For Quick Alerts
ALLOW NOTIFICATIONS  
For Daily Alerts
 

KKR vs LSG: ಪಂದ್ಯದ ಪಿಚ್ ವರದಿ ಮತ್ತು ಸಂಭಾವ್ಯ ಆಡುವ ಬಳಗದ ಮಾಹಿತಿ

IPL 2022: Lucknow Super Giants vs Kolkata Knight Riders pitch report and weather forecast details

ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 13 ಪಂದ್ಯಗಳನ್ನಾಡಿದ್ದು, 8 ಪಂದ್ಯಗಳಲ್ಲಿ ಗೆದ್ದು 5 ಪಂದ್ಯಗಳಲ್ಲಿ ಸೋಲುವುದರ ಮೂಲಕ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು ತನ್ನ ಕೊನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದದಲ್ಲಿ ಸೋಲುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿತ ಕಂಡಿರುವ ಲಕ್ನೋ ಸೂಫರ್ ಜೈಂಟ್ಸ್ ಲೀಗ್ ಹಂತದಲ್ಲಿನ ತನ್ನ ಅಂತಿಮ ಪಂದ್ಯದಲ್ಲಿ ನಾಳೆ ( ಮೇ 17 ) ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಉತ್ತಮ ಗೆಲುವು ಸಾಧಿಸಿ ಎರಡನೇ ಸ್ಥಾನಕ್ಕೆ ಜಿಗಿಯುವ ಯತ್ನದಲ್ಲಿದೆ. ಇನ್ನು ಲೀಗ್ ಹಂತದ ಮುಕ್ತಾಯದ ಸಮಯಕ್ಕೆ ಅಂಕಪಟ್ಟಿಯಲ್ಲಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದುಕೊಳ್ಳಲಿರುವ ತಂಡಗಳು ಫೈನಲ್ ಪ್ರವೇಶಿಸಲು ಎರಡು ಅವಕಾಶಗಳನ್ನು ಪಡೆದುಕೊಳ್ಳಲಿದ್ದು, ಲಕ್ನೋ ಸೂಪರ್ ಜೈಂಟ್ಸ್ ಈ ಅವಕಾಶ ಗಿಟ್ಟಿಸಿಕೊಳ್ಳುವತ್ತ ಕಣ್ಣಿಟ್ಟಿದೆ.

ಅತ್ತ ಕೋಲ್ಕತ್ತಾ ನೈಟ್ ರೈಡರ್ಸ್‌ಗೂ ಸಹ ಈ ಪಂದ್ಯ ಲೀಗ್ ಹಂತದಲ್ಲಿನ ತನ್ನ ಅಂತಿಮ ಪಂದ್ಯವಾಗಿರಲಿದ್ದು, ಅಂಕಪಟ್ಟಿಯಲ್ಲಿ 12 ಅಂಕಗಳನ್ನು ಮಾತ್ರ ಪಡೆದಿರುವ ಕಾರಣ ಈ ಪಂದ್ಯದಲ್ಲಿ ಗೆದ್ದರೂ ಸಹ ಕೆಕೆಆರ್ ಪ್ಲೇಆಫ್ ಪ್ರವೇಶಿಸುವ ಅವಕಾಶವನ್ನು ಹೊಂದುವುದಿಲ್ಲ. ಹೀಗಾಗಿ ಈ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕಿಂತ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಅತಿಮುಖ್ಯವಾಗಿದೆ. ಇನ್ನು ಈ ಪಂದ್ಯದ ಕುರಿತಾದ ಪಿಚ್ ವರದಿ, ಹವಾಮಾನ ವರದಿ ಮತ್ತು ಸಂಭಾವ್ಯ ಆಡುವ ಬಳಗದ ಮಾಹಿತಿ ಈ ಕೆಳಕಂಡಂತಿದೆ..

ಪಂದ್ಯದ ವರದಿ:
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಈ ಪಂದ್ಯ ನಾಳೆ ( ಮೇ 17 ) ಮುಂಬೈನ ಡಾ ಡಿವೈ ಪಾಟೀಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪಿಚ್ ವರದಿ:
ಮುಂಬೈನ ಡಾ ಡಿವೈ ಪಾಟೀಲ್ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಟೂರ್ನಿಯ ಮೊದಲಾರ್ಧಕ್ಕಿಂತ ಈ ಹೆಚ್ಚು ಬೌನ್ಸ್ ಆಗುತ್ತಿದ್ದು, ಪಿಚ್ ದಣಿದು, ಎಸೆತಗಳು ನಿಧಾನ ಕೂಡ ಆಗಿವೆ. ಹೀಗಾಗಿ ಬ್ಯಾಟ್ಸ್‌ಮನ್‌ಗಳು ಒಮ್ಮೆ ನೆಲಕಚ್ಚಿ ನಿಂತರೆ ಹೆಚ್ಚಿನ ರನ್ ಬಾರಿಸುವ ಅವಕಾಶಗಳು ಹೆಚ್ಚಿರಲಿವೆ.

ಹವಾಮಾನ ವರದಿ:
ಮುಂಬೈ ನಗರದ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಆರ್ದ್ರತೆ 76% ಇರಲಿದೆ. ಇನ್ನು ಮಳೆಯಾಗುವ ಯಾವುದೇ ಸಾಧ್ಯತೆಗಳು ಇರುವುದಿಲ್ಲ.

ಸಂಭಾವ್ಯ ಆಡುವ ಬಳಗಗಳು:
ಲಕ್ನೋ ಸೂಪರ್ ಜೈಂಟ್ಸ್: 1 ಕೆಎಲ್ ರಾಹುಲ್, 2 ಕ್ವಿಂಟನ್ ಡಿ ಕಾಕ್, 3 ದೀಪಕ್ ಹೂಡಾ, 4 ಕೃನಾಲ್ ಪಾಂಡ್ಯ, 5 ಆಯುಷ್ ಬಡೋನಿ, 6 ಮಾರ್ಕಸ್ ಸ್ಟೊಯಿನಿಸ್, 7 ಜೇಸನ್ ಹೋಲ್ಡರ್, 8 ದುಷ್ಮಂತ ಚಮೀರಾ, 9 ಅವೇಶ್ ಖಾನ್, 10 ಮೊಹ್ಸಿನ್ ಬಿಶ್ ಖಾನ್, 11 ರವೀಶ್ ಖಾನ್.

ಕೋಲ್ಕತ್ತಾ ನೈಟ್ ರೈಡರ್ಸ್: 1 ವೆಂಕಟೇಶ್ ಅಯ್ಯರ್, 2 ಆರೋನ್ ಫಿಂಚ್ / ಬಾಬಾ ಇಂದ್ರಜಿತ್, 3 ನಿತೀಶ್ ರಾಣಾ, 4 ಶ್ರೇಯಸ್ ಅಯ್ಯರ್, 5 ಆಂಡ್ರೆ ರಸೆಲ್, 6 ರಿಂಕು ಸಿಂಗ್, 7 ಸ್ಯಾಮ್ ಬಿಲ್ಲಿಂಗ್ಸ್ (ವಾಕ್), 8 ಉಮೇಶ್ ಯಾದವ್, 9 ಸುನಿಲ್ ನರೈನ್, 10 ಟಿಮ್ ಸೌಥಿ 11 ವರುಣ ಚಕ್ರವರ್ತಿ.

Story first published: Tuesday, May 17, 2022, 17:36 [IST]
Other articles published on May 17, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+