Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022: ನೀತಿ ಸಂಹಿತೆ ಉಲ್ಲಂಘಿಸಿದ ನಿತಿಶ್ ರಾಣಾಗೆ ದಂಡ, ಬುಮ್ರಾಗೆ ವಾರ್ನಿಂಗ್

Bumrah and nitish rana

ಪುಣೆಯ ಮಹಾರಾಷ್ಟ್ರ ಕ್ರೀಕೆಟ್ ಅಸೋಸಿಯೇಶನ್ ಸ್ಟೇಡಿಯಂ ನಲ್ಲಿ ಬುಧವಾರ ರಾತ್ರಿ ನಡೆದ ಮುಂಬೈ ಇಂಡಿಯನ್ಸ ಮತ್ತು ಕೊಲ್ಕತ್ತಾ ನೈಟ್‌ ರೈಡರ್ಸ್ ನಡುವಿನ ಪಂದ್ಯದಲ್ಲಿ ಮುಂಬೈ ತಂಡದ ವೇಗಿ ಜಸ್ಪ್ರಿತ್ ಬುಮ್ರಾ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟರ್ ನೀತಿಶ್ ರಾಣಾ ಅವರಿಗೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ.

ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬೌಲರ್ ಬುಮ್ರಾ ಐಪಿಎಲ್ ನೀತಿ ಸಂಹಿತೆಯ ಮೊದಲ ಹಂತದ ಅಪರಾಧವನ್ನ ಒಪ್ಪಿಕೊಂಡಿದ್ದು, ಸದ್ಯಕ್ಕೆ ಬುಮ್ರಾಗೆ ವಾಗ್ದಂಡನೆ ಹಾಕಲಾಗಿದೆ. ಇನ್ನು ನಿಯಮ ಉಲ್ಲಂಘಿಸಿದ ಕೆಕೆಆರ್ ಪ್ಲೇಯರ್ ನಿತೀಶ್ ರಾಣಾಗೆ ದಂಡ ವಿಧಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಐಪಿಎಲ್ ಮ್ಯಾನೆಂಜ್‌ಮೆಂಟ್, ಐಪಿಎಲ್ ನೀತಿ ಸಂಹಿತೆ ಲೆವೆಲ್ 1ನ್ನು ಉಲ್ಲಂಘಿಸಿದ್ದಕ್ಕೆ ಪಂದ್ಯದ ಸಂಭಾವನೆ 10 ಪ್ರತಿಶತ ದಂಡವನ್ನು ಪಾವತಿಸುಂತೆ ರಾಣಾ ಅವರಿಗೆ ತಿಳಿಸಲಾಗಿದೆ. ಅದರೆ ಬುಮ್ರಾ ಅವರಿಗೆ ಕೇವಲ ಎಚ್ಚರಿಕೆ ನೀಡಿದ್ದು, ಯಾವುದೇ ರೀತಿಯ ದಂಡ ಪಾವತಿಸಲು ಹೇಳಿಲ್ಲ.

ಪ್ಯಾಟ್ ಕಮಿನ್ಸ್ ಅಬ್ಬರ
ಮುಂಬೈ ಇಂಡಿಯನ್ಸ್ ವಿರುದ್ಧ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಅಬ್ಬರ ಮೆರೆದ ಪ್ಯಾಟ್‌ ಕಮಿನ್ಸ್ 4ಓವರ್ ಬೌಲ್ ಮಾಡಿ 2 ವಿಕೆಟ್ ಪಡೆದಿದ್ದಲ್ಲದೆ. ಐಪಿಎಲ್‌ನಲ್ಲಿ ವೇಗದ ಅರ್ಧಶತಕದ ದಾಖಲೆ ಮಾಡಿದರು. 162ರನ್ ಗುರಿ ಬೆನ್ನತ್ತಿದ ಕೆಕೆಆರ್ ಪರ ಅಬ್ಬರದ ಆಟವಾಡಿದ ಪ್ಯಾಟ್ ಕಮಿನ್ಸ್ 14 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು.

16ನೇ ಓವರ್‌ನಲ್ಲಿ ಡೇನಿಯಲ್ ಸ್ಯಾಮ್ಸ್ ಬೌಲಿಂಗ್‌ನಲ್ಲಿ 35ರನ್‌ ಕಲೆಹಾಕಿದ ಈತ ತಂಡಕ್ಕೆ ನಾಲ್ಕು ಓವರ್ ಬಾಕಿ ಇರುವಂತೆಯೇ ಗೆಲುವು ತಂದುಕೊಟ್ಟರು. ಈತನ ಇನ್ನಿಂಗ್ಸ್‌ನಲ್ಲಿ ಆರು ಅಮೋಘ ಸಿಕ್ಸರ್‌ಗಳಿದ್ದವು.

Story first published: Thursday, April 7, 2022, 14:05 [IST]
Other articles published on Apr 7, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+