
ಐಪಿಎಲ್ ನ 15ನೇ ಆವೃತ್ತಿಯಲ್ಲಿ ಬ್ಯಾಕ್-ಟು-ಬ್ಯಾಕ್ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿರುವ ಆರೆಂಜ್ ಆರ್ಮಿ ಸನ್‌ರೈಸರ್ಸ್ ಹೈದರಾಬಾದ್ ಗುಜರಾತ್ ವಿರುದ್ಧ ಮಾಡಿದ ತಪ್ಪಿನಿಂದಾಗಿ ಗೆದ್ದು ಬೀಗಿದೆ. ಎಸ್‌ಆರ್‌ಎಚ್ ತಂಡದ ನಾಯಕ ಕೇನ್ ವಿಲಿಯಮ್ಸನ್ ವಿಕೆಟ್ ರಿವೀವ್ ಪಡೆಯಲು ನಿರಾಕರಿಸಿದ್ದರ ಪರಿಣಾಮವೇ ಗುಜರಾತ ಟೈಟನ್ಸ್ ತಂಡದ ಸೋಲಿಗೆ ಇನ್ನೊಂದು ಕಾರಣವಾಯಿತಾ ಎನ್ನುವ ಪ್ರಶ್ನೆಯೊಂದು ನೆಟ್ಟಿಗರಲ್ಲಿ ಉದ್ಭವವಾಗಿದೆ.
162 ಗುರಿ ಬೆನ್ನಟ್ಟಿದ್ದ ಹೈದ್ರಾಬಾದ್ ತಂಡದ ಆರಂಭಿಕ ಆಟಗಾರರಾಗಿ ನಾಯಕ ಕೇನ್ ವಿಲಿಯಮ್ಸನ್ ಮತ್ತು ಆಲ್ ರೌಂಡರ್ ಅಭಿಷೇಕ್ ಶರ್ಮಾ ಕ್ರಿಸ್‌ಗೆ ಇಳಿದಿದ್ದರು. ಮೊದಲ ಓವರ್ ಎಸೆಯಲು ಮೊಹಮ್ಮದ್ ಶಮಿ ಆಗಮಿಸಿದ್ದರು. ಮೊದಲ ಎಸೆತವನ್ನು ಎದುರಿಸಿದ್ದ ಶರ್ಮಾ ಒಂದು ರನ್ ಕಲೆಹಾಕಿ ವಿಲಿಯಮ್ಸನ್ ಗೆ ಸ್ಟ್ರೈಕ್ ನೀಡಿದರು. ಎರಡನೇ ಎಸೆತದಲ್ಲಿ 2ರನ್ ಗಳಿಸಿ, ಮೂರನೇ ಎಸೆತ್ ಡಾಟ್ ಆಗಿತ್ತು. ನಾಲ್ಕನೇ ಎಸೆತವು ಪ್ಯಾಡ್‌ಗೆ ತಾಗಿದ್ದರಿಂದ ಅಫಿಲ್ ಮಾಡಲಾಗಿತ್ತು.
ವಿಲಿಯಮ್ಸನ್ ಸಹ ವಿಕೆಟ್ ನಿಂದ ಸಾಕಷ್ಟು ಪಕ್ಕದಲ್ಲಿಯೇ ಕಾಣಿಸಿಕೊಂಡರು. ಶಮಿ ಮೊದಲು ಅಪೀಲ್ ಮಾಡಿದ್ದರು ನಂತರ ಬ್ಯಾಟ್ ಗೆ ತಾಗಿರುವ ಸಾಧ್ಯತೆಗಳು ಹೆಚ್ಚಿದ್ದು ಮತ್ತು ಮಿಡ್ ವಿಕೆಟ್ ಗಳಿಂದ ಹೊರಗಿದೆ ಎಂದು ಸುಮ್ಮನಾದ್ರು. ಫೀಲ್ಡ್ ಅಂಪೈರ್ ಲೆಗ್-ಬಿಫೋರ್ ಮನವಿಯನ್ನು ನಿರಾಕರಿಸಿದರು . ಟೈಟಾನ್ಸ್ ತಂಡದ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ರೀವಿವ್ ಪಡೆಯಲು ಉತ್ಸುಕರಾಗಿದ್ದರು. ಆದರೆ ಶಮಿ ಹೆಚ್ಚು ಮನವರಿಕೆಯಾಗಲಿಲ್ಲದ ಕಾರಣ ನಾಯಕ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಚರ್ಚಿಸಲಾಗಿ ರೀವಿವ್ ಪಡೆಯಲು ಹಿಂದೇಟು ಹಾಕಿದ್ದರು.
ಅದೇ ಒಂದು ಜೀವದಾನ ಲಭಿಸಿತು ಎನ್ನುವಂತೆ ವಿಲಿಯಮ್ಸನ್ 46 ಎಸೆತಗಳಲ್ಲಿ 57 ರನ್ ಗಳಿಸಿದರೆ, ಉತ್ತಮ ಸಾಥ್ ನೀಡಿದ ಆಲ್ ರೌಂಡರ್ ಅಭಿಷೇಕ್ ಶರ್ಮಾ 32 ಎಸೆತಗಳಲ್ಲಿ 42 ರನ್ ಗಳಿಸಿದರು. ರಾಹುಲ್ ತ್ರಿಪಾಟಿ 11 ಎಸೆತಗಳಲ್ಲಿ 17ರನ್ ಗಳಿಸಿ ಸ್ನಾಯು ಸೆಳೆತದಿಂದ ಪೆವಿಲಿಯನ್ ಕಡೆಗೆ ನಡೆದರು. ನಂತರ ನಿಕೋಲಸ್ ಪೂರನ್ 18 ಎಸೆತಗಳಲ್ಲಿ 34 ರನ್ ಗಳಿಸುವ ಮೂಲಕ ವಿಜಯದ ಮಾರ್ಗವನ್ನು ಸುಲಭಗೊಳಿಸಿ ಎಂಟು ವಿಕೆಟ್‌ಗಳಿಂದ ಸನ್‌ರೈಸರ್ಸ್ ಹೈದ್ರಾಬಾದ್ ಜಯಗಳಿಸಿತು.