Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2022 : ಬಟ್ಲರ್ ಬ್ಯಾಟಿಂಗ್ ಚೀಟಿಂಗ್ ಕೋಡ್ ಹಾಕಿಕೊಂಡಿದ್ದಾರೆ ಎಂದ ಜೋಫ್ರಾ ಆರ್ಚರ್

Jos B

ಐಪಿಎಲ್ 2022ರ ಆವೃತ್ತಿಯ ಸ್ಪೋಟಕ ಬ್ಯಾಟರ್ ರಾಜಸ್ಥಾನ ತಂಡದ ಜಾಸ್ ಬಟ್ಲರ್ ಸತತವಾಗಿ ಮೂರು ಶತಕಗಳನ್ನು ಬಾರಿಸಿದ್ದಾರೆ. ರಾಜಸ್ಥಾನ ತಂಡದ ಬ್ಯಾಟಿಂಗ್ ಬೆನ್ನೆಲುಬು ಆಗಿರುವ ಬಟ್ಲರ್‌ ಆರೆಂಜ್ ಕ್ಯಾಪ್ ರೇಸನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಡೆಲ್ಲಿ ವಿರುದ್ದದ ಪಂದ್ಯದಲ್ಲಿ ಶತಕಗಳಿಸುವ ಮೂಲಕ ಒಂದೇ ಆವತ್ತಿಯಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ ಬಟ್ಲರ್. ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಶತಕಗಳನ್ನು ಗಳಿಸಿದ ನಂತರ, ಡೆಲ್ಲಿ ತಂಡದ ವಿರುದ್ದ 116 ರನ್ ಗಳಿಸುವ ಮೂಲಕ ಹ್ಯಾಟ್ರಿಕ್ ಶತಕವೀರ ಎಂಬ ಖ್ಯಾತಿಗೆ ಭಾಗಿಯಾಗಿದ್ದಾರೆ. ಕಳೆದ ಏಳು ಪಂದ್ಯಗಳಲ್ಲಿ 491 ರನ್‌ಗಳನ್ನು ಗಳಿಸುವ ಮೂಲಕ ಆರೆಂಜ್ ಕ್ಯಾಪ್‌ ಪಡೆದುಕೊಂಡಿರುವ ಬಟ್ಲರ್‌ ಅವರನ್ನು ತಡೆಯುವುದು ಪ್ರತಿ ಸ್ಪರ್ಧಿಗಳಿಗೆ ಸವಾಲಿನ ಕೆಲಸವಾಗಿದೆ.

ಚೀಟಿಂಗ್ ಕೋಡ್ ಹಾಕಿಕೊಂಡಿರು ಜಾಸ್:
ಜಾಸ್ ಬಟ್ಲರ್ ಬ್ಯಾಂಟಗ್ ಶೈಲಿಗೆ ಅಭಿಮಾನಿಯಾಗಿರುವ ಇಂಗ್ಲಿಷ್ ಕ್ರಿಕೆಟಿಗ ಜೋಪ್ರಾ ಆರ್ಚರ, ಜಾಸ್ ಅವರು ಗೆಮಿಂಗ್ ನಲ್ಲಿರುವಂತೆ ಬ್ಯಾಟಿಂಗ್ ಚೀಟ್‌ ಕೊಡ ಹಾಕಿಕೊಂಡಿದ್ದರೆ. ಅದಕ್ಕಾಗಿ ಮೇಲಿಂದ ಮೇಲೆ ಈ ರೀತಿಯಾಗಿ ಶತಕಗಳನ್ನು ಬಾರಿಸುತ್ತಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ.

ಕೆಕೆಆರ್ ವಿರುದ್ಧದ ಪಂದ್ಯವನ್ನು ಗೆದ್ದ ಕೆಲವೇ ದಿನಗಳಲ್ಲಿ ಬಟ್ಲರ್ ತಮ್ಮ ಪವರ್ ಹಿಟ್ಟಿಂಗ್ ಸಾಮರ್ಥ್ಯಗಳೊಂದಿಗೆ ಬ್ಯಾಟಿಂಗ್ ಅಸ್ತಿತ್ವವನ್ನು ಪ್ರದರ್ಶಿಸಿದ್ದಾರೆ. ಜೋಸ್ ಬಟ್ಲರ್ ಅವರಿಗೆ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಉತ್ತಮ ಸಾಥ್ ನೀಡುತ್ತಿರುವುದರಿಂದ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿದಂತಾಗಿದೆ.

ಮೊದಲಿಗೆ ಡಾ.ಡಿ.ವೈ ಪಾಟೀಲ್ ಕ್ರೀಂಡಾಗಣದಲ್ಲಿ ನಡೆದ ಮುಂಬೈ ವಿರುದ್ದದ ಪಂದ್ಯದಲ್ಲಿ ಶತಕಗಳಿಸಿದ ಬಟ್ಲರ್, ನಂತರದಲ್ಲಿ ಬರ್ಬೋನ್ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ ವಿರುದ್ದ 103 ರನ್ ಚೆಚ್ಚಿದರು. ಈಗ ವಾಂಖೆಡೆ ಕ್ರೀಡಾಂಗಣದಲ್ಲಿಯೂ ಸಹ ಮೂರಂಕಿಯ ಸ್ಕೋರ್ ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ತಮ್ಮ ಹೆಸರು ಅಚ್ಚಳಿಯುವಂತೆ ಮಾಡಿದ್ದಾರೆ.

ಇರ್ಫಾನ್ ಪಠಾಣ್ :
ವಿರಾಟ್ ನಂತರದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವೀರ ಬಟ್ಲರ್ ಎಂದು ಮಾಜಿ ಕ್ರಿಕೆಟಿಗೆ ಇರ್ಫಾನ್ ಪಠಾಣ್ ಹೇಳಿದ್ದಾರೆ

ಬಟ್ಲರ್ ಈ ಆವೃತ್ತಿಯಲ್ಲಿ 32 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ, ಅವರ ಪ್ರದರ್ಶನದ ಪ್ರಕಾರ, ವಿರಾಟ್ ಕೊಹ್ಲಿ ಅವರ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಮುರಿಯುವ ಹಾದಿಯಲ್ಲಿದ್ದಾರೆ. ಆರ್‌ಸಿಬಿ ಮಾಜಿ ನಾಯಕ ಐಪಿಎಲ್ 2016 ರಲ್ಲಿ ನಾಲ್ಕು ಶತಕಗಳೊಂದಿಗೆ 973 ರನ್ ಗಳಿಸಿದ್ದರು. ಬಟ್ಲರ್ ಈ ಆವೃತ್ತಿಯಲ್ಲಿ ನಾಲ್ಕು-ಅಂಕಿಯ ತಡೆಗೋಡೆಯನ್ನು ಮುರಿಯಬಹುದೇ ಎಂದು ನೋಡಬೇಕಿದೆ.

ಹರ್ಭಜನ್ ಸಿಂಗ್ :
ಬಿಗ್ ಬಾಸ್ ಬಟ್ಲರ್ ಮತ್ತೊಂದು ಆಕರ್ಷಿತ ಪ್ರದರ್ಶನ ಮೂಲಕ ಶತಕ ಗಳಿಸಿದ್ದಾರೆ.

Story first published: Saturday, April 23, 2022, 18:14 [IST]
Other articles published on Apr 23, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+