For Quick Alerts
ALLOW NOTIFICATIONS  
For Daily Alerts
 

LSG vs SRH Highlights : ರೋಚಕ ಅಂತ್ಯ ಕಂಡ ಲಕ್ನೋ vs ಹೈದರಾಬಾದ್ ಪಂದ್ಯ: ರಾಹುಲ್ ಪಡೆಗೆ ಮತ್ತೊಂದು ಗೆಲುವು

IPL 2022, Match 12, LSG vs SRH: Lucknow Super Giants beat Sunrisers Hyderabad by 12 runs
LSG ತಂಡ ಗೆಲ್ಲಲು ಪ್ರಮುಖ ಕಾರಣ ಇದೇ | Oneindia Kannada

ಐಪಿಎಲ್ 2022ರ ಮತ್ತೊಂದು ಪಂದ್ಯ ರೋಚಕವಾಗಿ ಅಂತ್ಯವಾಗಿದೆ. ಈ ಬಾರಿಯ ಟೂರ್ನಿಯ 12ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ 12 ರನ್‌ಗಳ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಸತತ ಎರಡನೇ ಗೆಲುವು ಪಡೆಯುವಲ್ಲಿ ರಾಹುಲ್ ಬಳಗ ಯಶಸ್ವಿಯಾಗಿದೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್ ತಂಡ ಸತತ ಮೂರನೇ ಸೋಲು ಅನುಭವಿಸಿದ್ದು ಅಂಕಪಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿಯೇ ಮುಂದುವರಿದಿದೆ.

159 ರನ್‌ಗಳ ಸವಾಲಿನ ಗುರಿಪಡೆದ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೂಡ ಉತ್ತಮ ಆರಂಭವನ್ನು ಪಡೆಯುವಲ್ಲಿ ವಿಫಲವಾಯಿತು. ಆದರೆ ರಾಹುಲ್ ತ್ರಿಪಾಠಿ ಹಾಗೂ ನಿಕೋಲಸ್ ಪೂರನ್ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲುವಿನ ಭರವಸೆಯನ್ನು ಮೂಡಿಸಿದರು. ಒಂದು ಹಂತದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಲಕ್ನೋ ತಂಡದ ವಿರುದ್ಧ ಗೆಲ್ಲುವ ವಿಶ್ವಾಸವನ್ನು ಕೂಡ ಮೂಡಿಸಿತ್ತು. ಆದರೆ 18ನೇ ಓವರ್ ಎಸೆದ ಆವೇಶ್ ಖಾನ್ ಸನ್‌ರೈಸರ್ಸ್ ತಂಡದ ಲೆಕ್ಕಾಚಾರವನ್ನು ಬುಡಮೇಲುಗೋಳಿಸಿದರು. ಹೈದರಾಬಾದ್ ಕಡೆಯಿಂದ ಗೆಲುವಿನ ಅವಕಾಶವನ್ನು ಕಿತ್ತುಕೊಂಡರು.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ಲಕ್ನೋ ತಂಡ ಆರಂಭೀಕ ಆಘಾತವನ್ನು ಅನುಭವಿಸಿತು. ಪ್ರಮುಖ ಮೂರು ವಿಕೆಟ್‌ಗಳನ್ನು ಲಕ್ನೋ 27 ರನ್‌ಗಳಿಸುವಷ್ಟರಲ್ಲಿ ಕಳೆದುಕೊಂಡಿತ್ತು. ಹೀಗಾಗಿ ಅಲ್ಪ ಮೊತ್ತಕ್ಕೆ ಕುಸಿಯುವ ಬೀತಿಯನ್ನು ಎದುರಿಸಿತ್ತು. ಆದರೆ ನಾಯಕ ರಾಹುಲ್ ಹಾಗೂ ದೀಪಕ್ ಹೂಡಾ ಅದ್ಭುತವಾಗಿ ಇನ್ನಿಂಗ್ಸ್ ಕಟ್ಟಿದರು. ಈ ಇಬ್ಬರು ಆಟಗಾರರು ಕುಡ ತಲಾ ಅರ್ಧ ಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಕೆಎಲ್ ರಾಹುಲ್ 68 ರನ್‌ಗಳಿಸಿದರೆ ದೀಪಕ್ ಹೂಡಾ 51 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ಈ ಇಬ್ಬರು ಆಟಗಾರರನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರನಿಂದಲೂ ಉತ್ತಮ ಪ್ರದರ್ಶನ ಬರಲಿಲ್ಲ.

ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ನರ್ ವಾಶಿಂಗ್ಟನ್ ಸುಂದರ್ ಆರಂಭದಲ್ಲಿಯೇ ಎರಡು ವಿಕೆಟ್ ಪಡೆಯುವ ಮೂಲಕ ಎದುರಾಳಿಗೆ ಆಘಾತ ನೀಡಿದರು. ರೊಮಾರಿಯೋ ಶೆಫರ್ಡ್ ಹಾಗೂ ಟಿ ನಟರಾಜನ್ ಕೂಡ ಎರಡು ವಿಕೆಟ್ ಕಬಳಿಸಿ ಮಿಂಚಿದರು. ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 169 ರನ್‌ಗಳಿಸಿತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡ.

ಇದನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಕೂಡ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕರಿಬ್ಬರ ವಿಕೆಟ್‌ಗಳನ್ನು 38 ರನ್‌ಗಳಾಗುವಷ್ಟರಲ್ಲಿ ಕಳೆದುಕೊಂಡ ಹೈದರಾಬಾದ್ ರಾಹುಲ್ ತ್ರಿಪಾಠಿ 44 ರನ್‌ಗಳ ಕೊಡುಗೆ ನೀಡುವ ಮೂಲಕ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ನಿಕೋಲಸ್ ಪೂರನ್ ಕೂಡ ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ವಾಶಿಂಗ್ಟನ್ ಸುಂದರ್ ಜೊತೆ ಸೇರಿಕೊಂಡ ಪೂರನ್ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದರು. ಆದರೆ 18ನೇ ಓವರ್ ಎಸೆದ ಆವೇಶ್ ಖಾನ್ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಬಳಿಸಿದರು. ಈ ಮೂಲಕ ಪಂದ್ಯವನ್ನು ಲಕ್ನೋ ಮರಳಿ ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡ 12 ರನ್‌ಗಳಿಂದ ಕಳೆದುಕೊಂಡಿತು. ಈ ಪಮದ್ಯದಲ್ಲಿ ಆವೇಶ್ ಖಾನ್ 4 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI: ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ಏಡೆನ್ ಮಾರ್ಕ್ರಾಮ್, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ರೊಮಾರಿಯೋ ಶೆಫರ್ಡ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್

ಬೆಂಚ್: ಶ್ರೇಯಸ್ ಗೋಪಾಲ್, ಜಗದೀಶ ಸುಚಿತ್, ಗ್ಲೆನ್ ಫಿಲಿಪ್ಸ್, ಶಶಾಂಕ್ ಸಿಂಗ್, ರವಿಕುಮಾರ್ ಸಮರ್ಥ್, ವಿಷ್ಣು ವಿನೋದ್, ಪ್ರಿಯಾಂ ಗಾರ್ಗ್, ಕಾರ್ತಿಕ್ ತ್ಯಾಗಿ, ಫಜಲ್ಹಕ್ ಫಾರೂಕಿ, ಮಾರ್ಕೊ ಜಾನ್ಸೆನ್, ಸೌರಭ್ ದುಬೆ

ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಎವಿನ್ ಲೂಯಿಸ್, ದೀಪಕ್ ಹೂಡಾ, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಆಂಡ್ರ್ಯೂ ಟೈ, ರವಿ ಬಿಷ್ಣೋಯ್, ಅವೇಶ್ ಖಾನ್
ಬೆಂಚ್: ಶಹಬಾಜ್ ನದೀಮ್, ಕೃಷ್ಣಪ್ಪ ಗೌತಮ್, ಅಂಕಿತ್ ರಾಜ್‌ಪೂತ್, ಮೊಹ್ಸಿನ್ ಖಾನ್, ಕರಣ್ ಶರ್ಮಾ, ಮಯಾಂಕ್ ಯಾದವ್, ಕೈಲ್ ಮೇಯರ್ಸ್, ಮನನ್ ವೋಹ್ರಾ, ದುಷ್ಮಂತ ಚಮೀರಾ

Story first published: Tuesday, April 5, 2022, 10:13 [IST]
Other articles published on Apr 5, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+