IPL 2022: ನಾನು ದ್ರಾವಿಡ್ ಮತ್ತು ಧೋನಿ ರೀತಿ ಅಲ್ಲ: ಸಂಜು ಸ್ಯಾಮ್ಸನ್

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ತನ್ನ ಐಪಿಎಲ್ ನಾಯಕತ್ವದ ಇತಿಹಾಸದಲ್ಲಿಯೇ ಅತ್ಯುನ್ನತ ಮಟ್ಟವನ್ನು ತಲುಪಿದ್ದರು ಎಂದು ಹೇಳಬಹುದು. ಹೌದು, ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಫೈನಲ್ ಪಂದ್ಯದವರೆಗೂ ಲಗ್ಗೆ ಇಟ್ಟು ಟ್ರೋಫಿ ಎತ್ತಿ ಹಿಡಿಯುವಲ್ಲಿ ವಿಫಲವಾಗಿತ್ತು. ಕಳೆದ ಭಾನುವಾರ ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ರಾಜಸ್ಥಾನ್ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 9 ಓವರ್‌ಗಳಲ್ಲಿ 130 ರನ್ ಕಲೆಹಾಕಿ ಎದುರಾಳಿ ಗುಜರಾತ್ ಟೈಟನ್ಸ್ ತಂಡಕ್ಕೆ 131 ರನ್‌ಗಳ ಗುರಿಯನ್ನು ನೀಡಿತ್ತು. ಅತ್ತ ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟನ್ಸ್ 18.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ 7 ವಿಕೆಟ್‌ಗಳ ಜಯವನ್ನು ಸಾಧಿಸಿತು.
ಹೀಗೆ ಫೈನಲ್ ಪಂದ್ಯದಲ್ಲಿ ಎಡವಿದ ರಾಜಸ್ಥಾನ್ ರಾಯಲ್ಸ್ ಲೀಗ್ ಹಂತದಲ್ಲಿನ ಪಂದ್ಯಗಳಲ್ಲಿ ಭರ್ಜರಿ ಗೆಲುವುಗಳನ್ನು ಕಂಡಿತ್ತು ಹಾಗೂ ಪ್ಲೇಆಫ್ ಸುತ್ತಿನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲಲೇಬೇಕಾದ ಸಂದರ್ಭ ಎದುರಾದಾಗ ಬಲಿಷ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆದ್ದು ಫೈನಲ್ ಪಂದ್ಯಕ್ಕೆ ಪ್ರವೇಶವನ್ನು ಪಡೆದುಕೊಂಡಿತ್ತು. ಹೀಗೆ ಈ ಬಾರಿಯ ಟೂರ್ನಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಸಂಜು ಸ್ಯಾಮ್ಸನ್ ಈ ಹಿಂದೆ ನಾಯಕನಾಗಿ ಆಯ್ಕೆಯಾದಾಗ ಇಂಡಿಯನ್ ಎಕ್ಸ್‌ಪ್ರೆಸ್ ನಡೆಸಿದ್ದ ಸಂದರ್ಶನದಲ್ಲಿ ಭಾರತ ಕ್ರಿಕೆಟ್ ಕಂಡ ಉತ್ತಮ ಆಟಗಾರರಾದ ಎಂಎಸ್ ಧೋನಿ ಮತ್ತು ರಾಹುಲ್ ದ್ರಾವಿಡ್ ಕುರಿತು ಮಾತನಾಡಿ ಈ ಕೆಳಕಂಡಂತೆ ಹೇಳಿಕೆ ನೀಡಿದ್ದರು.

ನಾನು ಎಂಎಸ್ ಧೋನಿ ಮತ್ತು ದ್ರಾವಿಡ್‌ಗಿಂತ ವಿಭಿನ್ನ
"ನಾನು ದ್ರಾವಿಡ್ ಅಥವಾ ಧೋನಿ ಅಥವಾ ಬೇರೆಯವರಿಗಿಂತ ಭಿನ್ನ. ಆದ್ದರಿಂದ, ನಾನು ನನ್ನಂತೆಯೇ ನೈಸರ್ಗಿಕವಾಗಿರಲು ಪ್ರಯತ್ನಿಸುತ್ತೇನೆ. ಸಾಮಾನ್ಯವಾಗಿ, ನಾನು ತಂಡದ ಮನಸ್ಥಿತಿಯನ್ನು ನಿರ್ಣಯಿಸಲು ಪ್ರಯತ್ನಿಸುತ್ತೇನೆ. ಕೆಲವೊಮ್ಮೆ ಆಟಗಾರರು ವಿಫಲರಾಗುತ್ತಾರೆ, ಹಾಗಂತ ಅವರಿಗೆ ನೀವು ಅತ್ಯುತ್ತಮವಾಗಿ ಆಡಿ ಎಂದು ಹೇಳುವ ಅಗತ್ಯವಿಲ್ಲ. ಹಾಗೆ ಹೇಳಿದರೆ ಅದು ನಮ್ಮ ಮೂರ್ಖತನವಾಗುತ್ತದೆ, ಏಕೆಂದರೆ ಪ್ರತಿಯೊಬ್ಬರೂ ಸಹ ಉತ್ತಮ ಪ್ರದರ್ಶನ ನೀಡಿ ಪ್ರತಿಭೆಯನ್ನು ಪ್ರದರ್ಶಿಸಬೇಕೆಂದೇ ಕಣಕ್ಕಿಳಿದಿರುತ್ತಾರೆ" ಎಂದು ಸಂಜು ಸ್ಯಾಮ್ಸನ್ ಹೇಳಿಕೆ ನೀಡಿದ್ದರು.

ದ್ರಾವಿಡ್ ಸ್ಪೂರ್ತಿ ಎಂದಿದ್ದ ಸ್ಯಾಮ್ಸನ್
ಇನ್ನೂ ಮುಂದುವರೆದು ಮಾತನಾಡಿದ್ದ ಸಂಜು ಸ್ಯಾಮ್ಸನ್ ರಾಹುಲ್ ದ್ರಾವಿಡ್ ಸ್ಪೂರ್ತಿ ಎಂದು ಹೇಳಿದ್ದರು. ಅವರ ಮಾತುಗಳು ಯಾವಾಗಲೂ ಆಳವಾಗಿರುತ್ತಿದ್ದವು, ಅವರು ಹೆಚ್ಚು ಜೀವನದ ಉದ್ದೇಶದ ಬಗ್ಗೆ ಮಾತನಾಡುತ್ತಿದ್ದರು ಹಾಗೂ ಅವು ನಮ್ಮ ಗಮನವನ್ನು ಹೆಚ್ಚು ದಿನಗಳವರೆಗೆ ಹಿಡಿದಿಟ್ಟುಕೊಳ್ಳುತ್ತಿದ್ದವು, ಅವರು ನಮ್ಮ ಮೇಲಿನ ಪ್ರೀತಿಯಿಂದ ಹೇಳಿದ ಮಾತುಗಳು ನಮಗೆ ಉತ್ತಮ ಆಟವನ್ನಾಡಲು ಸ್ಪೂರ್ತಿ ಎಂದು ಸ್ಯಾಮ್ಸನ್ ಹೇಳಿಕೊಂಡಿದ್ದರು.

2022ರ ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್ ಅಂಕಿಅಂಶ
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಾಯಕನಾಗಿ ಯಶಸ್ಸು ಸಾಧಿಸಿರುವ ಸ್ಯಾಮ್ಸನ್ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ಬೇಕಿದ್ದ ಪ್ರದರ್ಶನ ನೀಡುವಲ್ಲಿ ವಿಫಲವಾಗಿಲ್ಲ. ಟೂರ್ನಿಯಲ್ಲಿ 17 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿದ ಸ್ಯಾಮ್ಸನ್ 458 ರನ್ ಕಲೆಹಾಕಿದ್ದು 2 ಬಾರಿ ಅರ್ಧಶತಕಗಳನ್ನು ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications