ಬಾಲಿವುಡ್ ಸ್ಟಾರ್ ನಟ ಯಾರು ಎಂಬುದೇ ನನಗೆ ಗೊತ್ತಿಲ್ಲ ಎಂದ ಐಪಿಎಲ್ ಸ್ಟಾರ್ ಕ್ರಿಕೆಟಿಗ!

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೂ ಭಾರತ ಚಲನಚಿತ್ರರಂಗಕ್ಕೂ ನಂಟಿದೆ. ಇತ್ತೀಚೆಗಷ್ಟೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡದ ಆಟಗಾರರು ಕೆಜಿಎಫ್ ಚಿತ್ರ ನೋಡಿದ್ದು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಆರ್ಆರ್ಆರ್ ಚಿತ್ರ ನೋಡಿದ್ದು ಇದಕ್ಕೆ ಉದಾಹರಣೆ. ಅಷ್ಟೆ ಅಲ್ಲದೇ ಕನ್ನಡದ ಹೊಂಬಾಳೆ ಪಿಲ್ಮ್ಸ್ ಸಂಸ್ಥೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜತೆ ಕೈಜೋಡಿಸಿದ್ದು, ದಕ್ಷಿಣ ಭಾರತ ಚಲನಚಿತ್ರರಂಗದ ಹಲವಾರು ದೃಶ್ಯಗಳಿಗೆ ಕ್ರಿಕೆಟಿಗರು ಡಬ್ ಸ್ಮ್ಯಾಶ್ ಮಾಡಿದ್ದೂ ಕೂಡ ಉಂಟು. ಇನ್ನು ಹಲವು ಸಿನಿಮಾ ಮಂದಿ ಐಪಿಎಲ್ ಫ್ರಾಂಚೈಸಿಗಳ ಜತೆ ನಂಟನ್ನು ಹೊಂದಿದ್ದು, ಕೆಲ ನಟ ನಟಿಯರು ಐಪಿಎಲ್ ಫ್ರಾಂಚೈಸಿಗಳ ಮಾಲೀಕತ್ಚವನ್ನು ಹೊಂದಿದ್ದರು ಹಾಗೂ ಹೊಂದಿದ್ದಾರೆ ಕೂಡ. ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೂ ಸಿನಿಮಾ ರಂಗಕ್ಕೂ ಬಿಡಿಸಲಾಗದ ಬಂಧವಿದ್ದು, ಹಲವು ಸಂದರ್ಶನಗಳಲ್ಲಿ ವಿದೇಶಿ ಆಟಗಾರರು ಹಲವು ಸಿನಿ ಕಲಾವಿದರ ಕುರಿತು ಮಾತನಾಡಿದ ಉದಾಹರಣೆಗಳಿವೆ.
ಇನ್ನು ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರನಾಗಿದ್ದ ಎಬಿ ಡಿವಿಲಿಯರ್ಸ್ ಡಾ ರಾಜ್‌ಕುಮಾರ್ ಮತ್ತು ಶಿವರಾಜ್‌ಕುಮಾರ್ ಹಾಡುಗಳನ್ನು ಹಾಡಿ ಈ ನಟರು ನನಗೆ ಗೊತ್ತು ಎಂದು ಸಂದರ್ಶನಗಳಲ್ಲಿ ಹೇಳಿದ್ದರು. ಆದರೆ, ಇದೀಗ ವಿದೇಶಿ ಕ್ರಿಕೆಟಿಗನೋರ್ವ ಬಾಲಿವುಡ್‌ನ ಖ್ಯಾತ ನಟ ಗೊತ್ತಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಆ ನಟನ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದಾರೆ.
ಹೌದು, ಪಂಜಾಬ್ ಕಿಂಗ್ಸ್ ತನ್ನ ಆಟಗಾರರ ವಿಶೇಷ ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಮಾತನಾಡಿರುವ ಹಲವು ಆಟಗಾರರು ಭಿನ್ನ ವಿಭಿನ್ನ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ. ಅದೇ ರೀತಿ ತಂಡದ ಪ್ರಮುಖ ವೇಗಿಯಾದ ಕಗಿಸೋ ರಬಾಡ ಕೂಡ ಈ ವಿಡಿಯೋದಲ್ಲಿ ಮಾತನಾಡಿದ್ದು, ಸಲ್ಮಾನ್ ಖಾನ್ ಗೊತ್ತಾ ಎಂಬ ಪ್ರಶ್ನೆ ಎದುರಾದಾಗ ಈ ಕೆಳಕಂಡಂತೆ ಉತ್ತರ ನೀಡಿ ಸಲ್ಮಾನ್ ಖಾನ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದಾರೆ.

ಸಲ್ಮಾನ್ ಖಾನ್ ಗೊತ್ತಿಲ್ಲ
ಸಂದರ್ಶಕಿ ಕಗಿಸೋ ರಬಾಡ ಅವರಿಗೆ ನಿಮಗೆ ಸಲ್ಮಾನ್ ಖಾನ್ ಗೊತ್ತಾ ಎಂಬ ಪ್ರಶ್ರೆಯನ್ನು ಹಾಕಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ರಬಾಡ ನನಗೆ ಸಲ್ಮಾನ್ ಖಾನ್ ಯಾರೋ ಗೊತ್ತಿಲ್ಲ, ಆದರೆ ರಶೀದ್ ಖಾನ್ ಗೊತ್ತು ಎಂದು ಹೇಳಿಕೆ ನೀಡಿದ್ದಾರೆ. ರಬಾಡ ನೀಡಿದ ಈ ಉತ್ತರವನ್ನು ಕೇಳಿದ ಕೆಲ ಸಲ್ಮಾನ್ ಖಾನ್ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ.

ಪಂಜಾಬ್ ಕಿಂಗ್ಸ್ ಪ್ಲೇಆಫ್ ಪ್ರವೇಶಿಸುತ್ತಾ?
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 11 ಪಂದ್ಯಗಳನ್ನಾಡಿರುವ ಪಂಜಾಬ್ ಕಿಂಗ್ಸ್ 5 ಪಂದ್ಯಗಳಲ್ಲಿ ಗೆದ್ದಿದ್ದು, ಉಳಿದ 6 ಪಂದ್ಯಗಳ್ಗಲ್ಲಿ ಸೋತು 10 ಅಂಕಗಳನ್ಜು ಪಡೆದುಕೊಳ್ಳುವ ಮೂಲಕ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಇನ್ನು ಈ ಬಾರಿ ಪಂಜಾಬ್ ಕಿಂಗ್ಸ್ ಯಶಸ್ವಿಯಾಗಿ ಪ್ಲೇಆಫ್ ಸುತ್ತಿಗೆ ಪ್ರವೇಶವನ್ನು ಪಡೆದುಕೊಳ್ಳಬೇಕೆಂದರೆ ಉಳಿದ ಮೂರು ಪಂದ್ಯಗಳ ಪೈಕಿ ಎಲ್ಲಾ ಪಂದ್ಯಗಳಲ್ಲಿಯೂ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.

ಪಂಜಾಬ್ ಕಿಂಗ್ಸ್ ಮುಂದಿನ ಪಂದ್ಯಗಳು
ಪಂಜಾಬ್ ಕಿಂಗ್ಸ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇನ್ನೂ ಒಟ್ಟು ಮೂರು ಪಂದ್ಯಗಳಲ್ಲಿ ಕಕ್ಕಿಳಿಯಲಿದ್ದು ಈ ಪಂದ್ಯಗಳ ಮಾಹಿತಿ ಇಲ್ಲಿದೆ.
* ಮೇ 13 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್
* ಮೇ 16 - ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್
*ಮೇ 22 - ಸನ್ ರೈಸರ್ಸ್ ಹೈದರಾಬಾದ್ vs ಪಂಜಾಬ್ ಕಿಂಗ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications