
ಐಪಿಎಲ್ ಟೂರ್ನಿ ಆರಂಭವಾಗಿ ಇಂದಿಗೆ ಭಡ್ತಿ 15 ವರ್ಷಗಳಾಗಿದೆ. 2008ನೇ ಇಸವಿಯಲ್ಲಿ ಇದೇ ದಿನ ಐಪಿಎಲ್‌ನ ಮೊದಲ ಪಂದ್ಯ ನಡೆದಿತ್ತು. ಚೊಚ್ಚಲ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳು ಮುಖಾಮುಖಿಯಾಗಿದ್ದವು. ಐಪಿಎಲ್‌ನ ಮೊದಲ ಆವೃತ್ತಿಯ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡದ ಬೌಲರ್‌ಗಳನ್ನು ಧೂಳಿಪಟ ಮಾಡಿ ಅಜೇಯ 158 ರನ್‌ಗಳಿಸಿದ ಸ್ಪೋಟಕ ಬ್ಯಾಟರ್ ಬ್ರೆಂಡನ್ ಮೆಕಲಮ್ ಐಪಿಎಲ್ ಟೂರ್ನಿಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
2008ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು ವಿಕ್ಷಿಸಲು ಆಗಮಿಸಿದ್ದ ಪ್ರೇಕ್ಷರಿಗೆ ಮನರಂಜನೆಯ ಮಹಾಪೂರವನ್ನೇ ನೀಡಿದ್ದರು ಮೆಕ್‌ಕಲಮ್. ಕೆಕೆಆರ್ ತಂಡದಲ್ಲಿದ್ದ ನ್ಯೂಜಿಲೆಂಡ್‌ನ ಮಾಜಿ ನಾಯಕ ಮೆಕಲಮ್ ಕೇವಲ 73 ಎಸೆತಗಳಲ್ಲಿ 13 ಸಿಕ್ಸರ್‌ಗಳು ಮತ್ತು 10 ಬೌಂಡರಿಗಳೊಂದಿಗೆ ಅಜೇಯ ರನ್ 158 ಗಳಿಸಿದ್ದರು. ಮೆಕಲಮ್ ಅವರ ಬಿರುಸಿನ ಶತಕದ ಸಹಾಯದಿಂದ ಕೆಕೆಆರ್ ತಂಡ 222 ರನ್‌ಗಳನ್ನು ಕಲೆಹಾಕಿತ್ತು. ಮತ್ತು ಈ ಪಂದ್ಯದಲ್ಲಿ ಕೆಕೆಆರ್ ತಂಡ ಅಂತಿಮವಾಗಿ 140 ರನ್‌ಗಳ ಅಂತರದಿಂದ ಜಯಗಳಿಸುವ ಮೂಲಕ ಐಪಿಎಲ್ ಆವೃತ್ತಿಗೆ ಭರ್ಜರಿ ಪ್ರಾರಂಭ ಲಭಿಸಿತ್ತು.
ಕ್ರಿಕೆಟ್ ಅಭಿಮಾನಿಗಳಲ್ಲಿ ರೊಚಕತೆಯನ್ನುಂಟು ಮಾಡಿರುವ ಈ ಪಂದ್ಯ ಮುಂಬರುವ ದಿನಗಳಲ್ಲಿ ಐಪಿಎಲ್ ಎಂಬುದು ಯಾವ ಮಟ್ಟಕ್ಕೆ ಬೆಳೆದು ಹೆಮ್ಮರವಾಗಲಿದೆ ಎಂಬುದರ ಬಗ್ಗೆ ಸೂಕ್ಷ್ಮ ಸುಳಿವು ಮೂಡಿಸಿತ್ತು. ಕೊಚ್ಚಿ ಟಸ್ಕರ್ಸ್ ಕೇರಳ, ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಲಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ವಿವಿಧ ಫ್ರಾಂಚೈಸಿಗಳಿಗಾಗಿ ಮೆಕಲಮ್ ಅವರು 2018 ರ ವರೆಗೆ ಆಡಿದರು.
ಪ್ರತಿಬಾರಿ ಮೈದಾನಕ್ಕಿಳಿದಾಗಲೆಲ್ಲಾ ಮೆಕಲಮ್ ಬ್ಯಾಟಿಂಗ್ ವೈಖರಿ ಆಕ್ರಮಣಕಾರಿಯಾಗಿರುತ್ತಿತ್ತು. ಪ್ರಸ್ತುತದಲ್ಲಿ ತಮ್ಮದೇ ಆಕ್ರಮಣಕಾರಿ ಶೈಲಿಯಲ್ಲಿ ಕೆಕೆಆರ್ ತಂಡಕ್ಕೆ ತರಬೇತಿ ನೀಡುತ್ತಿರುವ ಮೆಕಲಮ್ ಆವೃತ್ತಿಯ ಆರಂಭವಾದ ರೊಮಾಂಚನಕಾರಿ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.
ಮೊದಲ ಪಂದ್ಯ ನಡೆಯುವವರೆಗೂ ಅಭಿಮಾನಿಗಳಲ್ಲಿ ಐಪಿಎಲ್ ಪಂದ್ಯಾವಳಿಯ ತೀವ್ರತೆ ಅರ್ಥವಾಗಿರಲಿಲ್ಲ. ಆರಂಭಿಕವೇ ಸ್ಟೋಟಕವಾಗಿದ್ದರಿಂದ ಪಂದ್ಯಾವಳಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಹಕಾರಿಯಾಗಿತ್ತು. ಈ ಸ್ಪೋಟಕ ಆರಂಭದ ಬಳಿಕ ಭಾರತದಲ್ಲಿ ಕ್ರಿಕೆಟ್ ಅಭಿಮಾನಿಗಳು ಹೇಗೆ ಉತ್ಸುಕರಾಗಿದ್ದಾರೆಂದು ಮೆಕ್‌ಕಲಮ್ ವಿವರಿಸಿದ್ದಾರೆ. "ಸಾಮಾನ್ಯವಾಗಿ ಕ್ರಿಕೆಟನ್ನು ಬೆಂಬಲಿಸುವ ಯಾರೂ, ಈ ಟೂರ್ನಿ ಎಷ್ಟು ದೊಡ್ಡದಾಗಿ ಬೆಳೆಯಲಿದೆ ಎಂಬುದನ್ನು ಅರಿತುಕೊಂಡಿರಲಿಲ್ಲ. ಆದರೇ ಆ ರಾತ್ರಿಯಲ್ಲಿ ನಮಗೆ ಅರ್ಥವಾಗಿತ್ತು ಕ್ರಿಕೆಟ್ ಅನ್ನು ಅನುಸರಿಸುವ ಜನರು ಮತ್ತು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಇದ್ದಾರೆ" ಎಂದು ಮೆಕ್‌ಕಲಮ್ ಹೇಳಿದ್ದಾರೆ.
ಈವರೆಗೂ ಕೆಕೆಆರ್ ತಂಡದಿಂದ ಯಾವುದೇ ಬ್ಯಾಟರ್‌ನಿಂದ ಮೆಕಲಮ್ ಅವರ ದಾಖಲೆಯನ್ನು ಸರಿಗಟ್ಟಲು ಸಾಧ್ಯವಾಗಿಲ್ಲ. ಕೆಕೆಆರ್ ತಂಡದ ಪರವಾಗಿಯೇ ಇಂದುಗೂ ಆ ಸ್ಕೋರ್ ಹೈಯೆಸ್ಟ್ ಸ್ಕೋರ್ ಆಗಿಯೇ ಉಳಿದುಕೊಂಡಿದೆ. ಪ್ರಸ್ತುತದಲ್ಲಿ ತಂಡದಿಂದ ಎರಡನೇ ಶತಕ ದಾಖಲಿಸುವ ಕೆಲಸ ಮಾಡಬೇಕಾಗಿದೆ ಏಕೆಂದರೆ ನಾನು ಈ ತಂಡದ ಅವರ ಬ್ಯಾಟಿಂಗ್ ಕೋಚ್ ಆಗಿದ್ದೇನೆ ಎಂದಿದ್ದಾರೆ ಬ್ರೆಂಡನ್ ಮೆಕ್‌ಕಲಮ್.
ಮುಂಬರುವ ದಿನಗಳಲ್ಲಿ ಎರಡನೇ ಅಥವಾ ಮೂರನೇ ಶತಕವನ್ನು ನೋಡಲು ಆಶಾದಾಯಕವಾಗಿದ್ದೇವೆ ಎಂದಿದ್ದಾರೆ ಮೆಕ್‌ಕಲಮ್. ನಿಜ ಹೇಳಬೇಕೆಂದರೆ ಮೊದಲ ಪಂದ್ಯದ ಬಗ್ಗೆ ನನಗೆ ಹೆಚ್ಚು ನೆನಪುಗಳಿಲ್ಲ. ನೆನಪುಗಳು ಸ್ವಲ್ಪ ಅಸ್ಪಷ್ಟವಾಗಿದೆ. ಮೊದಲ ರನ್ ಗಳಿಸಲು ಎಂಟು ಎಸೆತಗಳನ್ನು ತೆಗೆದುಕೊಂಡಿದ್ದೆ. ನನ್ನ ದಾರಿಯಲ್ಲಿ ಸ್ವಲ್ಪ ಹೋರಾಟದ ಜೊತೆಗೆ ಅದೃಷ್ಟವು ಉತ್ತಮ ಸಾಥ್ ನೀಡಿತ್ತು. ಆ ಆವೃತ್ತಿಗಳಲ್ಲಿ ನನ್ನ ಪ್ರದರ್ಶನ ಉತ್ತಮವಾಗಿತ್ತು ಎಂದು ಭಾವಿಸುತ್ತೇನೆ" ಎಂದು ಹೇಳಿದ್ದಾರೆ ಬ್ರೆಂಡನ್ ಮೆಕ್‌ಕಲಮ್.