IPL 2022: KKR vs SRH: ಹೊಸ ಮೈಲಿಗಲ್ಲು ಬರೆಯಲು ಸಜ್ಜಾದ ಇತ್ತಂಡಗಳ ಆಟಗಾರರು

ಐಪಿಎಲ್ 15ನೇ ಆವೃತ್ತಿಯ 25ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲು ಸಜ್ಜಾಗಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ಆದರೆ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಅನುಭವಿಸಿದ್ದು ಮತ್ತೆ ಗೆಲುವಿನ ಹಾದಿಗೆ ಮರಳುವ ಗುರಿಯಿಟ್ಟುಕೊಂಡಿದೆ. ಇತ್ತ ಸನ್‌ರೈಸರ್ಸ್ ಹೈದರಾಬಾದ ತಂಡ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಳಿಕ ಈಗ ಗೆಲುವಿನ ಹಾದಿ ಕಂಡುಕೊಂಡಿದ್ದು ಸತತ ಎರಡು ಗೆಲುವು ಸಾಧಿಸಿ ಹ್ಯಾಟ್ರಿಕ್ ಗೆಲುವಿನತ್ತ ದೃಷ್ಟಿ ಹರಿಸಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಕಳೆದ ಪಂದ್ಯದಲ್ಲಿ ಬಹುತೇಕ ಎಲ್ಲಾ ಆಟಗಾರರು ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅದರಲ್ಲೂ ತಂಡದ ಆರಂಭಿಕ ಆಟಗಾರರ ಪ್ರದರ್ಶನ ಗಮನಸೆಳೆದಿದೆ. ಇತ್ತ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಉತ್ತಮ ಪ್ರದರ್ಶನ ನೀಡಿದ್ದರೂ ಕಳೆದ ಪಂದ್ಯದಲ್ಲಿ ಸೋಲು ಅನುಭವಿಸಿದ್ದು ಮತ್ತೆ ಉತ್ತಮ ಪ್ರದರ್ಶನದ ಮೂಲಕ ಗೆಲುವಿನ ನಗೆ ಬೀರಲು ಎದುರು ನೋಡುತ್ತಿದೆ.
ಕೆಕೆಆರ್ ಹಾಗೂ ಎಸ್‌ಆರ್‌ಹೆಚ್ ತಂಡಗಳ ನಡುವಿನ ಹೆಡ್ ಟು ಹೆಡ್: ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು 21 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಕೆಕೆಆರ್ ಮೇಲುಗೈ ಸಾಧಿಸಿದ್ದು 14-7 ಮುನ್ನಡೆಯಲ್ಲಿದೆ. ಕಳೆದ ಮೂರು ಆವೃತ್ತಿಗಳಲ್ಲಿ 6 ಬಾರಿ ಮುಖಾಮುಖಿಯಾಗಿದ್ದು ಇದರಲ್ಲಿ ಕೆಕೆಆರ್ ತಂಡ 5 ಬಾರಿ ಗೆದ್ದು ಮೇಲುಗೈ ಸಾಧಿಸಿದೆ. ಹೀಗಾಗಿ ಈ ಬಾರಿ ಯಾರಿಗೆ ಗೆಲುವು ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಇಂದಿನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಆಟಗಾರರು ಕೆಲ ದಾಖಲೆ ಹಾಗೂ ಮೈಲಿಗಲ್ಲು ಬರೆಯಲು ಸಜ್ಜಾಗಿದ್ದಾರೆ. ಈ ಮೈಲಿಗಲ್ಲುಗಳ ಬಗ್ಗೆ ಮಾಹಿತಿ ಮುಂದೆ ಓದಿ..
*ಕೇನ್ ವಿಲಿಯಮ್ಸನ್: ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಐಪಿಎಲ್‌ನಲ್ಲಿ 2000 ರನ್‌ಗಳಿಸುವ ಸನಿಹದಲ್ಲಿದ್ದಾರೆ. ಇದಕ್ಕಾಗಿ ಇಂದಿನ ಪಂದ್ಯದಲ್ಲಿ ಕೇನ್ 8 ರನ್‌ಗಳನ್ನು ಗಳಿಸಬೇಕಿದೆ.
*ನಿಕೋಲಸ್ ಪೂರನ್: ಸನ್‌ರೈಸರ್ಸ್ ಹೈದರಾಬಾದ್ ಆಟಗಾರ ನಿಕೋಲಸ್ ಪೂರನ್ ಈ ಪಂದ್ಯದಲ್ಲಿ ಒಂದು ಸಿಕ್ಸರ್ ಗಳಿಸಿದರೆ ಟಿ20 ಕ್ರಿಕೆಟ್‌ನಲ್ಲಿ 300 ಸಿಕ್ಸರ್ ಗಳಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.
*ಸುನಿಲ್ ನರೈನ್: ಐಪಿಎಲ್‌ನಲ್ಲಿ 1000 ರನ್‌ಗಳಿಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲು ಸುನಿಲ್ ನರೈನ್ 30 ರನ್‌ಗಳಷ್ಟು ಹಿಂದಿದ್ದಾರೆ. ಇನ್ನು ಐಪಿಎಲ್‌ನಲ್ಲಿ 150 ವಿಕೆಟ್ ಪಡೆದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲು 3 ವಿಕೆಟ್ ಸಂಪಾದಿಸಬೇಕಿದೆ.
*ಭುವನೇಶ್ವರ್ ಕುಮಾರ್: ಐಪಿಎಲ್‌ನಲ್ಲಿ 150 ವಿಕೆಟ್ ಪಡೆದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲು 4 ವಿಕೆಟ್ ಸಂಪಾದಿಸಬೇಕಿದೆ.
*ನಿತೀಶ್ ರಾಣಾ: ಐಪಿಎಲ್‌ನಲ್ಲಿ 100 ಸಿಕ್ಸರ್ ಗಳಿಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲು 5 ಸಿಕ್ಸರ್ ಗಳಿಸಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications