ಐಪಿಎಲ್ 2022: ರೈನಾ ಅಲ್ಲ, ಕನ್ನಡಿಗ ಸೇರಿದಂತೆ ಈ 10 ಆಟಗಾರರನ್ನು ಖರೀದಿಸುವುದು ಸಿಎಸ್‌ಕೆ ಗುರಿ!

ಚೆನ್ನೈ ಸೂಪರ್ ಕಿಂಗ್ಸ್, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿಯಾದ ಯಶಸ್ಸನ್ನು ಗಳಿಸಿರುವ ತಂಡಗಳಲ್ಲೊಂದು. 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿಯೇ ಹೊರಬಿದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊಟ್ಟ ಮಾತಿನಂತೆಯೇ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಕಮ್ ಬ್ಯಾಕ್ ಮಾಡಿತು. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾದಾಗಿನಿಂದ ಇಲ್ಲಿಯವರೆಗೂ ಕೂಡ ನಾಯಕನನ್ನು ಬದಲಾಯಿಸದೇ ಇರುವಂತಹ ತಂಡ ಎನಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಈ ವರ್ಷ ನಡೆಯಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಕೂಡ ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ ಅವರ ನಾಯಕತ್ವದಡಿಯಲ್ಲಿಯೇ ಕಣಕ್ಕಿಳಿಯಲಿದೆ.
ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಜಯದ ನಂತರ ಎಂಎಸ್ ಧೋನಿ ನಾಯಕತ್ವವನ್ನು ತ್ಯಜಿಸಲಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನೂತನ ನಾಯಕನನ್ನು ನೇಮಿಸಲಾಗುವುದು ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಇತ್ತೀಚೆಗಷ್ಟೇ ಆಟಗಾರರ ರಿಟೆನ್ಷನ್ ಪ್ರಕ್ರಿಯೆ ಮುಕ್ತಾಯವಾದ ನಂತರ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ರವೀಂದ್ರ ಜಡೇಜಾ, ಎಂಎಸ್ ಧೋನಿ, ಮೊಯಿನ್ ಅಲಿ ಮತ್ತು ಋತುರಾಜ್ ಗಾಯಕ್ವಾಡ್ ಈ 4 ಆಟಗಾರರನ್ನು ರಿಟೇನ್ ಮಾಡಿಕೊಂಡು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಂಎಸ್ ಧೋನಿ ಅವರೇ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಸ್ಪಷ್ಟನೆಯನ್ನೂ ನೀಡಿತು.
ಹಾಗೂ ಎಂಎಸ್ ಧೋನಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯ ನಂತರ ನಾಯಕತ್ವ ತ್ಯಜಿಸುವ ಸಾಧ್ಯತೆಗಳಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ನಡೆಯಲಿರುವ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ನಾಯಕತ್ವವನ್ನು ನಿಭಾಯಿಸಬಲ್ಲ ಆಟಗಾರನನ್ನು ಖರೀದಿಸುವ ಸಾಧ್ಯತೆಗಳು ಹೆಚ್ಚಿವೆ ಎಂಬ ಮಾತುಗಳು ಹರಿದಾಡುತ್ತಿವೆ. ಇನ್ನು ಈ ಬಾರಿಯ ಆಟಗಾರರ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಪ್ರಮುಖ ಆಟಗಾರರಾದ ಸುರೇಶ್ ರೈನಾ ಅವರನ್ನು ರೀಟೈನ್ ಮಾಡದೇ ಇದ್ದದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಹೀಗೆ ರಿಟೈನ್ ಆಗದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರಬಿದ್ದ ಸುರೇಶ್ ರೈನಾ ಮುಂಬರುವ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಲಿದ್ದಾರೆ ಎನ್ನುವ ಸುದ್ದಿಗಳು ಕೂಡ ಹರಿದಾಡಿದ್ದವು. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಸುಮಾರು 25-30 ಆಟಗಾರರನ್ನು ಖರೀದಿಸಲಿದ್ದು, ಟೂರ್ನಿಯಲ್ಲಿ ಯಥೇಚ್ಚವಾಗಿ ಕಣಕ್ಕಿಳಿಯಲು ಅವಕಾಶವನ್ನು ಪಡೆದುಕೊಳ್ಳಲಿರುವ ಪ್ರಮುಖ ಆಟಗಾರರನ್ನು ಮೊದಲು ಖರೀದಿಸಲಿದೆ ಎನ್ನಲಾಗುತ್ತಿದೆ. ಹೀಗೆ ಟೂರ್ನಿಯುದ್ದಕ್ಕೂ ಆಡುವ ಬಳಗದಲ್ಲಿ ಖಚಿತವಾಗಿ ಅವಕಾಶ ಪಡೆದುಕೊಳ್ಳುವಂತಹ ಈ ಕೆಳಕಂಡ ಆಟಗಾರರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಖರೀದಿಸಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಮೊದಲನೇ ಆದ್ಯತೆ ಈ 10 ಆಟಗಾರರಿಗೆ
ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ರಿಟೇನ್ ಮಾಡಿಕೊಂಡಿರುವ ಆಟಗಾರರನ್ನು ಹೊರತುಪಡಿಸಿ ತಂಡದ ಆಡುವ ಬಳಗಕ್ಕೆ ಬೇಕಾಗುವ ಬ್ಯಾಟ್ಸ್‌ಮನ್‌ಗಳು, ಮಧ್ಯಮ ಕ್ರಮಾಂಕದ ಆಟಗಾರರು, ಆಲ್ ರೌಂಡರ್ ಹಾಗೂ ಬೌಲರ್‌ಗಳು ಸೇರಿದಂತೆ ತಂಡಕ್ಕೆ ಅಗತ್ಯವಿರುವ ಈ 10 ಆಟಗಾರರನ್ನು ಖರೀದಿಸಲಿದೆ ಎನ್ನಲಾಗುತ್ತಿದೆ: ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಫಾಫ್ ಡು ಪ್ಲೆಸಿಸ್, ರವಿಚಂದ್ರನ್ ಅಶ್ವಿನ್, ಮಿಚೆಲ್ ಸ್ಯಾಂಟ್ನರ್, ಜೋಶ್ ಹ್ಯಾಜಲ್‌ವುಡ್, ಮಾರ್ಕ್ ವುಡ್, ಲುಂಗಿ ಎನ್‌ಗಿಡಿ, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್

ಸುರೇಶ್ ರೈನಾ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ಒಲವಿಲ್ಲ
ಇನ್ನು ಈ ಮೇಲ್ಕಂಡ ಹತ್ತು ಆಟಗಾರರನ್ನು ಮೆಗಾ ಹರಾಜಿನಲ್ಲಿ ಖರೀದಿಸುವ ಗುರಿಯನ್ನು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಸುರೇಶ್ ರೈನಾ ಅವರನ್ನು ಮೊದಲನೇ ಆದ್ಯತೆ ನೀಡಿ ಖರೀದಿಸುವುದು ಅನುಮಾನ ಎನ್ನಲಾಗುತ್ತಿದೆ. ಈ ಬಾರಿಯ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ತಂಡಕ್ಕೆ ನಿಷ್ಠಾವಂತ ಆಟಗಾರನಾಗಿ ಆಟವಾಡಿದ್ದ ಸುರೇಶ್ ರೈನಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ರಿಟೈನ್ ಮಾಡಿಕೊಳ್ಳದೆ ತಂಡದಿಂದ ಕೈಬಿಟ್ಟಿತ್ತು. ಹೀಗೆ ರಿಟೆನ್ಷನ್ ಪ್ರಕ್ರಿಯೆಯಲ್ಲಿಯೂ ರಿಟೈನ್ ಆಗದ ಸುರೇಶ್ ರೈನಾ ಅವರನ್ನು ಈ ಮೆಗಾ ಹರಾಜಿನಲ್ಲಿಯೂ ಕೂಡ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಖರೀದಿಸುವುದು ಅನುಮಾನ ಎನ್ನಲಾಗುತ್ತಿದೆ.

ಹೆಚ್ಚಾಗಿ ತಂಡದ ಆಟಗಾರರನ್ನು ಬದಲಾಯಿಸಲು ಇಷ್ಟಪಡದ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿಶೇಷ ಗುಣಗಳಲ್ಲಿ ಟೂರ್ನಿಯಿಂದ ಟೂರ್ನಿಗೆ ಆಟಗಾರರನ್ನು ಬದಲಾಯಿಸದೇ ಅದೇ ಆಟಗಾರರನ್ನು ಇಟ್ಟುಕೊಂಡು ಸ್ಪರ್ಧೆಗಿಳಿಯುವ ಲಕ್ಷಣ ಕೂಡ ಒಂದು. ಹೀಗಾಗಿ ರಿಟೆನ್ಷನ್ ಪ್ರಕ್ರಿಯೆಯಲ್ಲಿ ತಂಡದಲ್ಲಿಯೇ ಉಳಿಸಿಕೊಳ್ಳಲಾಗದಂಥ ತಂಡಕ್ಕೆ ಅನಿವಾರ್ಯವಾಗಿ ಬೇಕಾಗಿದ್ದಂತಹ ಸ್ಫೋಟಕ ಆಟಗಾರ ಫಾಫ್ ಡು ಪ್ಲೆಸಿಸ್ ಅವರನ್ನು ಖರೀದಿಸಲು ಮೊದಲನೇ ಆದ್ಯತೆ ನೀಡಿದ್ದು, ಸ್ಪಿನ್ ಬೌಲರ್‌ಗಳಾದ ಮಿಚೆಲ್ ಸ್ಯಾಂಟ್ನರ್ ಮತ್ತು ರವಿಚಂದ್ರನ್ ಅಶ್ವಿನ್ ಅವರಿಗೂ ಕೂಡ ಆದ್ಯತೆಯನ್ನು ನೀಡಲಾಗಿದೆ. ಹಾಗೂ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿಯೂ ಕೂಡಾ ತನ್ನನ್ನು ತಾನು ತೊಡಗಿಸಿಕೊಂಡಿರುವ ಶಾರ್ದೂಲ್ ಠಾಕೂರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಖಡಾಖಂಡಿತವಾಗಿ ಖರೀದಿಸುವ ಗುರಿಯನ್ನು ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications