IPL 2022, LSG vs DC: ರೋಚಕ ಸೆಣೆಸಾಟದಲ್ಲಿ ಲಕ್ನೋಗೆ ಗೆಲುವು: ಡಿಸಿಗೆ 2ನೇ ಸೋಲು

ಐಪಿಎಲ್ 2022ರ ಆವೃತ್ತಿಯ 15ನೇ ಪಂದ್ಯದಲ್ಲಿ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ರೋಚಕ ಗೆಲುವು ಸಾಧಿಸಿದೆ. ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಈ ಪಂದ್ಯ ಅಂತಿಮ ಓವರ್‌ವರೆಗೂ ಸಾಗಿತ್ತು. ಆದರೆ ಅಂತಿಮವಾಗಿ ಡಿಸಿ ವಿರುದ್ಧ ಎಲ್‌ಎಸ್‌ಜಿ ತಂಡ ಗೆಲುವಿನ ನಗೆ ಬೀರಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಪಂದ್ಯದಲ್ಲಿ ಅಂತಿಮ ಹಂತದವರೆಗೂ ಮೇಲುಗೈ ಸಾಧಿಸಿತ್ತು. ಅದರಲ್ಲೂ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಈ ಪಂದ್ಯದಲ್ಲಿ 52 ಎಸೆತಗಳನ್ನು ಎದುರಿಸಿ 80 ರನ್‌ಗಳಿಸಿ ಲಕ್ನೋ ಹಾದಿಯನ್ನು ಸುಲಭಗೊಳಿಸಿದ್ದರು. ಆದರೆ 16ನೇ ಓವರ್‌ನ ಅಂತಿಮ ಎಸೆತದಲ್ಲಿ ಡಿಕಾಕ್ ವಿಕೆಟ್ ಕಳೆದುಕೊಳ್ಳುವ ಮೂಲಕ ಲಕ್ನೋ ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಕೃನಾಲ್ ಪಾಂಡ್ತ ಹಾಗೂ ದೀಪಕ್ ಹೂಡಾ ವಿರುದ್ಧ ಡಿಸಿ ಬೌಲರ್‌ಗಳು ಮೇಲುಗೈ ಸಾಧಿಸಿರು. ಹೀಗಾಗಿ ಅಂತಿಮ ಓವರ್‌ವರೆಗೂ ಪಂದ್ಯ ಸಾಗಿತ್ತು.

ಅಂತಿಮ ಓವರ್‌ನಲ್ಲಿ ಲಕ್ನೋ ತಂಡಕ್ಕೆ ಗೆಲ್ಲಲು 5 ರನ್‌ಗಳ ಅಗತ್ಯವಿತ್ತು. ಠಾಕೂರ್ ಎಸೆದ ಈ ಓವರ್‌ನ ಮೊದಲ ಎಸೆತದಲ್ಲಿಯೇ ದೀಪಕ್ ಹೂಡಾ ವಿಕೆಟ್ ಕಳೆದುಕೊಂಡರು. ಈಗ 5 ಎಸೆತಗಳಲ್ಲಿ 5 ರನ್‌ಗಳಿಸುವ ಸವಾಲು ಲಕ್ನೋ ಮುಂದಿತ್ತು. ಆದರೆ ನಂತರ ಕಣಕ್ಕಿಳಿದ ಯುವ ಸೆನ್ಸೇಶನಲ್ ಆಟಗಾರ ಆಯುಷ್ ಬದೋನಿ ಮೂರು ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ಇನ್ನೂ ಎರಡು ಎಸೆತ ಬಾಕಿಯಿರುವಂತೆಯೇ ಗೆಲುವನ್ನು ಸಾರಿದರು. ಈ ಮೂಲಕ ಮತ್ತೊಮ್ಮೆ ಯುವ ಆಟಗಾರ ಬದೋನಿ ಮಿಂಚಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್‌ಗೆ 150 ರನ್‌ಗಳ ಸಾಧಾರಣ ಗುರಿ ನಿಗದಿಪಡಿಸಿತು. ಈ ಪಂದ್ಯದಲ್ಲಿ ಲಕ್ನೋ ತಂಡದ ಬೌಲರ್‌ಗಳು ಡಿಸಿ ದಾಂಡಿಗರ ವಿರುದ್ಧ ಅದ್ಭುತ ರೀತಿಯಲ್ಲಿ ಮೇಲುಗೈ ಸಾಧಿಸಿದರು.
ಡೆಲ್ಲಿ ಪರವಾಗಿ ಪೃಥ್ವಿ ಶಾ ಅದ್ಭುತ ಆರಂಭ ಒದಗಿಸಿದರೂ ಇತರ ಬ್ಯಾಟರ್‌ಗಳಿಂದ ವೇಗವಾಗಿ ರನ್ ಗಳಿಸಲು ಸಾಧ್ಯವಾಗದ ಕಾರಣ ನಿರೀಕ್ಷಿತ ಗುರಿ ನೀಡಲು ಡೆಲ್ಲಿ ತಂಡಕ್ಕೆ ಅಸಾಧ್ಯವಾಯಿತು. ಅದರಲ್ಲೂ ನಾಯಕ ರಿಷಬ್ ಪಂತ್ ತಮ್ಮ ಎಂದಿನ ಶೈಲಿಯ ಬ್ಯಾಟಿಂಗ್‌ಗೆ ವಿರುದ್ಧವಾಗಿ ಇಂದು ಆಡಿದರು. 8.3 ಓವರ್ ಆಗುವಷ್ಟರಲ್ಲಿ ಡೇವಿಡ್ ವಾರ್ನರ್ ಅವರನ್ನು ಕಳೆದುಕೊಂಡ ನಂತರ ರಿಷಭ್ ಪಂತ್ ಕಣಕ್ಕಿಳಿದರು. ಬಳಿಕ ಪಂತ್ ಇನ್ನಿಂಗ್ಸ್‌ನ ಕೊನೆಯವರೆಗೂ ಬ್ಯಾಟಿಂಗ್ ನಡೆಸಿದರೂ ಪಂತ್ ಬ್ಯಾಟ್‌ನಿಂದ ಬಂದಿದ್ದು 39 ರನ್ ಮಾತ್ರ.
ಈ ಪಂದ್ಯದಲ್ಲಿ ಯುವ ಆರಂಭಿಕ ಆಟಗಾರ ಪೃಥ್ವಿ ಶಾ ಅದ್ಭುತ ಪ್ರದರ್ಶನ ನೀಡಿದ್ದು ಫಾರ್ಮ್‌ಗೆ ಮರಳಿದ್ದಾರೆ. ಡೇವಿಡ್ ವಾರ್ನರ್ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿದ ಶಾ 34 ಎಸೆತಗಳಲ್ಲಿ 61 ರನ್ ಸಿಡಿಸಿ ಮಿಂಚಿದರು. ಆದರೆ ಭರವಸೆ ಮೂಡಿಸಿದ್ದ ವಾರ್ನರ್ ನಿರಾಸೆ ಅನುಭವಿಸಿದರು.
ಕೊಲ್ಕತ್ತಾ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಆಂಡ್ರೆ ರಸೆಲ್, ಸುನಿಲ್ ನರೈನ್, ಪ್ಯಾಟ್ ಕಮಿನ್ಸ್, ಉಮೇಶ್ ಯಾದವ್, ರಸಿಖ್ ಸಲಾಂ, ವರುಣ್ ಚಕ್ರವರ್ತಿ
ಬೆಂಚ್: ಮೊಹಮ್ಮದ್ ನಬಿ, ಶೆಲ್ಡನ್ ಜಾಕ್ಸನ್, ಚಾಮಿಕಾ ಕರುಣಾರತ್ನೆ, ಬಾಬಾ ಇಂದ್ರಜಿತ್, ರಿಂಕು ಸಿಂಗ್, ಅನುಕುಲ್ ರಾಯ್,ಅಭಿಜೀತ್ ತೋಮರ್, ಪ್ರಥಮ್ ಸಿಂಗ್, ಅಮನ್ ಹಕೀಮ್ ಖಾನ್, ಅಶೋಕ್ ಶರ್ಮಾ, ರಮೇಶ್ ಕುಮಾರ್, ಟಿಮ್ ಸೌಥಿ, ಶಿವಂ ಮಾವಿ
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್, ರಿಷಬ್ ಪಂತ್ (ನಾಯಕ & ವಿಕೆಟ್ ಕೀಪರ್), ಸರ್ಫರಾಜ್ ಖಾನ್, ರೋವ್ಮನ್ ಪೊವೆಲ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಅನ್ರಿಚ್ ನಾರ್ಟ್ಜೆ

ಬೆಂಚ್: ಅಶ್ವಿನ್ ಹೆಬ್ಬಾರ್, ಶ್ರೀಕರ್ ಭರತ್, ಮಿಚೆಲ್ ಮಾರ್ಷ್, ಪ್ರವೀಣ್ ದುಬೆ, ಕಮಲೇಶ್ ನಾಗರಕೋಟಿ, ಚೇತನ್ ಸಕರಿಯಾ, ರಿಪಾಲ್ ಪಟೇಲ್, ಯಶ್ ಧುಲ್, ವಿಕ್ಕಿ ಓಸ್ತ್ವಾಲ್, ಟಿಮ್ ಸೀಫರ್ಟ್, ಮನ್ದೀಪ್ ಸಿಂಗ್, ಖಲೀಲ್ ಅಹ್ಮದ್, ಲುಂಗಿ ಎನ್ಗಿಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications