ಐಪಿಎಲ್ 2022: ಶಿಖರ್ ಧವನ್ ಅಲ್ಲ ಈತನ ಪಾಲಾಗಲಿದೆ ಪಂಜಾಬ್ ಕಿಂಗ್ಸ್ ನಾಯಕತ್ವ!

ಎಲ್ಲಾ ಯೋಜನೆಗಳಂತೆ ನಡೆದರೆ ಮುಂಬರುವ ಮಾರ್ಚ್ 26ರಿಂದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಭಾರತ ನೆಲದಲ್ಲಿಯೇ ಆರಂಭಗೊಳ್ಳಲಿದೆ. ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಸಂಪೂರ್ಣವಾಗಿ ಭಾರತದಲ್ಲಿಯೇ ನಡೆಸಲು ಬಿಸಿಸಿಐ ತೀರ್ಮಾನಿಸಿದ್ದು, ಲೀಗ್ ಹಂತದ ಪಂದ್ಯಗಳು ಮುಂಬೈ ಹಾಗೂ ಪುಣೆ ನಗರದ ಕ್ರೀಡಾಂಗಣಗಳಲ್ಲಿ ನಡೆಯಲಿದ್ದು, ಎಲ್ಲವೂ ಯೋಜನೆಗಳ ಪ್ರಕಾರವೇ ನಡೆದರೆ ಪ್ಲೇ ಆಫ್ ಸುತ್ತಿನ ಪಂದ್ಯಗಳು ಅಹಮದಾಬಾದ್ ನಗರದ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ ಎನ್ನಲಾಗುತ್ತಿದೆ.
ಹೀಗೆ ಟೂರ್ನಿಯ ಕುರಿತಾದ ಚರ್ಚೆಗಳು ಈಗಾಗಲೇ ಆರಂಭವಾಗಿದ್ದು ಇಂಡಿಯನ್ ಪ್ರಿಮಿಯರ್ ಆಡಳಿತ ಮಂಡಳಿಯ ಸಭೆ ಕೂಡ ನಡೆಯುತ್ತಿದೆ. ಈ ಸಭೆ ಮುಕ್ತಾಯವಾದ ನಂತರ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ, ಪಂದ್ಯ ನಡೆಯುವ ಸ್ಥಳಗಳು ಹಾಗೂ ಪಂದ್ಯದ ಆರಂಭ ಮತ್ತು ಮುಕ್ತಾಯದ ದಿನಾಂಕ ಹೊರ ಬೀಳಲಿದೆ. ಹೀಗೆ ಈ ಬಾರಿಯ ಐಪಿಎಲ್ ಟೂರ್ನಿ ಯಾವಾಗ ಆರಂಭವಾಗಲಿದೆ ಎಂಬ ವಿಷಯ ಒಂದೆಡೆ ಕುತೂಹಲವನ್ನು ಮೂಡಿಸಿದ್ದರೆ, ಸದ್ಯ ನಾಯಕನನ್ನು ಹೊಂದಿಲ್ಲದ ಫ್ರಾಂಚೈಸಿಗಳಿಗೆ ಯಾರು ನಾಯಕನಾಗಿ ಆಯ್ಕೆಯಾಗಲಿದ್ದಾರೆ ಎಂಬ ವಿಚಾರವೂ ಕೂಡ ಸಾಕಷ್ಟು ಕುತೂಹಲವನ್ನು ಮೂಡಿಸಿದ್ದು ಚರ್ಚೆಗಳಿಗೆ ಕಾರಣವಾಗಿದೆ.
ಅದರಲ್ಲಿಯೂ ರಾಯಲ್ ಚಾಲೆಂಜರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳಿಗೆ ಯಾರು ನಾಯಕರಾಗಲಿದ್ದಾರೆ ಎಂಬ ವಿಷಯ ಭಾರೀ ಚರ್ಚೆಗೆ ಈಡಾಗುತ್ತಿದ್ದು, ಈ ಕುರಿತಾಗಿ ಹಲವಾರು ಕ್ರಿಕೆಟ್ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಯಾರು ನಾಯಕರಾದರೆ ಉತ್ತಮ ಎಂಬುದನ್ನು ಹೇಳಿಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ನಾಯಕ ಯಾರಾಗಲಿದ್ದಾರೆ ಎಂಬುದರ ಕುರಿತು ಇದೀಗ ವರದಿಯೊಂದು ಬಂದಿದ್ದು, ನಾಯಕತ್ವ ಯಾರ ಪಾಲಾಗಲಿದೆ ಎಂಬುದನ್ನು ಬಿಚ್ಚಿಟ್ಟಿದೆ. ಹಾಗಿದ್ದರೆ ಈ ವರದಿಯ ಪ್ರಕಾರ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವವನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಶಿಖರ್ ಧವನ್ ಹೆಗಲಿಗೆ ಪಂಜಾಬ್ ಕಿಂಗ್ಸ್ ನಾಯಕತ್ವ ಎನ್ನಲಾಗಿತ್ತು
ಇತ್ತೀಚೆಗಷ್ಟೇ ಹರಿದಾಡಿದ ಸುದ್ದಿಯ ಪ್ರಕಾರ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ 8.25 ಕೋಟಿ ನೀಡಿ ಖರೀದಿಸಿದ್ದ ಶಿಖರ್ ಧವನ್ ಹೆಗಲಿಗೆ ನಾಯಕತ್ವವನ್ನು ಹಾಕಲಿದೆ ಎನ್ನಲಾಗಿತ್ತು. ಹಲವಾರು ವರ್ಷಗಳಿಂದ ಕ್ರಿಕೆಟ್ ಆಡಿರುವ ಅನುಭವವಿರುವ ಶಿಖರ್ ಧವನ್ ಅವರಿಗೆ ಪಂಜಾಬ್ ಕಿಂಗ್ಸ್ ನಾಯಕತ್ವವನ್ನು ನೀಡುವುದು ಖಚಿತ ಎಂದು ಹೇಳಲಾಗಿತ್ತು.

ಧವನ್ ಅಲ್ಲ ಪಂಜಾಬ್ ಕಿಂಗ್ಸ್ ನಾಯಕತ್ವ ಈತನ ಪಾಲು!
ಸದ್ಯ ಈ ಕುರಿತಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಬಲ್ಲ ಮೂಲವೊಂದು ಮಾಹಿತಿಯನ್ನು ಹಂಚಿಕೊಂಡಿದ್ದು ಪಂಜಾಬ್ ಕಿಂಗ್ಸ್ ಶಿಖರ್ ಧವನ್ ಅವರಿಗೆ ನಾಯಕತ್ವ ನೀಡುವ ಯೋಜನೆಯಿಂದ ಹಿಂದೆ ಸರಿದಿದ್ದು, ತಾವು ಈ ಬಾರಿಯ ರಿಟೆನ್ಷನ್ ಪ್ರಕ್ರಿಯೆಯಲ್ಲಿ ರಿಟೇನ್ ಮಾಡಿಕೊಂಡಿರುವ ಮಯಾಂಕ್ ಅಗರ್ವಾಲ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ ಎನ್ನಲಾಗುತ್ತಿದೆ. ಹಾಗೂ ಈ ವಾರಾಂತ್ಯದ ನಂತರ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಅಧಿಕೃತವಾಗಿ ಮಯಾಂಕ್ ಅಗರ್ವಾಲ್ ಅವರನ್ನು ನಾಯಕನನ್ನಾಗಿ ಘೋಷಿಸಲಿದೆ ಎಂದು ಕೂಡ ವರದಿ ತಿಳಿಸಿದೆ.

ಪಂಜಾಬ್ ಕಿಂಗ್ಸ್ ಸ್ಕ್ವಾಡ್
ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಹೆಚ್ಚು ಹಣದೊಂದಿಗೆ ಪಾಲ್ಗೊಂಡ ಪಂಜಾಬ್ ಕಿಂಗ್ಸ್ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದ ನಂತರ ಈ ಆಟಗಾರರನ್ನು ತಂಡದಲ್ಲಿ ಹೊಂದಿದೆ: ಮಯಾಂಕ್ ಅಗರ್ವಾಲ್, ಅರ್ಶ್ದೀಪ್ ಸಿಂಗ್, ಶಿಖರ್ ಧವನ್, ಕಗಿಸೊ ರಬಾಡ, ಜಾನಿ ಬೈರ್‌ಸ್ಟೋವ್, ರಾಹುಲ್ ಚಾಹರ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಪ್ರಭಾಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ, ಇಶಾನ್ ಪೊರೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಓಡಿಯನ್ ಸ್ಮಿತ್, ಸಂದೀಪ್ ಶರ್ಮಾ, ರಾಜ್ ಬಾವಾ, ಪ್ರೀರಾಕ್ ಮಾನ್ಕಾ , ವೈಭವ್ ಅರೋರಾ, ರಿಟಿಕ್ ಚಟರ್ಜಿ, ಬಲ್ತೇಜ್ ಧಂಡಾ, ಅನ್ಶ್ ಪಟೇಲ್, ನಾಥನ್ ಎಲ್ಲಿಸ್, ಅಥರ್ವ ತೈದೆ, ಭಾನುಕಾ ರಾಜಪಕ್ಸೆ, ಬೆನ್ನಿ ಹೋವೆಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications