For Quick Alerts
ALLOW NOTIFICATIONS  
For Daily Alerts
 

KKR vs MI: ಟಿ20 ಕ್ರಿಕೆಟ್‌ನಲ್ಲಿ ಮಹತ್ವದ ಮೈಲಿಗಲ್ಲು ನೆಡಲು ಸಜ್ಜಾದ ರೋಹಿತ್ ಶರ್ಮಾ

IPL 2022, match 14, MI vs KKR: Players records and approaching milestones

ಐಪಿಎಲ್ 15ನೇ ಆವೃತ್ತಿಯಲ್ಲಿ ಭಾರೀ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿರುವ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಮೊದಲ ಎರಡು ಪಂದ್ಯಗಳಲ್ಲಿಯೂ ನಿರಾಸೆ ಅನುಭವಿಸಿದೆ. ಆರಂಭಿಕ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಪಡೆ ಸೋಲು ಅನುಭವಿಸಿದ್ದು ಗೆಲುವಿಗಾಗಿ ಹಾತೊರೆಯುತ್ತಿದೆ. ಇತ್ತ ಹಾಲಿ ರನ್ನರ್‌ಅಪ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ಆಡಿದ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸದಲ್ಲಿದ್ದು ಮುಂಬೈ ಇಂಡಿಯನ್ಸ್ ತಂಡವನ್ನು ಕೂಡ ಮಣಿಸುವ ಉತ್ಸಾಹದಲ್ಲಿದೆ.

ಮುಂಬೈ ಇಂಡಿಯನ್ಸ್ ತಂಡ ಆಡಿದ ಎರಡು ಪಂದ್ಯಗಳಲ್ಲಿಯೂ ಸರ್ವಾಂಗೀಣ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ವಿಭಾಗ ಪರಿಣಾಮಕಾರಿ ಎನಿಸುತ್ತಿಲ್ಲ.ಇತ್ತ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಆರ್‌ಸಿಬಿ ವಿರುದ್ಧದ ಪಂದ್ಯವನ್ನು ಹೊರತುಪಡಿಸಿ ಉಳಿದ ಪಂದ್ಯಗಳಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಈ ಪಂದ್ಯದಲ್ಲಿಯೂ ಕಠಿಣ ಸವಾಲನ್ನು ಎದುರಿಸುವುದರಲ್ಲಿ ಅನುಮಾನವಿಲ್ಲ.

ಈ ಕುತೂಹಲಕಾರಿ ಪಂದ್ಯದಲ್ಲಿ ಎರಡೂ ತಂಡಗಳ ಕೆಲ ಆಟಗಾರರು ಪ್ರಮುಖ ಮೈಲಿಗಲ್ಲನ್ನು ನೆಡಲು ಸಜ್ಜಾಗಿದ್ದಾರೆ. ಈ ಬಗೆಗಿನ ಮಾಹಿತಿ ಇಲ್ಲಿದೆ.

IPL 2022, match 14, MI vs KKR: Players records and approaching milestones

*ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಪ್ರಮುಖ ಮೈಲಿಗಲ್ಲೊಂದನ್ನು ನೆಡುವ ಅವಕಾಶ ಹೊಂದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 10,000 ರನ್‌ಗಳಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗುವ ಅವಕಾಶ ರೋಹಿತ್ ಶರ್ಮಾಗೆ ಇದೆ. ಇದಕ್ಕಾಗಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 54 ರನ್‌ ಬಾರಿಸಬೇಕಿದೆ.

*ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಲ್‌ರೌಂಡರ್ ಕಿರಾನ್ ಪೊಲಾರ್ಡ್ ಈ ಬಾರಿಯ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಇಂದಿನ ಪಂದ್ಯದಲಲ್ಇ ಬ್ಯಾಟ್‌ನಿಂದ ಉತ್ತಮ ಕೊಡುಗೆಯ ನಿರೀಕ್ಷೆಯಲ್ಲಿದೆ ಮುಂಬೈ ಇಂಡಿಯನ್ಸ್ ತಂಡ. ಕಿರಾನ್ ಪೊಲಾರ್ಡ್ ಈ ಪಂದ್ಯದಲ್ಲಿ ಫೀಲ್ಡರ್ ಆಗಿ ಮಹತ್ವದ ದಾಖಲೆ ಬರೆಯುವ ಅವಕಾಶ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಕಿರಾನ್ ಪೊಲಾರ್ಡ್ 100 ಕ್ಯಾಚ್ ಪಡೆಯುವ ಉತ್ತಮ ಅವಕಾಶವನ್ನು ಹೊಂದಿದ್ದಾರೆ. ಇದಕ್ಕಾಗಿ ನಾಲ್ಕು ಪಡೆಯಬೇಕಿದೆ.

*ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಯ್‌ದೇವ್ ಉನಾದ್ಕಟ್ ಕಳೆದ ಎರಡು ಪಂದ್ಯಗಳಲ್ಲಿಯೂ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಂಡಿಲ್ಲ. ಈ ಪಂದ್ಯದಲ್ಲಿ ಅವಕಾಶ ಗಿಟ್ಟಿಸಿಕೊಂಡು 5 ವಿಕೆಟ್ ಸಂಪಾದಿಸಿದರೆ ಟಿ20 ಕ್ರಿಕೆಟ್‌ನಲ್ಲಿ ಒಟ್ಟಾರೆಯಾಗಿ 200 ವಿಕೆಟ್ ಸಂಪಾದಿಸಿದ ಸಾಧನೆ ಮಾಡಿದಂತಾಗುತ್ತದೆ.
*ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿರುವ ಅಫ್ಘಾನಿಸ್ತಾನ ಮೂಲದ ಮೊಹಮ್ಮದ್ ನಬಿ ಇಂದಿನ ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡರೆ ಒಟ್ಟಾರೆ 20 ಕ್ರಿಕೆಟ್ ಕ್ರಿಕೆಟ್‌ನಲ್ಲಿ 5000 ರನ್‌ಗಳ ಮೈಲಿಗಲ್ಲ್ಉ ಪೂರೈಸುವ ಅವಕಾಶ ಹೊಂದಿದ್ದಾರೆ. ಇದಕ್ಕಾಗಿ ನಬಿ ಕೇವಲ 4 ರನ್ ಮಾತ್ರವೇ ಗಳಿಸಬೇಕಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್‌ರೌಂಡರ್ ಸುನಿಲ್ ನರೈನ್ ಐಪಿಎಲ್‌ನಲ್ಲಿ 1000 ರನ್‌ಗಳಿಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲು 34 ರನ್‌ಗಳಷ್ಟು ಹಿಂದಿದ್ದಾರೆ. ಇನ್ನು ವಿಂಡೀಸ್‌ನ ಈ ಸ್ಪಿನ್ನರ್ 150 ವಿಕೆಟ್‌ಗಳ ಮೈಲಿಗಲ್ಲು ದಾಟಲು 5 ವಿಕೆಟ್ ಸಂಪಾದಿಸಬೇಕಿದೆ.

Story first published: Wednesday, April 6, 2022, 14:56 [IST]
Other articles published on Apr 6, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+