IPL 2022: ಈ 4 ತಂಡಗಳು ಪ್ಲೇಆಫ್ ಪ್ರವೇಶಿಸುವುದು ಪಕ್ಕಾ ಎಂದು ಬಲಿಷ್ಠ ತಂಡವನ್ನೇ ಕಡೆಗಣಿಸಿದ ಹೇಡನ್!

ವಿಶ್ವದ ಜನಪ್ರಿಯ ಹಾಗೂ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಎಂಬ ದೊಡ್ಡ ಖ್ಯಾತಿಯನ್ನು ಹೊಂದಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮರಳಿ ಬಂದಿದ್ದು, ಹದಿನೈದನೇ ಆವೃತ್ತಿ ಮಾರ್ಚ್ 26ರಿಂದ ಶುರುವಾಗಿದೆ. ಇನ್ನು ಈ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ಎಂಬ 2 ನೂತನ ತಂಡಗಳ ಆಗಮನವಾಗಿದ್ದು, ಟ್ರೋಫಿಗಾಗಿ ಒಟ್ಟು ಹತ್ತು ತಂಡಗಳ ನಡುವೆ ಸೆಣಸಾಟ ಏರ್ಪಟ್ಟಿದೆ.
ಇನ್ನು ಟೂರ್ನಿಯ ಲೀಗ್ ಹಂತದ ಪಂದ್ಯಗಳು ಆರಂಭವಾದ ಬೆನ್ನಲ್ಲೇ ಟೂರ್ನಿಯಲ್ಲಿ ಯಾವ ತಂಡಗಳು ಯಶಸ್ವಿಯಾಗಿ ಪ್ಲೇ ಆಫ್ ಪ್ರವೇಶಿಸಲಿವೆ ಎಂಬ ಚರ್ಚೆಗಳು ಆರಂಭವಾಗಿದ್ದು, ಹಲವಾರು ಮಾಜಿ ಕ್ರಿಕೆಟಿಗರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇ ಆಫ್ ಸುತ್ತಿಗೆ ಲಗ್ಗೆ ಇಡಲಿವೆ ಎಂದು ಊಹೆಯನ್ನು ಮಾಡಿದ್ದಾರೆ. ಹೀಗೆ ಊಹೆ ಮಾಡಿರುವ ಮಾಜಿ ಕ್ರಿಕೆಟಿಗರ ಪೈಕಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಾದ ಮ್ಯಾಥ್ಯೂ ಹೇಡನ್ ಕೂಡ ಒಬ್ಬರಾಗಿದ್ದು, ಇವರ ಪ್ರಕಾರ ಈ ಕೆಳಕಂಡ ನಾಲ್ಕು ತಂಡಗಳು ಯಶಸ್ವಿಯಾಗಿ ಪ್ರವೇಶಿಸಲಿವೆಯಂತೆ. ಇನ್ನು ಮ್ಯಾಥ್ಯೂ ಐಪಿಎಲ್‌ನ ಬಲಿಷ್ಠ ತಂಡವನ್ನೇ ಕಡೆಗಣಿಸಿದ್ದು, ಈ ಕುರಿತಾದ ವಿವರ ಈ ಕೆಳಕಂಡಂತಿದೆ.

ಪ್ಲೇಆಫ್ ಪ್ರವೇಶಿಸುವುದರಲ್ಲಿ ಈ ತಂಡ ಮೊದಲು
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇಆಫ್ ಪ್ರವೇಶಿಸಲಿರುವ ಟಾಪ್ ನಾಲ್ಕು ತಂಡಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನನ್ನ ಮೊದಲ ಆಯ್ಕೆ ಎಂದು ಮ್ಯಾಥ್ಯೂ ಹೇಡನ್ ತಿಳಿಸಿದ್ದಾರೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯ್ ಲೀಗ್ ಟೂರ್ನಿಯ ಆರಂಭದ ಸನಿಹದಲ್ಲಿ ತನ್ನ ನಾಯಕನನ್ನು ಬದಲಾಯಿಸಿದ ಚೆನ್ನೈ ಸೂಪರ್ ಕಿಂಗ್ಸ್ ನೂತನ ನಾಯಕ ರವೀಂದ್ರ ಜಡೇಜಾ ನಾಯಕತ್ವದಲ್ಲಿ ಕಣಕ್ಕಿಳಿದು ಸೆಣಸಾಡುತ್ತಿದೆ. ಹಾಗೂ ರವೀಂದ್ರ ಜಡೇಜಾ ನಾಯಕತ್ವದಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲನ್ನು ಕಂಡಿದೆ

ಬಲಿಷ್ಠ ತಂಡವನ್ನೇ ಕೈಬಿಟ್ಟ ಹೇಡನ್
ಸಿಎಸ್‌ಕೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇಆಫ್ ಪ್ರವೇಶಿಸಲಿರುವ ಪ್ರಥಮ ತಂಡ ಎಂದು ಹೇಳಿಕೆ ನೀಡಿರುವ ಮ್ಯಾಥ್ಯೂ ಹೇಡನ್ ಮುಂಬೈ ಇಂಡಿಯನ್ಸ್ ತಂಡವನ್ನು ಈ ಪಟ್ಟಿಯಿಂದ ಹೊರಗಿಡುತ್ತೇನೆ ಎಂದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಮ್ಯಾಥ್ಯೂ ಹೇಡನ್ ಕಡೆಗಣಿಸಿರುವುದು ಆಶ್ಚರ್ಯಕರವಾಗಿದೆ. ಅತ್ತ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಲೀಗ್ ಹಂತದಲ್ಲಿಯೇ ಹೊರಹೊಮ್ಮಿದ್ದ ಮುಂಬೈ ಇಂಡಿಯನ್ಸ್ ತನ್ನ ಚೊಚ್ಚಲ ಪಂದ್ಯದಲ್ಲಿಯೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತಿದೆ.

ಚೆನ್ನೈ ಜೊತೆ ಪ್ಲೇಆಫ್ ಪ್ರವೇಶಿಸಲಿವೆ ಈ ಮೂರು ತಂಡಗಳು
ಚೆನ್ನೈ ಸೂಪರ್ ಕಿಂಗ್ಸ್ ಜೊತೆಗೆ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್, ಶ್ರೇಯಸ್ ಐಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇಆಫ್ ಪ್ರವೇಶಿಸಲಿವೆ ಎಂದು ಮ್ಯಾಥ್ಯೂ ಹೇಡನ್ ಭವಿಷ್ಯ ನುಡಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications