RCB vs PBKS: ಆರ್‌ಸಿಬಿ ವಿರುದ್ಧ ಪಂಜಾಬ್ ಗೆಲುವಿಗೆ ಸ್ಪೂರ್ತಿಯಾಗಿದ್ದು ಯಾವುದು? ಗುಟ್ಟು ಬಿಚ್ಚಿಟ್ಟ ಗೆಲುವಿನ ರೂವಾರಿ!

ಐಪಿಎಲ್ 15ನೇ ಆವೃತ್ತಿಯ ಪಂದ್ಯಗಳು ಆರಂಭವಾಗಿದ್ದು ರೋಚಕ ಸೆಣೆಸಾಟ ನಡೆಯುತ್ತಿದೆ. ಅದರಲ್ಲೂ ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳುರು ಹಾಗೂ ಪಂಜಾಬ್ ಕಿಂಗ್ಸ್ ಪಂದ್ಯದಲ್ಲಿ ರನ್ ಮಳೆಯೇ ಹರಿದಿದ್ದು ಅಭಿಮಾನಿಗಳು ರೋಮಾಂಚಕ ಅನುಭವ ಪಡೆದುಕೊಂಡಿದ್ದಾರೆ. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಆಲ್‌ರೌಂಡರ್ ಓಡಿಯನ್ ಸ್ಮಿತ್ ಕೇವಲ 8 ಎಸೆತಗಳಲ್ಲಿ ಅಜೇಯ 25 ರನ್ ಬಾರಿಸುವ ಮೂಲಕ ಆರ್‌ಸಿಬಿ ತಂಡದಿಂದ ಪಂದ್ಯವನ್ನು ಸಂಪೂರ್ಣವಾಗಿ ಕಸಿದುಕೊಂಡಿದ್ದಾರೆ.
ಈ ಪಂದ್ಯದ ಬಳಿಕ ಆರ್‌ಸಿಬಿ ತಂಡ ನೀಡಿದ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಲು ಸ್ಪೂರ್ತಿಯಾದ ಅಂಶವನ್ನು ಬಹಿರಂಗ ಪಡಿಸಿದ್ದಾರೆ. ಈ ಸ್ಪೂರ್ತಿಯಿಂದಲೇ ಪಂಜಾಬ್ ಕಿಂಗ್ಸ್ ಆರ್‌ಸಿಬಿ ವಿರುದ್ಧ ರೋಚಕ ಪಂದ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದಿದ್ದಾರೆ ಓಡಿಯನ್ ಸ್ಮಿತ್
ಹಾಗಾದರೆ ಪಂಜಾಬ್ ಕಿಂಗ್ಸ್‌ಗೆ ಸ್ಪೂರ್ತಿ ನೀಡಿದ್ದೇನು? ಓಡಿಯನ್ ಬಿಚ್ಚಿಟ್ಟ ಆ ಕುತೂಹಲಕಾರಿ ಅಂಶವೇನು? ಮುಂದೆ ಓದಿ..

ಟೂರ್ನಿಯ ಆರಂಭಕ್ಕೆ ಮುನ್ನ ಹುರುಪು ಬೇಕಿತ್ತು
ಪಂಜಾಬ್ ಕಿಂಗ್ಸ್ ಐಪಿಎಲ್‌ನಲ್ಲಿ ಈವರೆಗೆ ಒಂದು ಬಾರಿಯೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿಯ ಟೂರ್ನಿಯ ಆರ್ರಂಭಕ್ಕೂ ಮುನ್ನ ತಂಡಕ್ಕೆ ಹೊಸ ಹುರುಪು ಬೇಕಿತ್ತು ಎಂದಿದ್ದಾರೆ ಓಡಿಯನ್ ಸ್ಮಿತ್. "ನಮ್ಮ ತಂಡ ಐಪಿಎಲ್‌ನಲ್ಲಿ ಈವರೆಗೆ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ. ಹೀಗಾಗಿ ಟೂರ್ನಿ ಆರಂಭಕ್ಕೆ ಮುನ್ನ ನಮಗೆ ಸ್ಪೂರ್ತಿ ತುಂಬ ಬೇಕಿತ್ತು. ಹೀಗಾಗಿ ನಾವು '14 ಪೀಕ್ಸ್' ಚಲನಚಿತ್ರವನ್ನು ವೀಕ್ಷಿಸಿದೆವು. ಇದು ನಮ್ಮ ಮೊದಲ ಶಿಖರ. 13 ಶಿಖರಗಳನ್ನು ನಾವು ಏರಬೇಕಿದೆ. ಈ ಚಿತ್ರವನ್ನು ನೋಡಿದ ಬಳಿಕ ನಾವೆಲ್ಲರೂ ಸ್ಪೂರ್ತಿ ಪಡೆದುಕೊಂಡಿದ್ದೇವೆ" ಎಂದಿದ್ದಾರೆ ಓಡಿಯನ್ ಸ್ಮಿತ್.

ಚಲನಚಿತ್ರ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದ ಕೋಚ್ ಅನಿಲ್ ಕುಂಬ್ಳೆ
ಪಂಜಾಬ್ ಕಿಂಗ್ಸ ಐಪಿಎಲ್‌ನಲ್ಲಿ ಆರಂಭಿಕಕ ಆವೃತ್ತಿಯಿಂದಲೂ ಭಾಗವಹಿಸುತ್ತಿರುವ ಫ್ರಾಂಚೈಸಿಯಾಗಿದೆ. ಆದರೆ ಈವರೆಗೆ ಒಂದು ಬಾರಿಯೂ ಫ್ರಾಂಚೈಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಆರ್‌ಸಿಬಿ ಪಂದ್ಯಕ್ಕಿಂತ ಕೆಲವೇ ಗಂಟೆಗಳ ಮುನ್ನ ಟೀಮ್ ಬಾಂಡಿಂಗ್ ಸೆಶನ್ ಮಾಡಲು ಕೋಚ್ ಅನಿಲ್ ಕುಂಬ್ಳೆ ನಿರ್ಧರಿಸಿದ್ದರು.ಈ ಸೆಶನ್‌ನ ಸಂದರ್ಭದಲ್ಲಿ ಎಲ್ಲಾ ಆಟಗಾರರು "14 ಪೀಕ್ಸ್- ನಥಿಂಗ್ ಈಸ್ ಇಂಪಾಸಿಬಲ್" ಚಲನಚಿತ್ರವನ್ನು ವೀಕ್ಷಿಸಿದ್ದಾರೆ.

ಎರಡೂ ತಂಡಗಳಿಗೆ ಹೊಸ ನಾಯಕರು
ಇನ್ನು ಈ ಬಾರಿಯ ಟೂರ್ನಿಯಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಎರಡೂ ತಂಡಗಳು ಹೊಸ ನಾಯಕತ್ವದಲ್ಲಿ ಕಣಕ್ಕಿಳಿದಿದೆ. ಫಾಫ್ ಡು ಪ್ಲೆಸಿಸ್ ಆರ್‌ಸಿಬಿ ತಂಡದ ನಾಯಕತ್ವ ವಹಿಸಿದರೆ ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ತಂಡ ತನ್ನ ಎರಡನೇ ಪಂದ್ಯವನ್ನು ಏಪ್ರಿಲ್ 1ರಂದು ಆಡಲಿದೆ.

ಪ್ಲೇಯಿಂಗ್ XI ಹೀಗಿತ್ತು
ಆರ್‌ಸಿಬಿ ಪ್ಲೇಯಿಂಗ್ XI: ಫಾಫ್ ಡುಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಅನುಜ್ ರಾವತ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಶೆರ್ಫೇನ್ ರುದರ್‌ಫೋರ್ಡ್, ಶಹಬಾಜ್ ಅಹ್ಮದ್, ವನಿಂದು ಹಸರಂಗಾ, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11
ಪಂಜಾಬ್ ಪ್ಲೇಯಿಂಗ್ XI: ಮಯಾಂಕ್ ಅಗರ್ವಾಲ್(ನಾಯಕ), ಶಿಖರ್ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಭಾನುಕಾ ರಾಜಪಕ್ಸೆ(ವಿಕೆಟ್ ಕೀಪರ್), ಶಾರುಖ್ ಖಾನ್, ಓಡಿಯನ್ ಸ್ಮಿತ್, ರಾಜ್ ಬಾವಾ, ಅರ್ಷದೀಪ್ ಸಿಂಗ್, ಹರ್ಪ್ರೀತ್ ಬ್ರಾರ್, ಸಂದೀಪ್ ಶರ್ಮಾ, ರಾಹುಲ್ ಚಾಹರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications