Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MI vs RR: ಜೋಸ್ ಬಟ್ಲರ್ ಭರ್ಜರಿ ಶತಕ: ಮುಂಬೈಗೆ 194 ರನ್‌ಗಳ ಬೃಹತ್ ಗುರಿ ನೀಡಿದ ರಾಜಸ್ಥಾನ್

IPL 2022, MI vs RR: Jos Buttler century, Rajasthan Royals set big target

ಐಪಿಎಲ್‌ನಲ್ಲಿ ಶನಿವಾರ ಡಬಲ್ ಹೆಡ್ಡರ್ ಪಂದ್ಯಗಳು ನಡೆಯುತ್ತಿದ್ದು ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬೌಲರ್‌ಗಳ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು 193 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಮುಗಿಸಿದೆ. ಜೋಸ್ ಬಟ್ಲರ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದು ಆರ್‌ಆರ್ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಗಿದ್ದಾರೆ.

ಈ ಪಂದ್ಯದಲ್ಲಿ ಜೋಸ್ ಬಟ್ಲರ್ ಭರ್ಜರಿ ಶತಕವನ್ನು ಸಿಡಿಸುವ ಮೂಲಕ ತಂಡಕ್ಕೆ ನೆರವಾಗಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದ ಬಟ್ಲರ್ 68 ಎಸೆತಗಳನ್ನು ಎದುರಿಸಿ ಭರ್ತಿ 100 ರನ್‌ಗಳಿಸಿ ಔಟಾದರು. ಬಟ್ಲರ್ ಹೊರತುಪಡಿಸಿ ನಾಯಕ ಸಂಜು ಸ್ಯಾಮ್ಸನ್ 30 ರನ್ ಗಳಿಸಿದರೆ ಶಿಮ್ರಾಮ್ ಹೇಟ್ಮೇಯರ್ 35 ರನ್‌ಗಳಿಸಿ ತಂಡದ ಮೊತ್ತ ಹೆಚ್ಚಿಸಲು ಕಾರಣವಾದರು. ಉಳಿದೆಲ್ಲಾ ಆಟಗಾರರು ಒಂದಂಕಿಗೆ ಔಟಾಗಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ 3 ವಿಕೆಟ್ ಹಾಗೂ ಟೈಮಲ್ ಮಿಲ್ಸ್ ಕೂಡ ಮೂರು ವಿಕೆಟ್ ಕಬಳಿಸಿದ್ದಾರೆ. ಉಳಿದಂತೆ ಪೊಲಾರ್ಡ್ ಒಂದು ವಿಕೆಟ್ ಸಂಪಾದಿಸಿದರು.

IPL 2022, MI vs RR: Jos Buttler century, Rajasthan Royals set big target

ಮುಂಬೈ ಇಂಡಿಯನ್ಸ್ ಆಡುವ ಬಳಗ:
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಅನ್ಮೋಲ್‌ಪ್ರೀತ್ ಸಿಂಗ್, ತಿಲಕ್ ವರ್ಮಾ, ಕೀರಾನ್ ಪೊಲಾರ್ಡ್, ಟಿಮ್ ಡೇವಿಡ್, ಡೇನಿಯಲ್ ಸಾಮ್ಸ್, ಮುರುಗನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಟೈಮಲ್ ಮಿಲ್ಸ್, ಬೇಸಿಲ್ ಥಂಪಿ
ಬೆಂಚ್: ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್, ಫ್ಯಾಬಿಯನ್ ಅಲೆನ್, ಸಂಜಯ್ ಯಾದವ್, ರಿಲೆ ಮೆರೆಡಿತ್, ರಮಣದೀಪ್ ಸಿಂಗ್, ಮಯಾಂಕ್ ಮಾರ್ಕಂಡೆ, ಆರ್ಯನ್ ಜುಯಲ್, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ರಾಹುಲ್ ಬುದ್ಧಿ, ಅರ್ಷದ್ ಖಾನ್, ಡೆವಾಲ್ಡ್ ಬ್ರೆವಿಸ್

ರಾಜಸ್ಥಾನ್ ರಾಯಲ್ಸ್ ಆಡುವ ಬಳಗ: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ನವದೀಪ್ ಸೈನಿ, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಹಾಲ್

ಬೆಂಚ್: ಕರುಣ್ ನಾಯರ್, ಜೇಮ್ಸ್ ನೀಶಮ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಕೆಸಿ ಕಾರಿಯಪ್ಪ, ಡೇರಿಲ್ ಮಿಚೆಲ್, ಓಬೇದ್ ಮೆಕಾಯ್, ತೇಜಸ್ ಬರೋಕಾ, ಕುಲದೀಪ್ ಯಾದವ್, ಅನುನಯ್ ಸಿಂಗ್, ಕುಲದೀಪ್ ಸೇನ್, ಧ್ರುವ್ ಜುರೆಲ್, ಶುಭಂ ಗರ್ವಾಲ್, ನಾಥನ್ ಕೌಲ್ಟರ್-ನೈಲ್

ತಾವು ಗೆದ್ರೂ ಪಂಜಾಬ್ ಟೀಂನ್ನು ಹಾಡಿಹೊಗಳಿದ ಶ್ರೇಯಸ್ | Oneindia Kannada

Story first published: Saturday, April 2, 2022, 23:51 [IST]
Other articles published on Apr 2, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+