ಐಪಿಎಲ್ 2022: ಬೌಲಿಂಗ್ ಮಾಡುವುದರಿಂದ ಈ 13 ಆಟಗಾರರನ್ನು ಬ್ಯಾನ್ ಮಾಡಿದ ಬಿಸಿಸಿಐ!

ಮುಂಬರುವ ಮಾರ್ಚ್ ತಿಂಗಳಿನಲ್ಲಿ ಶುರುವಾಗಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತಾದ ಚಟುವಟಿಕೆಗಳು ಈಗಾಗಲೇ ಗರಿಗೆದರಿವೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ಸೇರ್ಪಡೆಯಾಗುತ್ತಿರುವುದರಿಂದ ಟ್ರೋಫಿಗಾಗಿ ಒಟ್ಟು ಹತ್ತು ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಹೀಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ವಿಶೇಷತೆಗಳಿಂದ ಕೂಡಿದ್ದು, ಇದೇ ತಿಂಗಳ 12 ಮತ್ತು 13ರಂದು ಬೆಂಗಳೂರಿನಲ್ಲಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಕೂಡ ನಡೆಯಲಿದೆ.
ಹೀಗೆ ಮೆಗಾ ಹರಾಜು ಪ್ರಕ್ರಿಯೆ ಹತ್ತಿರ ಬರುತ್ತಿದ್ದಂತೆ ಕುತೂಹಲ ಮತ್ತು ಚರ್ಚೆಗಳು ಹೆಚ್ಚಾಗುತ್ತಿದ್ದು ಯಾವ ಫ್ರಾಂಚೈಸಿಗಳು ಯಾವ ಆಟಗಾರರನ್ನು ಖರೀದಿಸಲಿವೆ ಹಾಗೂ ಯಾವ ಆಟಗಾರ ಹೆಚ್ಚು ಬೆಲೆಗೆ ಹರಾಜಾಗಲ್ಲಿದ್ದಾನೆ ಎಂಬುದರ ಕುರಿತು ಲೆಕ್ಕಾಚಾರಗಳು ಜೋರಾಗಿಯೇ ನಡೆಯುತ್ತಿವೆ. ಇನ್ನು ಮೆಗಾ ಹರಾಜಿನ ಕುರಿತಾಗಿ ಬಿಸಿಸಿಐ ವಿಶೇಷ ಮಾಹಿತಿಯೊಂದನ್ನು ಬಿಡುಗಡೆ ಮಾಡಿದ್ದು, ಟೂರ್ನಿಯಲ್ಲಿ ಬೌಲಿಂಗ್ ಮಾಡುವುದರಿಂದ 13 ಆಟಗಾರರು ಬ್ಯಾನ್ ಆಗಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ.
ಹೌದು, ಅಕ್ರಮ ಬೌಲಿಂಗ್ ಶೈಲಿಯನ್ನು ಹೊಂದಿರುವ ಕಾರಣ 13 ಆಟಗಾರರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬೌಲಿಂಗ್ ಮಾಡಲು ಅನರ್ಹರು ಎಂದು ಮಾಹಿತಿ ಕೊಟ್ಟಿರುವ ಬಿಸಿಸಿಐ ಆ 13 ಆಟಗಾರರ ಹೆಸರನ್ನೂ ಸಹ ಬಹಿರಂಗಗೊಳಿಸಿದೆ. ಈ ಕುರಿತಾದ ಮತ್ತಷ್ಟು ಮಾಹಿತಿ ಮುಂದೆ ಇದೆ ಓದಿ..

3 ಆಟಗಾರರು ಬೌಲಿಂಗ್‌ನಿಂದ ಸಂಪೂರ್ಣ ಬ್ಯಾನ್
13 ಆಟಗಾರರು ಬೌಲಿಂಗ್ ಮಾಡಲು ಅರ್ಹರಲ್ಲ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿರುವ ಬಿಸಿಸಿಐ ಅದರಲ್ಲಿ ಈ ಮೂವರು ಕ್ರಿಕೆಟಿಗರು ಬೌಲಿಂಗ್ ಮಾಡುವುದರಿಂದ ಸಂಪೂರ್ಣವಾಗಿ ಬ್ಯಾನ್ ಆಗಿದ್ದಾರೆ ಎಂಬುದನ್ನು ತಿಳಿಸಿದೆ. ಈ ಮೂವರು ಆಟಗಾರರು ಯಾರೆಂದರೆ ಮನೀಷ್ ಪಾಂಡೆ, ಕರ್ನಾಟಕದ ಕೆ ಎಲ್ ಶ್ರಿಜಿತ್ ಹಾಗೂ ಜಾರ್ಖಂಡ್ ತಂಡದ ಇಶಾಂಕ್ ಜಗ್ಗಿ. ಹೀಗೆ ಬೌಲಿಂಗ್ ಮಾಡುವುದರಿಂದ ಬ್ಯಾನ್ ಆಗಿರುವ ಈ ಮೂವರು ಆಟಗಾರರ ಪೈಕಿ ಮನೀಷ್ ಪಾಂಡೆ ಹಾಗೂ ಇಶಾಂಕ್ ಜಗ್ಗಿ ಬ್ಯಾಟ್ಸ್‌ಮನ್ ಎಂದು ನೋಂದಾಯಿಸಿಕೊಂಡಿದ್ದರೆ, ಕೆ ಎಲ್ ಶ್ರೀಜಿತ್ ವಿಕೆಟ್ ಕೀಪರ್ ಎಂದು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಹೀಗಾಗಿ ಬೌಲಿಂಗ್ ಮಾಡುವುದರಿಂದ ಬ್ಯಾನ್ ಆಗಿರುವ ಈ ಮೂವರು ಆಟಗಾರರಿಗೆ ಮೆಗಾ ಹರಾಜಿನಲ್ಲಿ ಹೆಚ್ಚೇನೂ ಹಿನ್ನಡೆಯಾಗುವುದಿಲ್ಲ.

ಉಳಿದ ಹತ್ತು ಆಟಗಾರರಿವರು
ಐಪಿಎಲ್ ಟೂರ್ನಿಯಲ್ಲಿ ಬೌಲಿಂಗ್ ಮಾಡುವುದರಿಂದ ಬ್ಯಾನ್ ಆಗಿರುವ 13 ಆಟಗಾರರ ಪೈಕಿ ಉಳಿದ ಹತ್ತು ಆಟಗಾರರು ಯಾರೆಂದರೆ ವಿಕ್ಕಿ ಒಸ್ತ್ವಾಲ್ (ಮಹಾರಾಷ್ಟ್ರ), ದರ್ಶನ್ ನಲ್ಕಂಡೆ (ವಿದರ್ಭ), ಧರ್ಮೇಂದ್ರ ಸಿಂಗ್ ಜಡೇಜಾ (ಸೌರಾಷ್ಟ್ರ), ಅಪೂರ್ವ್ ವಾಂಖಡೆ (ವಿದರ್ಭ), ಸುದೀಪ್ ಚಟರ್ಜಿ (ಬಂಗಾಳ), ಆರ್ ಸಮರ್ಥ್ (ಕರ್ನಾಟಕ), ಅರ್ಪಿತ್ ಗುಲೇರಿಯಾ (ಹಿಮಾಚಲ ಪ್ರದೇಶ), ಜೇ ಬಿಸ್ತಾ (ಉತ್ತರಖಂಡ) ಮತ್ತು ಅಜೀಂ ಕಾಜಿ (ಮಹಾರಾಷ್ಟ್ರ). ಈ ಹತ್ತು ಆಟಗಾರರನ್ನು ಬಿಸಿಸಿಐ ವೀಕ್ಷಣಾ ಪಟ್ಟಿ ಎಂದು ಪರಿಗಣಿಸಿದ್ದು ಮತ್ತೊಮ್ಮೆ ಸಂಶಯಾಸ್ಪದ ಬೌಲಿಂಗ್ ಮಾಡಿದರೆ ಸಂಪೂರ್ಣವಾಗಿ ಬೌಲಿಂಗ್ ಮಾಡುವುದರಿಂದ ಬ್ಯಾನ್ ಮಾಡಲಿದೆ.

ಈ 10 ಆಟಗಾರರು ಬಿಕರಿಯಾಗುವುದು ಅನುಮಾನ
ಹೀಗೆ ಬಿಸಿಸಿಐನಿಂದ ಬೌಲಿಂಗ್ ಮಾಡದಂತೆ ಸಂಪೂರ್ಣವಾಗಿ ಬ್ಯಾನ್ ಆಗುವ ಸಂಭವವಿರುವ ಈ ಹತ್ತು ಆಟಗಾರರನ್ನು ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು ಖರೀದಿಸುವುದು ಅನುಮಾನ ಮೂಡಿಸಿದೆ. ಈಗಾಗಲೇ ಅಕ್ರಮ ಬೌಲಿಂಗ್ ಶೈಲಿಯನ್ನು ಹೊಂದಿರುವ ಆಟಗಾರರು ಎಂಬ ಬೇಡವಾದ ಹಣೆಪಟ್ಟಿಯನ್ನು ಪಡೆದುಕೊಂಡ ಈ ಆಟಗಾರರ ಮೇಲೆ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು ಹೂಡಿಕೆ ಮಾಡಲು ಹಿಂಜರಿಯುವುದಂತೂ ಖಚಿತ. ಆದರೆ ಆಲ್ ರೌಂಡರ್ ವಿಭಾಗದಲ್ಲಿ ಬರುವ ಜೇ ಬಿಸ್ತಾ ಮತ್ತು ಅಜೀಮ್ ಖಾಜಿ ಬೌಲಿಂಗ್ ಮಾಡದೇ ಬ್ಯಾಟಿಂಗ್ ವಿಭಾಗದಲ್ಲಿ ಪಾಲ್ಗೊಳ್ಳುವುದರಿಂದ ಹಾಗೂ ಅಪೂರ್ವ್ ವಾಂಖಡೆ, ಸುದೀಪ್ ಚಟರ್ಜಿ ಮತ್ತು ರವಿಕುಮಾರ್ ಸಮರ್ಥ್ ಮೂಲತಃ ಬ್ಯಾಟ್ಸ್‌ಮನ್‌ಗಳಾಗಿರುವುದರಿಂದ ಬೌಲಿಂಗ್ ಬ್ಯಾನ್ ಕುರಿತು ಹೆಚ್ಚೇನೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎನ್ನಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications