ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಭಾರತದ ಈ ಬ್ಯಾಟ್ಸ್‌ಮನ್‌ಗೆ ಮಾತ್ರ ಬೌಲಿಂಗ್ ಮಾಡಲು ಭಯಪಟ್ಟಿದ್ದೆ ಎಂದ ರಶೀದ್ ಖಾನ್!

IPL 2022: I was thinking its hard to bowl to Shubman Gill says Rashid Khan
ಭಾರತದಲ್ಲಿರೋ ತನ್ನ ಅಭಿಮಾನಿಗಳಿಗೆ ವಿಶೇಷ ಸಂದೇಶದ ಮೂಲಕ ವಿದಾಯ ಹೇಳಿದ Rashid Khan | #Cricket |Oneindia Kannada

ಕಳೆದ ಭಾನುವಾರ ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯ ನಡೆಯಿತು ಹಾಗೂ ಪದಾರ್ಪಣೆ ಮಾಡಿದ ಆವೃತ್ತಿಯಲ್ಲಿಯೇ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು. ತಂಡದ ಎಲ್ಲಾ ಆಟಗಾರರ ಉತ್ತಮ ಪ್ರದರ್ಶನ, ಹಾರ್ದಿಕ್ ಪಾಂಡ್ಯ ಚಾಣಾಕ್ಷಣತೆಯ ನಾಯಕತ್ವ ಹಾಗೂ ಹೆಡ್ ಕೋಚ್ ಆಶಿಶ್ ನೆಹ್ರಾ ಅತ್ಯುತ್ತಮ ಮಾರ್ಗದರ್ಶನ ತಂಡವನ್ನು ಚಾಂಪಿಯನ್ ಆಗಿ ಹೊರಹೊಮ್ಮುವಂತೆ ಮಾಡಿತು.

IPL 2022: ಅತಿಹೆಚ್ಚು ಬಾರಿ ಡಕ್‌ಔಟ್ ಆದ ಆಟಗಾರರಿವರು; ಈ ಕೆಟ್ಟ ದಾಖಲೆಯಲ್ಲಿ ಯಾರು ಟಾಪ್?IPL 2022: ಅತಿಹೆಚ್ಚು ಬಾರಿ ಡಕ್‌ಔಟ್ ಆದ ಆಟಗಾರರಿವರು; ಈ ಕೆಟ್ಟ ದಾಖಲೆಯಲ್ಲಿ ಯಾರು ಟಾಪ್?

ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯವೊಂದಕ್ಕೆ ನಾಯಕ ಹಾರ್ದಿಕ್ ಪಾಂಡ್ಯ ಅಲಭ್ಯರಾಗಿದ್ದ ಕಾರಣ ಆ ಪಂದ್ಯದಲ್ಲಿ ತಂಡದ ಉಪನಾಯಕ ರಶೀದ್ ಖಾನ್ ಅವರೇ ನಾಯಕತ್ವವನ್ನು ನಿರ್ವಹಿಸಿದ್ದರು ಹಾಗೂ ತಂಡವನ್ನು ಗೆಲ್ಲಿಸಿದ್ದರೂ ಕೂಡ. ಹೀಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ಉಪನಾಯಕನಾಗಿದ್ದ ರಶೀದ್ ಖಾನ್ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದು, ಈ ಬಾರಿ ಒಟ್ಟು 16 ಪಂದ್ಯಗಳನ್ನಾಡಿದ್ದು 19 ವಿಕೆಟ್ ಪಡೆದು 6.60 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಹಾಗೂ ಈ ಬಾರಿಯ ಟೂರ್ನಿಯಲ್ಲಿ ತಮ್ಮ ಬ್ಯಾಟಿಂಗ್ ಕೌಶಲ್ಯತೆಯನ್ನು ಪ್ರದರ್ಶಿಸಿದ ರಶೀದ್ ಖಾನ್ ಕೆಲ ಪ್ರಮುಖ ಇನ್ನಿಂಗ್ಸ್‌ನಲ್ಲಿ ಒಳ್ಳೆಯ ಆಟವನ್ನಾಡಿದ್ದಾರೆ.

2008ರಿಂದ 2022ರವರೆಗೆ ಐಪಿಎಲ್ ಟ್ರೋಫಿ ಗೆಲ್ಲಿಸಿದ ಎಲ್ಲಾ ಹೆಡ್ ಕೋಚ್‌ಗಳ ಪಟ್ಟಿ; ಒಬ್ಬರೇ ಭಾರತೀಯ!2008ರಿಂದ 2022ರವರೆಗೆ ಐಪಿಎಲ್ ಟ್ರೋಫಿ ಗೆಲ್ಲಿಸಿದ ಎಲ್ಲಾ ಹೆಡ್ ಕೋಚ್‌ಗಳ ಪಟ್ಟಿ; ಒಬ್ಬರೇ ಭಾರತೀಯ!

ಇನ್ನು 2017ರಿಂದ ಐಪಿಎಲ್ ಆಡುತ್ತಿರುವ ರಶೀದ್ ಖಾನ್ ಈಗಾಗಲೇ ವಿಕೆಟ್ ಕಬಳಿಸುವಿಕೆಯಲ್ಲಿ ಶತಕ ಬಾರಿಸಿದ್ದಾರೆ. ಇಲ್ಲಿಯವರೆಗೂ ಆಡಿರುವ ಒಟ್ಟು 92 ಐಪಿಎಲ್ ಪಂದ್ಯಗಳಲ್ಲಿ 112 ವಿಕೆಟ್ ಪಡೆದಿರುವ ರಶೀದ್ ಖಾನ್ 6.38ರ ಉತ್ತಮ ಎಕಾನಮಿ ರೇಟ್‌ನ್ನು ನಿಭಾಯಿಸಿದ್ದಾರೆ. ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಉತ್ತಮ ಪ್ರದರ್ಶನ ನೀಡಿರುವ ರಶೀದ್ ಖಾನ್ ಬೌಲಿಂಗ್ ಎಂದರೆ ಅಬ್ಬರಿಸಬಲ್ಲ ಬಲಿಷ್ಟ ಬ್ಯಾಟ್ಸ್‌ಮನ್‌ಗಳೇ ಭಯಬೀಳುತ್ತಾರೆ. ಅಂತದ್ದರಲ್ಲಿ ರಶೀದ್ ಖಾನ್ ಐಪಿಎಲ್‌ನಲ್ಲಿ ಈ ಆಟಗಾರನಿಗೆ ಬೌಲಿಂಗ್ ಮಾಡುವುದು ಕಷ್ಟ ಎಂದು ಭಯಪಟ್ಟಿದ್ದನ್ನು ಹೇಳಿಕೊಂಡಿದ್ದಾರೆ. ಹೀಗೆ ರಶೀದ್ ಖಾನ್‌ಗೆ ಬೌಲಿಂಗ್ ಮಾಡಲು ಕಷ್ಟ ಎನಿಸುವಂತೆ ಮಾಡಿದ ಬ್ಯಾಟ್ಸ್‌ಮನ್ ಯಾರು, ಆತನ ಬಗ್ಗೆ ರಶೀದ್ ಖಾನ್ ಹೇಳಿದ್ದೇನು ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ.

ಈ ಆಟಗಾರನಿಗೆ ಬೌಲ್ ಮಾಡುವುದು ಕಷ್ಟ

ಈ ಆಟಗಾರನಿಗೆ ಬೌಲ್ ಮಾಡುವುದು ಕಷ್ಟ

ರಶೀದ್ ಖಾನ್ ತಮ್ಮದೇ ತಂಡದ ಆಟಗಾರ ಶುಬ್ಮನ್ ಗಿಲ್‌ಗೆ ಬೌಲಿಂಗ್ ಮಾಡಲು ಕಷ್ಟ ಎಂದು ಯೋಚಿಸಿದ್ದ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಹೌದು, ಗಿಲ್‌ಗೆ ಬೌಲಿಂಗ್ ಮಾಡುವುದು ಬಲು ಕಷ್ಟ ಎಂದು ಐಪಿಎಲ್ ಶುರುವಾಗುವ ಮುನ್ನವೇ ಎನಿಸಿತ್ತು, ಆದರೆ ಆತ ಈ ಬಾರಿ ತ ತಂಡದಲ್ಲಿರುವುದು ತನ್ನ ಅದೃಷ್ಟ ಎಂದು ರಶೀದ್ ಖಾನ್ ಹೇಳಿದ್ದಾರೆ.

ಟೂರ್ನಿಯಲ್ಲಿ ಅಬ್ಬರಿಸಿದ ಶುಬ್‌ಮನ್ ಗಿಲ್

ಟೂರ್ನಿಯಲ್ಲಿ ಅಬ್ಬರಿಸಿದ ಶುಬ್‌ಮನ್ ಗಿಲ್

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ಪರ ಕಣಕ್ಕಿಳಿದ ಶುಬ್‌ಮನ್ ಗಿಲ್ 16 ಪಂದ್ಯಗಳನ್ನಾಡಿ 483 ರನ್ ಕಲೆಹಾಕಿದ್ದಾರೆ. ಈ ಪೈಕಿ 4 ಅರ್ಧಶತಕಗಳನ್ನು ಸಿಡಿಸಿರುವ ಗಿಲ್ ಗಳಿಸಿರುವ ಗರಿಷ್ಟ ರನ್ 96. ಹೀಗೆ ಈ ಆವೃತ್ತಿಯಲ್ಲಿ 483 ಬಾರಿಸಿರುವ ಗಿಲ್ ಸತತ ಮೂರು ಆವೃತ್ತಿಗಳಲ್ಲಿ 400ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ.

ಟೀಮ್ ಇಂಡಿಯಾದಲ್ಲಿಲ್ಲ ಗಿಲ್‌ಗೆ ಸ್ಥಾನ

ಟೀಮ್ ಇಂಡಿಯಾದಲ್ಲಿಲ್ಲ ಗಿಲ್‌ಗೆ ಸ್ಥಾನ

ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಸಹ ಶುಬ್‌ಮನ್ ಗಿಲ್‌ಗೆ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಆಡುವ ಅವಕಾಶ ಸಿಕ್ಕಿಲ್ಲ.

ದಕ್ಷಿಣ ಆಫ್ರಿಕಾ ಟಿ ಟ್ವೆಂಟಿ ಸರಣಿಗೆ ಪ್ರಕಟವಾಗಿರುವ ಭಾರತ ತಂಡ ಹೀಗಿದೆ: ಕೆಎಲ್ ರಾಹುಲ್ ( ನಾಯಕ ) , ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಸಿಂಗ್ ಪಟೇಲ್, ಅವೇಶ್ ಖಾನ್ , ಉಮ್ರಾನ್ ಮಲಿಕ್

Story first published: Wednesday, June 1, 2022, 10:22 [IST]
Other articles published on Jun 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X