Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

LSG vs PBKS: ಪ್ರಮುಖ ಮೈಲಿಗಲ್ಲುಗಳ ಮೇಲೆ ಕಣ್ಣಿಟ್ಟಿದ್ದಾರೆ ಇತ್ತಂಡಗಳ ಆಟಗಾರರು!

IPL 2022, match 42, PBKS vs LSG: Players records and approaching milestones

ಐಪಿಎಲ್‌ನಲ್ಲಿ ಶುಕ್ರವಾರ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಸೆಣೆಸಾಟ ಕುತೂಹಲ ಮೂಡಿಸಿದೆ. ಇಬ್ಬರು ಕನ್ನಡಿಗ ನಾಯಕರು ಈ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವುದು ಪಂದ್ಯದ ಮೇಲಿನ ನಿರೀಕ್ಷೆ ಹೆಚ್ಚಲು ಕಾರಣವಾಗಿದೆ. ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದ ಕೆಎಲ್ ರಾಹುಲ್ ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದರೆ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ಮಯಾಂಕ್ ಅಗರ್ವಾಲ್ ಹೆಗಲಿಗೆ ಬಿದ್ದಿದೆ.

ಲಕ್ನೋ ಸೂಪರ್ ಜೈಂಟ್ಸ್ ತಂಡ ತನ್ನ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು ಅಂಕಪಟ್ಟಿಯಲ್ಲಿ ಟಾಪ್ 4ರಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಆಡಿರುವ 8 ಪಂದ್ಯಗಳ ಪೈಕಿ 5ರಲ್ಲಿ ಗೆಲುವು ಸಾಧಿಸಿದ್ದು ಪ್ಲೇಆಫ್‌ಗೇರುವ ಸ್ಪರ್ಧೆಯಲ್ಲಿ ಮುಂದಿದ್ದು ಸ್ಥಾನವನ್ನು ಮತ್ತಷ್ಟು ಭದ್ರಪಡಿಸಲು ಪ್ರಯತ್ನಿಸುತ್ತಿದೆ. ಆದರೆ ಪಂಜಾಬ್ ಕಿಂಗ್ಸ್ ಕೆಲ ಅದ್ಭುತ ಪ್ರದರ್ಶನಗಳ ಹೊರತಾಗಿಯೂ ಅಂಕಪಟ್ಟಿಯಲ್ಲಿ ಹಿಂದುಳಿದಿದ್ದು ಈ ಪಂದ್ಯಲ್ಲಿ ಮಾಡಿರುವ ತಪ್ಪನ್ನು ಸರಿಪಡಿಸಿಕೊಳ್ಳಲು ಉತ್ತಮ ಅವಕಾಶವಿದೆ. ಆಡಿರುವ 8 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ 4 ಗೆಲುವು ಹಾಗೂ 4 ಸೋಲು ಅನುಭವಿಸಿದ್ದು 7ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆದ್ದು ಸ್ಥಾನವನ್ನು ಮತ್ತಷ್ಟು ಉತ್ತಮ ಪಡಿಸಿಕೊಳ್ಳುವ ಪ್ರಯತ್ನ ನಡೆಸಲಿದೆ.

IPL 2022, match 42, PBKS vs LSG: Players records and approaching milestones

ಇಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ಆಟಗಾರರು ಕೆಲ ವಿಶೇಷ ಮೈಲಿಗಲ್ಲುಗಳನ್ನು ಸಾಧಿಸುವ ಅವಕಾಶ ಹೊಂದಿದ್ದಾರೆ.

* ಜಾನಿ ಬೈರ್‌ಸ್ಟೋವ್: ಸನ್‌ರೈಸರ್ಸ್ ಹೈದರಾಬಾದ್ ತಂಡದ ಜಾನಿ ಬೈರ್‌ಸ್ಟೋವ್ ಟಿ20 ಕ್ರಿಕೆಟ್‌ನಲ್ಲಿ ಮಹತ್ವದ ಮೈಲಿಗಲ್ಲು ತಲುಪುವ ಅವಕಾಶ ಹೊಂದಿದ್ದಾರೆ. ಇಂದಿನ ಪಂದ್ಯದಲ್ಲಿ ಬೈರ್‌ಸ್ಟೋವ್ 49 ರನ್‌ಗಳಿಸಿದರೆ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 4000 ರನ್‌ಗಳನ್ನು ಪೂರೈಸಿದಂತಾಗುತ್ತದೆ.
*ಮಾರ್ಕಸ್‌ ಸ್ಟೋಯ್ನಿಸ್: ಲಕ್ನೋ ತಂಡದ ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಐಪಿಎಲ್‌ನಲ್ಲಿ 1000 ರನ್ ಪೂರೈಸಲು 14 ರನ್‌ಗಳ ಅಗತ್ಯವಿದೆ. ಇನ್ನು ಆಸಿಸ್‌ನ ಈ ಆಲ್‌ರೌಡರ್ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 4000 ರನ್‌ ಪೂರ್ತಿಗೊಳಿಸಲು ಇಂದಿನ ಪಂದ್ಯದಲ್ಲಿ 62 ರನ್‌ಗಳಿಸಬೇಕಿದೆ.
*ದೀಪಕ್ ಹೂಡಾ: ಐಪಿಎಲ್‌ನಲ್ಲಿ ದೀಪಕ್ ಹೂಡಾ 1000 ರನ್‌ಗಳ ಗಡಿ ದಾಟಲು 28 ರನ್‌ಗಳಷ್ಟು ದೂರದಲ್ಲಿದ್ದಾರೆ.

ಐಪಿಎಲ್ 202: ಇಂದು ಲಕ್ನೋ vs ಪಂಜಾಬ್ ಹಣಾಹಣಿ: ಕನ್ನಡಿಗರ ಸವಾಲ್‌ನಲ್ಲಿ ಗೆಲ್ಲೋರು ಯಾರು?
*ಕ್ವಿಂಟನ್ ಡಿಕಾಕ್: ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಕೂಡ ಇಂದಿನ ಪಂದ್ಯದಲ್ಲಿ ಮಹತ್ವದ ದಾಖಲೆಯೊಂದರ ಸನಿಹದಲ್ಲಿದ್ದಾರೆ. ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 800 ಬೌಂಡರಿ ಗಳಿಸಿದ ಆಟಗಾರರ ಪಟ್ಟಿಗೆ ಸೇರುವ ಅವಕಾಶ ಡಿಕಾಕ್ ಮುಂದಿದೆ. ಇದಕ್ಕಾಗಿ ಇಂದಿನ ಪಂದ್ಯದಲ್ಲಿ 7 ಬೌಂಡರಿ ಸಿಡಿಸಬೇಕಿದೆ.
*ಮನೀಶ್ ಪಾಂಡೆ: ಅನುಭವಿ ಕ್ರಿಕೆಟಿಗ ಮನೀಶ್ ಪಾಂಡೆ ಇಂದಿನ ಪಂದ್ಯದಲ್ಲಿ ಕಣಕ್ಕಿಳಿದು 5 ಸಿಕ್ಸರ್ ಸಿಡಿಸಿದರೆ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲಿದ್ದಾರೆ.
*ಜೇಸನ್ ಹೋಲ್ಡರ್: ವೆಸ್ಟ್ ಇಂಡೀಸ್‌ನ ಅನುಭವಿ ಆಟಗಾರ ಎಲ್‌ಎಸ್‌ಜಿ ತಂಡದ ಆಲ್‌ರೌಂಡರ್ ಜೇಸನ್ ಹೋಲ್ಡರ್ ಐಪಿಎಲ್‌ನಲ್ಲಿ 50 ವಿಕೆಟ್ ಪಡೆದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲು ಇನ್ನು 6 ವಿಕೆಟ್ ಸಂಪಾದಿಸಬೇಕಿದೆ.

Story first published: Friday, April 29, 2022, 14:25 [IST]
Other articles published on Apr 29, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+