
ಸನ್‌ರೈಸರ್ಸ್ ಹೈದರಾಬಾದ್ ತಂಡದ ಯುವ ವೇಗಿ ಉಮ್ರಾನ್ ಮಲಿಕ್ ಸ್ಥಿರವಾಗಿ 145-150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯದಿಂದಾಗಿ ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದ್ದಾರೆ. 22 ವರ್ಷದ ಮಲಿಕ್ ಬೌಲಿಂಗ್ ಶೈಲಿಯನ್ನು ಗಮನಿಸುತ್ತಿರುವ ಅನೇಕ ಕ್ರಿಕೆಟ್ ದಿಗ್ಗಜರು ಮಲಿಕ್ ಅವರಿಗೆ ರಾಷ್ಟ್ರೀಯ ಕರೆ ಬರಲು ಹೆಚ್ಚು ದೂರವಿಲ್ಲ ಎಂದು ಹೇಳಿದ್ದಾರೆ.
ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಲಿಕ್ ಅವರು ಮಾತನಾಡಿದ್ದು, ವೇಗವು ನನಗೆ ಸ್ವಾಭಾವಿಕವಾಗಿ ಬರುತ್ತದೆ. ಅದನ್ನು ಹೆಚ್ಚಿಸಿಕೊಳ್ಳಲು ನಾನು ಏನು ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಯುವ ವೇಗಿ, ಕೌಶಲ್ಯ ರೂಡಿಸಿಕೊಳ್ಳಲು ಇರ್ಫಾನ್ ಪಠಾಣ್ ಅವರ ಬಳಿ ಪಡೆದ ಮಾರ್ಗದರ್ಶನ ಪಡೆದ ಬಗ್ಗೆ ಮಾತನಾಡಿದ್ದಾರೆ.
"ಈ ಹಿಂದೆ ಎತ್ತರದ ಜಿಗಿತಗಳಿಂದ ಒಳ್ಳೆಯ ಲಯವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಭಾರತದ ವೇಗಿ ಇರ್ಫಾನ್ ಅವರ ಮಾರ್ಗದರ್ಶನದ ನಂತರ ಉತ್ತಮ ಲಯವನ್ನು ಕಂಡುಕೊಳ್ಳಲು ಸಹಾಯಕವಾಗುತ್ತಿದೆ. ನಾನು ಕೇವಲ ಬಲಬದಿಯಲ್ಲಿ ಬೌಲಿಂಗ್ ಮಾಡುತ್ತಿದ್ದು ಆರು ಪಂದ್ಯಗಳಲ್ಲಿ ಒಂಬತ್ತು ವಿಕೆಟಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ
ಮುಂದುವರೆದು ಮಾತನಾಡಿರುವ ಉಮ್ರಾನ್ ಮಲಿಕ್ "ವೇಗ ನನಗೆ ಸ್ವಾಭಾವಿಕವಾಗಿ ಬರುತ್ತದೆ. ಈ ವರ್ಷ ನಾನು ಸರಿಯಾದ ಸ್ಥಳದಲ್ಲಿ ಬೌಲಿಂಗ್ ಮಾಡುಲು ಪ್ರಯತ್ನಿಸುತ್ತಿದ್ದೇನೆ. ನಾನು ಯಾವಾಗಲೂ ವೇಗವಾಗಿ ಬೌಲಿಂಗ್ ಮಾಡಲು ಯತ್ನಿಸುತ್ತಿರುವೆ. ನನಗೆ ನಾನೇ ರೋಲ್ ಮಾಡೆಲ್ ಆಗಿರುವೆ, ಇರ್ಫಾನ್ ಪಠಾಣ್ ನಮಗೆ ತರಬೇತಿ ನೀಡಲು ಬಂದಾಗ, ನಾನು ಹೊರಗೆ ಜಿಗಿಯುತ್ತಿದ್ದೆ ಮತ್ತು ನಾನು ಸಾಕಷ್ಟು ಅಸ್ಥಿರನಾಗಿದ್ದೆ, ನನಗೆ ಒಂದು ಸ್ಥಳದಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಇರ್ಫಾನ್ ಮಾರ್ಗದರ್ಶನದ ನಂತರ, ನಾನು ಕಡಿಮೆ ಜಿಗಿಯಲು ಪ್ರಾರಂಭಿಸಿದೆ ಮತ್ತು ನಾನು ಸರಿಯಾದ ಲಯವನ್ನು ಪಡೆಯಲಾರಂಭಿಸಿದೆ. ನಾನು ಜಮ್ಮು ಮತ್ತು ಕಾಶ್ಮೀರವನ್ನು ಮತ್ತು ನನ್ನ ದೇಶವನ್ನು ಹೆಮ್ಮೆ ಪಡಿಸಲು ಬಯಸುತ್ತೇನೆ. ಉತ್ತಮ ಪ್ರದರ್ಶನ ನೀಡುವುದು ನನ್ನ ಗುರಿ ಎಂದು ಉಮ್ರಾನ್ ಮಲಿಕ್ ಹೇಳಿದ್ದಾರೆ.
ದಿಗ್ಗಜರು ಟ್ವೀಟ್ ಮಾಡುತ್ತಿರುವುದು ಸಂತಸ ತಂದಿದೆ: ತನಗೆ ಯಾವುದೇ ಮಾದರಿಯಿಲ್ಲ ಎಂದು ಹೇಳಿರುವ ಮಲಿಕ್, "ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ವಿಶ್ವದ ಅತ್ಯುತ್ತಮ ಬೌಲರ್‌ಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಅವರೊಂದಿಗೆ ಹೋಲಿಕೆ ಮಾಡುತ್ತಿರುವುದು ನನಗೆ ಸಂತಸವಾಗುತ್ತಿದೆ ಎಂದಿದ್ದಾರೆ ಉಮ್ರಾನ್ ಮಲಿಕ್
"ನಾನು ಉತ್ತಮ ಪ್ರದರ್ಶನ ನೀಡಬೇಕು. ಕ್ರಿಕೆಟಿಗರು ನನ್ನ ಬಗ್ಗೆ ಟ್ವೀಟ್ ಮಾಡುವುದನ್ನು ನೋಡಿದಾಗ ತುಂಬಾ ಹೆಮ್ಮೆಯಾಗುತ್ತದೆ. ಇಂತಹ ದೊಡ್ಡ ಲೆಜೆಂಡ್‌ಗಳು ನನ್ನ ಬಗ್ಗೆ ಟ್ವೀಟ್ ಮಾಡುತ್ತಿರುವುದು ನೋಡಿ ಖುಷಿಯಾಗಿದೆ, ಅವರು ನನ್ನಲ್ಲಿ ಏನನ್ನೋ ಕಂಡಿರಬೇಕು, ಅದಕ್ಕಾಗಿಯೇ ನನ್ನ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ" ಎಂದು ಉಮ್ರಾನ್ ಮಲಿಕ್ ಪ್ರತಿಕ್ರಿಯೆ ನೀಡಿದ್ದಾರೆ