ಐಪಿಎಲ್ 2022: ರಿಯಾನ್ ಪರಾಗ್ ಫೀಲ್ಡಿಂಗ್‌ಅನ್ನು ನಾನು ಆನಂದಿಸುತ್ತೇನೆ: ಲಸಿತ್ ಮಲಿಂಗಾ

ಈ ಬಾರಿಯ ಐಪಿಎಲ್‌ನುದ್ದಕ್ಕೂ ನಾನು ಯುವ ಆಟಗಾರ ರಿಯಾನ್ ಪರಾಗ್ ಅವರ ಫೀಲ್ಡಿಂಗ್‌ಅನ್ನು ಬಹಳ ಆನಂದಿಸಿದ್ದೇನೆ ಎಂದು ಲಸಿತ್ ಮಲಿಂಗಾ ಹೇಳಿಕೆ ನೀಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ಆಗಿರುವ ಲಸಿತ್ ಮಲಿಂಗಾ ಈ ಬಾರಿಯ ಐಪಿಎಲ್‌ನಲ್ಲಿ ತಂಡ ಟ್ರೋಫಿ ಗೆಲ್ಲುವ ವಿಶ್ವಾಸವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮಲಿಂಗಾ ಎರಡನೇ ಸ್ಥಾನದಲ್ಲಿದ್ದಾರೆ.
ಯುವ ಆಟಗಾರ ರಿಯಾನ್ ಪರಾಗ್ ಈ ಬಾರಿಯ ಐಪಿಎಲ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಗಮನಸೆಳೆಯುವಲ್ಲಿ ವಿಫಲವಾಗಿದ್ದಾರೆ. ಆದರೆ ಫೀಲ್ಡಿಂಗ್‌ನಲ್ಲಿ ಪರಾಗ್ ಪ್ರದರ್ಶನ ಅದ್ಭುತವಾಗಿದ್ದು ಈ ಆವೃತ್ತಿಯಲ್ಲಿ ಒಟ್ಟು 16 ಕ್ಯಾಚ್‌ಗಳನ್ನು ಪಡೆದು ದಾಖಲೆ ಬರೆದಿದ್ದಾರೆ.

ಅತಿ ಹೆಚ್ಚು ಕ್ಯಾಚ್ ಪಡೆದ ದಾಖಲೆ
ಕಳೆದ ವಾರ ರಿಯಾನ್ ಪರಾಗ್ ಐಪಿಎಲ್ ಟೂರ್ನಿಯೊಂದರಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಫೀಲ್ಡರ್ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ವಿಕೆಟ್ ಕೀಪರ್ ಹೊರತುಪಡಿಸಿ ಫೀಲ್ಡರ್ ಓರ್ವ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ದಾಖಲೆ ಈ ಮೊದಲು ರವೀಂದ್ರ ಜಡೇಜಾ ಹೆಸರಿನಲ್ಲಿತ್ತು. ಈಗ ಅದು ಪರಾಗ್ ಹೆಸರಿನಲ್ಲಿದೆ.
"ಕಳೆದ 15 ಪಂದ್ಯಗಳಲ್ಲಿ ರಿಯಾನ್ ಪರಾಗ್ ಅವರ ಫೀಲ್ಡಿಂಗ್‌ಅನ್ನು ನಾನು ಸಂಪೂರ್ಣವಾಗಿ ಆನಂದಿಸಿದ್ದೇನೆ. ಆತನಲ್ಲಿ ಸಾಕಷ್ಟು ಸಾಮರ್ಥ್ಯವಿದ್ದು ಅದ್ಭುತ ಕ್ರೀಡಾಪಟುವಾಗಿದ್ದಾರೆ. ಆತ ಯಾವಾಗಲೂ ಆಟದಲ್ಲಿ ತಲ್ಲೀನವಾಗಿರುತ್ತಾರೆ" ಎಂದು ರಿಯಾನ್ ಪರಾಗ್ ಬಗ್ಗೆ ಲಸಿತ್ ಮಲಿಂಗ ವಿಶೇಷ ಮಾತುಗಳನ್ನಾ

ರಿಯಾನ್ ಪರಾಗ್ ಬಗ್ಗೆ ಮಲಿಂಗಾ ಮೆಚ್ಚುಗೆ
ಆತನಿಗೆ ಆಡಲು ಹೆಚ್ಚಿನ ಅವಕಾಶಗಳು ದೊರೆತಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಫೀಲ್ಡಿಂಗ್‌ನ ಸಮಂದರ್ಭದಲ್ಲಿ ಆತ ಆಟಕ್ಕೆ ನೀಡುವ ಶಕ್ತಿ ನಿಜಕ್ಕೂ ಅದ್ಭುತವಾಗಿದೆ. ಅದನ್ನು ನೀವು ಉಳಿದ ಯಾವ ತಂಡದಲ್ಲಿಯೂ ನೋಡಲು ಸಾಧ್ಯವಿಲ್ಲ. ಆತ ತಂಡಕ್ಕೆ ನೀಡುವ ಶಕ್ತಿ ಹಾಗೂ ವ್ಯಕ್ತಿತ್ವಕ್ಕೆ ನಾಣು ಸಂತೋಷ ಪಡುತ್ತೇನೆ" ಎಂದಿದ್ದಾರೆ ರಾಜಸ್ಥಾನ್ ರಾಯಲ್ಸ ತಂಡದ ಬೌಲಿಂಗ್ ಕೋಚ್ ಲಸಿತ್ ಮಲಿಂಗಾ

ಆರ್‌ಸಿಬಿ ವಿರುದ್ಧ ಗರಿಷ್ಠ ಸ್ಕೋರ್
ರಿಯಾನ್ ಪರಾಗ್ ಆಡಿರುವ 16 ಪಂದ್ಯಗಳಲ್ಲಿ 16.80 ಸರಾಸರಿಯಲ್ಲಿ 168 ರನ್‌ಗಳನ್ನು ಮಾತ್ರವೇ ಗಳಿಸಿದ್ದಾರೆ. 143.58ರ ಸ್ಟ್ರೈಕ್‌ರೇಟ್‌ನಲ್ಲಿ ಪರಾಗ್ ಬ್ಯಾಟ್ ಬೀಸಿದ್ದು 31 ಎಸೆತಗಳಲ್ಲಿ 56 ರನ್‌ಗಳಿಸಿರುವುದು ಪರಾಗ್ ಅವರ ಈ ಆವೃತ್ತಿಯ ಹೈಯೆಸ್ಟ್ ಸ್ಕೋರ್ ಎನಿಸಿದೆ. ಈ ಸ್ಕೋರ್ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ ಬಂದಿತ್ತು. 2019ರ ಆವೃತ್ತಿಯಿಂದ ರೊಯಾನ್ ಪರಾಗ್ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದಾರೆ.

ಫೈನಲ್ ಪಂದ್ಯಕ್ಕೆ ಕ್ಷಣಗಣನೆ
ಐಪಿಎಲ್ 15ನೇ ಆವೃತ್ತಿಯ ಫೈನಲ್ ಮುಖಾಮುಖಿ ಇಂದು ನಡೆಯಲಿದ್ದು ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಎರಡು ತಂಡಗಳು ಕೂಡ ಬಲಿಷ್ಠ ಆಟಗಾರರ ಪಡೆಯನ್ನು ಹೊಂದಿದ್ದು ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವ ಉತ್ಸಾಹದಲ್ಲಿದೆ. ಗುಜರಾತ್ ಟೈಟನ್ಸ್ ತಂಡ ಚೊಚ್ಚಲ ಆವೃತ್ತಿಯಲ್ಲಿ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದ್ದರೆ ರಾಜಸ್ಥಾನ್ ರಾಯಲ್ಸ್ ಚೊಚ್ಚಲ ಆವೃತ್ತಿಯಲ್ಲಿ ಟ್ರೋಫಿ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಫೈನಲ್ ಹಂತಕ್ಕೇರಿದ್ದು ಟ್ರೋಫಿ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications