For Quick Alerts
ALLOW NOTIFICATIONS  
For Daily Alerts
 

LSG vs RR: ಪಂದ್ಯದಲ್ಲಿ ಈ ಮೈಲಿಗಲ್ಲುಗಳ ಮೇಲೆ ಬಟ್ಲರ್, ಅಶ್ವಿನ್, ಕೃನಾಲ್ ಪಾಂಡ್ಯ ಕಣ್ಣು

IPL 2022, LSG vs RR: Players stats and approaching milestones

ಇಂದು ( ಮೇ 15, ಭಾನುವಾರ ) ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 2 ಪಂದ್ಯಗಳು ನಡೆಯಲಿದ್ದು, ಪ್ರಥಮ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗುತ್ತಿದ್ದರೆ, ದ್ವಿತೀಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜಯಂಟ್ಸ್ ತಂಡಗಳ ನಡುವಿನ ಪಂದ್ಯ ಎರಡೂ ತಂಡಗಳಿಗೂ ಮುಖ್ಯವಾಗಿದ್ದು, ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜಯಂಟ್ಸ್ ಜಯಗಳಿಸಿದರೆ ಅಧಿಕೃತವಾಗಿ ಪ್ಲೇ ಆಫ್ ಸುತ್ತಿಗೆ ಲಗ್ಗೆ ಇಡಲಿದೆ. ಒಂದುವೇಳೆ ರಾಜಸ್ಥಾನ್ ರಾಯಲ್ಸ್ ಗೆದ್ದರೆ ಟಾಪ್ 2 ಸ್ಥಾನಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ತಂಡಗಳ ನಡುವೆ ಪೈಪೋಟಿ ಏರ್ಪಡಲಿದೆ.

ಇನ್ನು ಲಕ್ನೋ ಸೂಪರ್ ಜೈಂಟ್ಸ್ ಇಲ್ಲಿಯವರೆಗೂ 12 ಪಂದ್ಯಗಳನ್ನಾಡಿ 8 ಪಂದ್ಯಗಳಲ್ಲಿ ಗೆದ್ದು, 4 ಪಂದ್ಯಗಳಲ್ಲಿ ಸೋತು 16 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅತ್ತ ರಾಜಸ್ಥಾನ್ ರಾಯಲ್ಸ್ 12 ಪಂದ್ಯಗಳಲ್ಲಿ ಕಣಕ್ಕಿಳಿದು 7 ಪಂದ್ಯಗಳಲ್ಲಿ ಗೆದ್ದು, 5 ಪಂದ್ಯಗಳಲ್ಲಿ ಸೋತು 14 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಎರಡೂ ತಂಡಗಳಿಗೂ ಈ ಪಂದ್ಯ ಮುಖ್ಯವಾಗಿದ್ದು, ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿದೆ.

ಈ ಬಾರಿಯ ಆವೃತ್ತಿಯಲ್ಲಿ ಇತ್ತಂಡಗಳು ಇದು ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿದ್ದು, ಏಪ್ರಿಲ್ 10ರಂದು ಇತ್ತಂಡಗಳ ನಡುವೆ ನಡೆದಿದ್ದ ಪ್ರಥಮ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ 3 ರನ್‌ಗಳ ಗೆಲುವನ್ನು ಕಂಡಿತ್ತು. ಇನ್ನು ಈ ಹೈ ವೋಲ್ಟೇಜ್ ಪಂದ್ಯದಲ್ಲಿ ಎರಡೂ ತಂಡಗಳ ಆಟಗಾರರು ಅಬ್ಬರಿಸುವ ಸಾಧ್ಯತೆಗಳು ಹೆಚ್ಚಿದ್ದು, ಕೆಲ ಆಟಗಾರರು ವಿವಿಧ ಮೈಲಿಗಲ್ಲುಗಳನ್ನು ಮುಟ್ಟುವ ಸಾಧ್ಯತೆಗಳಿವೆ. ಆ ಮೈಲಿಗಲ್ಲುಗಳ ವಿವರ ಈ ಕೆಳಕಂಡಂತಿದೆ..

• ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಜೋಸ್ ಬಟ್ಲರ್ ಇಲ್ಲಿಯವರೆಗೂ 346 ಸಿಕ್ಸರ್ ಸಿಡಿಸಿದ್ದು ಈ ಪಂದ್ಯದಲ್ಲಿ 4 ಸಿಕ್ಸರ್ ಬಾರಿಸಿದರೆ 350 ಸಿಕ್ಸರ್ ಸಿಡಿಸಿದ ಆಟಗಾರ ಎಂಬ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

• ಕ್ವಿಂಟನ್ ಡಿಕಾಕ್ ಈ ಪಂದ್ಯದಲ್ಲಿ 50ಕ್ಕೂ ಹೆಚ್ಚು ರನ್ ಬಾರಿಸಿದರೆ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಬಾರಿಸಿದ ವಿಕೆಟ್ ಕೀಪರ್ ಎಂಬ ದಾಖಲೆಯಲ್ಲಿ ಪಾಕಿಸ್ತಾನದ ಕಮ್ರಾನ್ ಅಕ್ಮಲ್ ಅವರನ್ನು ಹಿಂದಿಕ್ಕಲಿದ್ದಾರೆ.

• ರವಿಚಂದ್ರನ್ ಅಶ್ವಿನ್ ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೂ 48 ಬೌಂಡರಿಗಳನ್ನು ಬಾರಿಸಿದ್ದು, ಈ ಪಂದ್ಯದಲ್ಲಿ 2 ಬೌಂಡರಿ ಬಾರಿಸಿದರೆ 50 ಐಪಿಎಲ್ ಬೌಂಡರಿ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

• ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಒಟ್ಟು 695 ಬೌಂಡರಿಗಳನ್ನು ಬಾರಿಸಿರುವ ಜೋಸ್ ಬಟ್ಲರ್ ಈ ಪಂದ್ಯದಲ್ಲಿ 5 ಬೌಂಡರಿ ಬಾರಿಸಿದರೆ 700 ಟಿ ಟ್ವೆಂಟಿ ಬೌಂಡರಿ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

• ಜೋಸ್ ಬಟ್ಲರ್ ಈ ಪಂದ್ಯದಲ್ಲಿ 40 ರನ್ ಬಾರಿಸಿದರೆ 8000 ಟಿ ಟ್ವೆಂಟಿ ರನ್ ಮೈಲುಗಲ್ಲನ್ನು ತಲುಪಲಿದ್ದಾರೆ.

• ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 49 ಸಿಕ್ಸರ್ ಬಾರಿಸಿರುವ ಕೃನಾಲ್ ಪಾಂಡ್ಯ ಈ ಪಂದ್ಯದಲ್ಲಿ 1 ಸಿಕ್ಸರ್ ಬಾರಿಸಿದರೆ 50 ಐಪಿಎಲ್ ಸಿಕ್ಸರ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

• ರಿಯಾನ್ ಪರಾಗ್ ಈ ಪಂದ್ಯದಲ್ಲಿ 26 ರನ್ ಕಲೆಹಾಕಿದರೆ 500 ಐಪಿಎಲ್ ರನ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

Story first published: Sunday, May 15, 2022, 17:17 [IST]
Other articles published on May 15, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+