For Quick Alerts
ALLOW NOTIFICATIONS  
For Daily Alerts
 

LSG vs DC: ಡೆಲ್ಲಿ ಕ್ಯಾಪಟಿಲ್ಸ್ ತಂಡವನ್ನು 149 ರನ್‌ಗಳಿಗೆ ನಿಯಂತ್ರಿಸಿದ ಲಕ್ನೋ

IPL 2022, LSG vs DC: Prithvi shaw Half century, LSG need 150 runs to win against DC

ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಸೆಣೆಸಾಟ ಸಾಕಷ್ಟು ಜಿದ್ದಾಜಿದ್ದಿನಿಂದ ನಡೆಯುತ್ತಿದ್ದು ಬೌಲಿಂಗ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಮೇಲುಗೈ ಸಾಧಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಚ್ಚು ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗದಿದ್ದರೂ ರನ್ ನಿಯಂತ್ರಣದಲ್ಲಿ ಲಕ್ನೋ ಭಾರೀ ಯಶಸ್ಸು ಸಾಧಿಸಿದೆ. ಇದರ ಪರಿಣಾಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 149 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿದೆ.

ಈ ಪಂದ್ಯದಲ್ಲಿ ಯುವ ಆರಂಭಿಕ ಆಟಗಾರ ಪೃಥ್ವಿ ಶಾ ಅದ್ಭುತ ಪ್ರದರ್ಶನ ನಿಡಿದ್ದು ಫಾರ್ಮ್‌ಗೆ ಮರಳಿದ್ದಾರೆ. ಡೇವಿಡ್ ವಾರ್ನರ್ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿದ ಶಾ 34 ಎಸೆತಗಳಲ್ಲಿ 61 ರನ್ ಸಿಡಿಸಿ ಮಿಂಚಿದರು. ಪೃಥ್ವಿ ಶಾ ಅಬ್ಬರ ಹೇಗಿತ್ತೆಂದರೆ 67 ರನ್‌ಗಳ ಮೊದಲ ವಿಕೆಟ್‌ ಜೊತೆಯಾಟದಲ್ಲಿ 61 ರನ್‌ಗಳನ್ನು ಪೃಥ್ವಿ ಶಾ ಅವರೇ ಗಳಿಸಿದ್ದರು.

ಪೃಥ್ವಿ ಶಾ ವಿಕೆಟ್ ಕಳೆದುಕೊಂಡ ನಂತರ ಡೇವಿಡ್ ವಾರ್ನರ್ ಹಾಗೂ ರೋವ್ಮನ್ ಪೋವೆಲ್ ವಿಕೆಟ್ ಕೂಡ ಶೀಘ್ರವಾಗಿ ಕಳೆದುಕೊಂಡಿತು ಡಿಸಿ. ಈ ಇಬ್ಬರು ಆಟಗಾರರು ಕೂಡ ಒಂದಂಕಿಗೆ ವಿಕೆಟ್ ಕಳೆದುಕೊಂಡರು. ನಂತರ ನಾಯಕ ರಿಷಬ್ ಪಂತ್ ಹಾಗೂ ಸರ್ಫರಾಜ್ ಖಾನ್ ಅದ್ಭುತವಾಗಿ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ 75 ರನ್‌ಗಳ ಅಜೇಯ ಜೊತೆಯಾಟವನ್ನು ನೀಡಿದೆ. ಈ ಇಬ್ಬರು ಸ್ಪೋಟಕ ಆಟಗಾರರು ಕ್ರೀಸ್‌ನಲ್ಲಿದ್ದರೂ ದೊಡ್ಡ ಪ್ರಮಾಣದಲ್ಲಿ ರನ್‌ ಹರಿದು ಹೋಗದಂತೆ ತಡೆಯುವಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲರ್‌ಗಳು ಯಶಸ್ವಿಯಾಗಿದ್ದಾರೆ.

IPL 2022, LSG vs DC: Prithvi shaw Half century, LSG need 150 runs to win against DC

ಇನ್ನು ಈ ಪಂದ್ಯದ ಮೂಲಕ ಮೊದಲ ಬಾರಿಗೆ ಈ ಬಾರಿಯ ಐಪಿಎಲ್‌ನಲ್ಲಿ ಕಣಕ್ಕಿಳಿದಿರುವ ಕನ್ನಡಿಗ ಕೃಷ್ಣಪ್ಪ ಗೌತಮ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಒಂದು ವಿಕೆಟ್ ಪಡೆದಿರುವ ಗೌತಮ್ ಒಂದು ಮೇಡನ್ ಜೊತೆಗೆ ಕೇವಲ 23 ರನ್ ಬಿಟ್ಟುಕೊಟ್ಟರು.

ಕೊಲ್ಕತ್ತಾ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಆಂಡ್ರೆ ರಸೆಲ್, ಸುನಿಲ್ ನರೈನ್, ಪ್ಯಾಟ್ ಕಮಿನ್ಸ್, ಉಮೇಶ್ ಯಾದವ್, ರಸಿಖ್ ಸಲಾಂ, ವರುಣ್ ಚಕ್ರವರ್ತಿ
ಬೆಂಚ್: ಮೊಹಮ್ಮದ್ ನಬಿ, ಶೆಲ್ಡನ್ ಜಾಕ್ಸನ್, ಚಾಮಿಕಾ ಕರುಣಾರತ್ನೆ, ಬಾಬಾ ಇಂದ್ರಜಿತ್, ರಿಂಕು ಸಿಂಗ್, ಅನುಕುಲ್ ರಾಯ್, ಪ್ರಥಮ್ ಸಿಂಗ್, ಅಭಿಜೀತ್ ತೋಮರ್, ಅಮನ್ ಹಕೀಮ್ ಖಾನ್, ಅಶೋಕ್ ಶರ್ಮಾ, ರಮೇಶ್ ಕುಮಾರ್, ಟಿಮ್ ಸೌಥಿ, ಶಿವಂ ಮಾವಿ

ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್, ರಿಷಬ್ ಪಂತ್ (ನಾಯಕ & ವಿಕೆಟ್ ಕೀಪರ್), ಸರ್ಫರಾಜ್ ಖಾನ್, ರೋವ್ಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಅನ್ರಿಚ್ ನಾರ್ಟ್ಜೆ
ಬೆಂಚ್: ಅಶ್ವಿನ್ ಹೆಬ್ಬಾರ್, ಮಿಚೆಲ್ ಮಾರ್ಷ್, ಶ್ರೀಕರ್ ಭರತ್, ಪ್ರವೀಣ್ ದುಬೆ, ಕಮಲೇಶ್ ನಾಗರಕೋಟಿ, ಚೇತನ್ ಸಕರಿಯಾ, ರಿಪಾಲ್ ಪಟೇಲ್, ಯಶ್ ಧುಲ್, ವಿಕ್ಕಿ ಓಸ್ತ್ವಾಲ್, ಟಿಮ್ ಸೀಫರ್ಟ್, ಮನ್ದೀಪ್ ಸಿಂಗ್, ಖಲೀಲ್ ಅಹ್ಮದ್, ಲುಂಗಿ ಎನ್ಗಿಡಿ

Story first published: Thursday, April 7, 2022, 21:32 [IST]
Other articles published on Apr 7, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+