For Quick Alerts
ALLOW NOTIFICATIONS  
For Daily Alerts
 

PBKS vs KKR: ಐಪಿಎಲ್‌ನಲ್ಲಿ ವಿಶೇಷ ಮೈಲಿಗಲ್ಲು ನೆಡಲು ಸಜ್ಜಾದ ಪಂಜಾಬ್, ಕೊಲ್ಕತ್ತಾ ಆಟಗಾರರು

IPL 2022, match 8, KKR vs PBKS: Players records and approaching milestones

ಇಂಡಿಯನ್ ಪ್ರೀಮಿಯರ್ ಲೀಗ್‌ನ 8ನೇ ಪಂದ್ಯ ಇಂದು ಶುಕ್ರವಾರ ನಡೆಯಲಿದ್ದು ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಇದು ಈ ಟೂರ್ನಿಯ ಮೂರನೇ ಪಂದ್ಯವಾಗಿದ್ದರೆ ಪಂಜಾಬ್ ಕಿಂಗ್ಸ್ ತಂಡ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ. ಎರಡೂ ತಂಡಗಳು ಕೂಡ ಗೆಲುವಿಗಾಗಿ ಭರ್ಜರಿ ಪೈಪೋಟಿಯನ್ನು ನಡೆಸಲಿದೆ.

ಪಂಜಾಬ್ ಕಿಂಗ್ಸ್ ತಂಡ ತನ್ನ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಿದ್ದು ಬೃಹತ್ ಮೊತ್ತವನ್ನು ಬೆನ್ನಟ್ಟಿ ಗೆಲುವು ಸಾಧಿಸಿರುವ ಕಾರಣ ಸಾಕಷ್ಟು ಆತ್ಮವಿಶ್ವಾಸದಲ್ಲಿದೆ. ಮಯಾಂಕ್ ಅಗರ್ವಾಲ್ ನೇತೃತ್ವದಲ್ಲಿ ಮುಂದಿನ ಪಂದ್ಯದಲ್ಲಿ ಮತ್ತಷ್ಟು ಬಲಿಷ್ಠವಾಗಿ ಕಣಕ್ಕಿಳಿಯುವ ಉತ್ಸಾಹದಲ್ಲಿದೆ. ಇತ್ತ ಶ್ರೇಯಸ್ ಐಯ್ಯರ್ ನೇತೃತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮೊದಲ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರೂ ಎರಡನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧವೇ ಸೋಲು ಅನುಭವಿಸಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲುವವರ್ಯಾರು ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

IPL 2022, match 8, KKR vs PBKS: Players records and approaching milestones

ಇದೀಗ ಈ ಎರಡೂ ತಂಡಗಳು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲು ವೇದಿಕೆ ಸಜ್ಜಾಗಿದೆ. ಇನ್ನು ಈ ಪಂದ್ಯದಲ್ಲಿ ಎರಡೂ ತಂಡಗಳ ಕೆಲ ಆಟಗಾರರು ಪ್ರಮುಖ ದಾಖಲೆ ಹಾಗೂ ಮೈಲಿಗಲ್ಲು ನೆಡಲು ಸಜ್ಜಾಗಿದ್ದಾರೆ. ಇಂದಿನ ಈ ಪಂದ್ಯದಲ್ಲಿ ದಾಖಲಾಗಬಹುದಾಗ ಕೆಲ ವಿಶೇಷ ದಾಖಲೆ ಹಾಗೂ ಮೈಲಿಗಲ್ಲುಗಳತ್ತ ಗಮನಹರಿಸೋಣ.

*ಪಂಜಾಬ್ ಕಿಂಗ್ಸ್ ನಾಯಕ ಮಯಾಂಕ್ ಅಗರ್ವಾಲ್ ಇಂದಿನ ಪಂದ್ಯದಲ್ಲಿ 51 ರನ್ ದಾಖಲಿಸಿದರೆ ವಿಶೇಷ ಟಿ20 ಕ್ರಿಕೆಟ್‌ನಲ್ಲಿ ವಿಶೇಷ ಮೈಲಿಗಲ್ಲನ್ನು ನೆಡಲಿದ್ದಾರೆ. ಒಟ್ಟಾರೆಯಾಗಿ ಟಿ20 ಕ್ರಿಕೆಟ್‌ನಲ್ಲಿ ಮಯಾಂಕ್ ಅಗರ್ವಾಲ್ 4000 ರನ್‌ ಗಳಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.

*ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭೀಕನಾಗಿ ಕಣಕ್ಕಿಳಿಯುತ್ತಿರುವ ಅನುಭವಿ ಆಟಗಾರ ಅಜಿಂಕ್ಯಾ ರಹಾನೆ ಈ ಪಂದ್ಯದಲ್ಲಿ ಕೇವಲ 6 ರನ್‌ಗಳಿಸಿದರೆ ಐಪಿಎಲ್‌ನಲ್ಲಿ 4000 ರನ್‌ಗಳಿಸಿದ ಆಟಗಾರರಪಟ್ಟಿಗೆ ಸೇರಿಕೊಳ್ಳಲಿದ್ದಾರೆ.

*ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್‌ರೌಂಡರ್ ಮೊಹಮ್ಮದ್ ನಬಿ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ಪ್ರಮುಖ ಮೈಲಿಗಲ್ಲು ನೆಡುವ ಸನಿಹದಲ್ಲಿದ್ದಾರೆ. ಅಫ್ಘಾನಿಸ್ತಾನದ ಈ ಆಟಗಾರ 5000 ರನ್‌ಗಳ ಮೈಲಿಗಲ್ಲು ತಲುಪಲು ಕೇವಲ 4 ರನ್‌ಗಳ ಅಗತ್ಯವಿದೆ. ಇಂದಿನ ಪಂದ್ಯದಲ್ಲಿ ಆಡುವ ಬಳಗದಲ್ಲಿ ಅವಕಾಶ ಪಡೆದರೆ ಈ ಸಾಧನೆ ಮಾಡುವ ಅವಕಾಶ ದೊರೆಯುವ ಸಾಧ್ಯತೆಯಿದೆ.

*ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್‌ರೌಂಡರ್ ಸುನಿಲ್ ನರೈನ್ ಈ ಪಂದ್ಯದಲ್ಲಿ 34 ರನ್‌ಗಳಿಸಿದರೆ ಐಪಿಎಲ್‌ನಲ್ಲಿ 1000 ರನ್‌ ಗಳಿಸಿದಂತಾಗುತ್ತದೆ.

*ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್ ಐಪಿಎಲ್‌ನಲ್ಲಿ 200 ಬೌಂಡರಿ ಗಳಿಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲು ಕೇವಲ ಒಂದು ಬೌಂಡರಿಯ ಅಗತ್ಯವಿದೆ.

* ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭದ ಪಂದ್ಯದಿಂದಲೇ ಮಿಂಚುತ್ತಿರುವ ವೇಗದ ಬೌಲರ್ ಉಮೇಶ್ ಯಾದವ್ ಇಂದಿನ ಪಂದ್ಯದಲಲ್ಇಯೂ ಕಣಕ್ಕಿಳಿಯುವುದಲ್ಲಿ ಅನುಮಾನವಿಲ್ಲ. ಇಂದಿನ ಪಂದ್ಯದಲ್ಲಿ ಆಡುವ ಮೂಲಕ ಐಪಿಎಲ್‌ನಲ್ಲಿ ಉಮೇಶ್ 50ನೇ ಪಂದ್ಯದಲ್ಲಿ ಆಡಲು ಇಳಿದಂತಾಗುತ್ತದೆ.

* ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮತ್ತೋರ್ವ ವೇಗಿ ಟಿಮ್ ಸೌಥಿ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 250 ವಿಕೆಟ್ ಪಡೆದ ಸಾಧನೆ ಮಾಡಲು ಕೇವಲ ಎರಡು ವಿಕೆಟ್‌ಗಳ ಅಗತ್ಯವಿದೆ.

Story first published: Friday, April 1, 2022, 13:48 [IST]
Other articles published on Apr 1, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+