IPL 2022, MI vs KKR Highlights : ದಾಖಲೆಯ ಅರ್ಧ ಶತಕ ಸಿಡಿಸಿದ ಪ್ಯಾಟ್ ಕಮ್ಮಿನ್ಸ್: ಕೆಕೆಆರ್‌ಗೆ ಅಮೋಘ ವಿಜಯ

ಐಪಿಎಲ್ 15ನೇ ಆವೃತ್ತಿಯ ಮತ್ತೊಂದು ಪಂದ್ಯ ರೋಚಕ ಅಂತ್ಯ ಕಂಡಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಅನುಭವಿ ಆಟಗಾರ ಪ್ಯಾಟ್ ಕಮ್ಮಿನ್ಸ್ ಸ್ಪೋಟಕ ಬ್ಯಾಟಿಂಗ್ ನಡೆಸಿದ್ದು ಕೇವಲ 14 ಎಸೆತಗಳಲ್ಲಿ ಅರ್ಧ ಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಇನ್ನೂ ನಾಲ್ಕು ಓವರ್‌ಗಳು ಬಾಕಿಯಿರುವಂತೆಯೇ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 5 ವಿಕೆಟ್‌ಗಳ ಗೆಲುವು ಸಾಧಿಸಿದೆ.
ಮುಂಬೈ ಇಂಡಿಯನ್ಸ್ ತಂಡ ನಿಗದಿಗೊಳಿಸಿದ್ದ 162 ರನ್‌ಗಳ ಗುರಿ ಬೆನ್ನಟ್ಟಿದ ಕೆಕೆಆರ್ ತಂಡಕ್ಕೆ ನಿಧಾನಗತಿಯ ಆರಂಭ ಪಡೆಯಿತು. ಆರಂಭಿಕ ಆಟಗಾರ ಅಜಿಂಕ್ಯಾ ರಹಾನೆ, ನಾಯಕ ಶ್ರೇಯಸ್ ಅವರು ಅಗ್ಗಕ್ಕೆ ವಿಕೆಟ್ ಕಳೆದುಕೊಂಡು. ಸ್ಯಾಮ್ ಬಿಲ್ಲಿಂಗ್ಸ್ ನಿತೀಶ್ ರಾಣ ಅವರಿಂದಲೂ ಉಪಯುಕ್ತ ಕೊಡುಗೆ ಬರಲಿಲ್ಲ. ಆದರೆ ಮತ್ತೊಂದು ತುದಿಯಲ್ಲಿದ್ದ ವೆಂಕಟೇಶ್ ಐಯ್ಯರ್ ಹೋರಾಟದ ಪ್ರದರ್ಶನ ನೀಡುತ್ತಾ ತಂಡವನ್ನು ಗೆಲುವಿನತ್ತ ಮುನ್ನುಗ್ಗಿಸತೊಡಗಿದರು.
ಈ ಸಂದರ್ಭದಲ್ಲಿ ಅಬ್ಬರದ ಬ್ಯಾಟಿಂಗ್ ಆರಂಭಿಸಿದರೂ ಆಂಡ್ರೆ ರಸೆಲ್ ಕೂಡ ವಿಕೆಟ್ ಕಳೆದುಕೊಂಡಾಗ ಕೆಕೆಆರ್‌ಗೆ ಗೆಲುವು ಸುಲಭವಿಲ್ಲ ಎಂದು ಎಲ್ಲರೂ ಅಂದಾಜಿಸಿದ್ದರು. ಆದರೆ ನಂತರ ಕಣಕ್ಕಿಳಿದ ಪ್ಯಾಟ್ ಕಮ್ಮಿನ್ಸ್ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿದರು. ಬೌಂಡರಿ ಸಿಕ್ಸರ್‌ಗಳ: ಸುರಿಮಳೆಗೈದ ಪ್ಯಾಟ್ ಕಮ್ಮಿನ್ಸ್ ಕೇವಲ 15 ಎಸೆತಗಳನ್ನು ಎದುರಿಸಿ ಆರು ಭರ್ಜರಿ ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳ ನೆರವಿನಿಂದ ಭರ್ಜರಿ 56 ರನ್ ಸಿಡಿಸಿದರು. 373.33ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು ಪ್ಯಾಟ್ ಕಮ್ಮಿನ್ಸ್ ಪರಾಕ್ರಮಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ಸ್ಯಾಮ್ ಬಿಲ್ಲಿಂಗ್ಸ್ ಓವರ್‌ನಲ್ಲಿ ಭರ್ಜರಿ 35 ರನ್‌ಗಳನ್ನು ಗಳಿಸಿದ್ದರು ಪ್ಯಾಟ್ ಕಮ್ಮಿನ್ಸ್. ಈ ಮೂಲಕ ಇನ್ನೂ ನಾಲ್ಕು ಓವರ್‌ಗಳು ಬಾಕಿಯಿರುವಂತೆಯೇ ಗೆಲುವನ್ನು ತಂದಿತ್ತರು.
ಈ ಭಾರೀ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಮತ್ತೊಮ್ಮೆ ಮುಖಭಂಗವನ್ನು ಅನುಭವಿಸಿದೆ. ಈ ಬಾರಿಯ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಕೂಡ ಮುಂಬೈ ಸೋಲು ಅನುಭವಿಸಿದ್ದು ಇನ್ನೂ ಗೆಲುವಿನ ಖಾತೆ ತೆರೆಯಲು ವಿಫಲವಾಗಿದೆ. ಈ ಮೂಲಕ ಭಾರೀ ಹಿನ್ನಡೆ ಅನುಭವಿಸಿದೆ.

ಇನ್ನು ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್‌ಗೆ 162 ರನ್‌ಗಳ ಸವಾಲಿನ ಗುರಿ ನಿಗದಿಪಡಿಸುವಲ್ಲಿ ಯಶಸ್ವಿಯಾಗಿತ್ತು. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬಿಗು ಬೌಲಿಂಗ್ ದಾಳಿಗೆ ಮುಂಬೈ ತಂಡದ ಅಗ್ರ ಕ್ರಮಾಂಕದ ಆಟಗಾರರು ಪರದಾಡಿದರು. 18 ಓವರ್‌ಗಳವರೆಗೂ ಕೆಕೆಆರ್ ಬೌಲರ್‌ಗಳು ಅದ್ಭುತ ನಿಯಂತ್ರಣ ಸಾಧಿಸಿದ್ದರು. ಆದರೆ ಅಂತಿಮ ಹಂತದಲ್ಲಿ ಕಿರಾನ್ ಪೊಲಾರ್ಡ್ ಅವರಿಂದ ಸ್ಪೋಟಕ ಪ್ರದರ್ಶನ ಬಂದ ಕಾರಣ ತಂಡದ ಮೊತ್ತ ಮೊತ್ತ 160ರ ಹಡಿ ದಾಟಿತು. ಈ ಬಾರಿಯ ಆವೃತ್ತಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಭರ್ಜರಿ ಅರ್ಧ ಶತಕ ಬಾರಿಸಿದ್ದಾರೆ.
ಪ್ರಮುಖ ವಿಕೆಟ್ ಕಳೆದುಕೊಂಡು ಕುಸಿತ ಅನುಭವಿಸಿದ್ದ ಸಂದರ್ಭದಲ್ಲಿ ಕ್ರೀಸ್‌ಗೆ ಇಳಿದ ಸೂರ್ಯಕುಮಾರ್ ತಂಡದ ಮೊತ್ತವನ್ನು ಅದ್ಭುತ ರೀತಿಯಲ್ಲಿ ಮೇಲೇರಿಸಿದರು. 36 ಎಸೆತಗಳನ್ನು ಎದುರಿಸಿದ ಸೂರ್ಯ 52 ರನ್ ಬಾರಿಸಿದ್ದಾರೆ. ಅವರಿಗೆ ತಿಲಕ್ ವರ್ಮ ಅವರು ಕೂಡ ಉತ್ತಮ ಸಾಥ್ ನೀಡಿದ್ದಾರೆ. ಆದರೆ ಈ ಬ್ಯಾಟಿಂಗ್ ಪ್ರದರ್ಶನ ಪ್ಯಾಟ್ ಕಮ್ಮಿನ್ಸ್ ಆರ್ಭಟದ ಮುಂದೆ ವ್ಯರ್ಥವಾಗಿದೆ.
ಕೊಲ್ಕತ್ತಾ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಆಂಡ್ರೆ ರಸೆಲ್, ಸುನಿಲ್ ನರೈನ್, ಪ್ಯಾಟ್ ಕಮಿನ್ಸ್, ಉಮೇಶ್ ಯಾದವ್, ರಸಿಖ್ ಸಲಾಂ, ವರುಣ್ ಚಕ್ರವರ್ತಿ
ಬೆಂಚ್: ಮೊಹಮ್ಮದ್ ನಬಿ, ಜಾಕ್ಸನ್, ಚಾಮಿಕಾ ಕರುಣಾರತ್ನೆ, ಬಾಬಾ ಇಂದ್ರಜಿತ್, ರಿಂಕು ಸಿಂಗ್, ಅನುಕುಲ್ ರಾಯ್, ಪ್ರಥಮ್ ಸಿಂಗ್, ಅಭಿಜೀತ್ ತೋಮರ್, ಅಮನ್ ಹಕೀಮ್ ಖಾನ್, ಅಶೋಕ್ ಶರ್ಮಾ, ರಮೇಶ್ ಕುಮಾರ್, ಟಿಮ್ ಸೌಥಿ, ಶಿವಂ ಮಾವಿ
ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರಾನ್ ಪೊಲಾರ್ಡ್, ಡೇನಿಯಲ್ ಸಾಮ್ಸ್, ಡೆವಾಲ್ಡ್ ಬ್ರೆವಿಸ್, ಮುರುಗನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಟೈಮಲ್ ಮಿಲ್ಸ್, ಬೇಸಿಲ್ ಥಂಪಿ
ಬೆಂಚ್: ಜಯದೇವ್ ಉನದ್ಕತ್, ಫ್ಯಾಬಿಯನ್ ಅಲೆನ್, ಸಂಜಯ್ ಯಾದವ್, ರಿಲೆ ಮೆರೆಡಿತ್, ರಮಣ್‌ದೀಪ್ ಸಿಂಗ್, ಮಯಾಂಕ್ ಮಾರ್ಕಂಡೆ, ಆರ್ಯನ್ ಜುಯಲ್, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ರಾಹುಲ್ ಬುದ್ಧಿ, ಅರ್ಷದ್ ಖಾನ್, ಅನ್ಮೋಲ್‌ಪ್ರೀತ್ ಸಿಂಗ್, ಟಿಮ್ ಡೇವಿಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications