯ ಹೇಳಿದ Rashid Khan | #Cricket |Oneindia Kannada
ಕಡಿಮೆ ಸಿಕ್ಸರ್ ನೀಡಿದ್ದು ಚೆನ್ನೈ ಸೂಪರ್ ಕಿಂಗ್ಸ್

ಕಡಿಮೆ ಸಿಕ್ಸರ್ ನೀಡಿದ್ದು ಚೆನ್ನೈ ಸೂಪರ್ ಕಿಂಗ್ಸ್

ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿಯೇ ಹೊರಬಿತ್ತು. ಅಂಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ತನ್ನ ಪಯಣವನ್ನು ಅಂತ್ಯಗೊಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಲ್ಲಿ ಕಡಿಮೆ ಸಿಕ್ಸರ್ ನೀಡಿದ ತಂಡ ಎನಿಸಿಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಆವೃತ್ತಿಯಲ್ಲಿ ನೀಡಿದ್ದು ಕೇವಲ 86 ಸಿಕ್ಸರ್.

Story first published: Wednesday, June 1, 2022, 10:19 [IST]
Other articles published on Jun 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X