Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜೋಸ್ ಬಟ್ಲರ್ ಇಂಗ್ಲೆಂಡ್‌ನ ಮುಂದಿನ ಟಿ20 ನಾಯಕ, ಆದರೆ..!: ಮೈಕಲ್ ವಾನ್ ಹೇಳಿಕೆ

IPL 2022: Michael Vaughan said Jos Buttler will lead England team in t20 format

ಈ ಬಾರಿಯ ಐಪಿಎಲ್‌ನಲ್ಲಿ ಅಮೋಘ ಫಾರ್ಮ್ ಪ್ರದರ್ಶಿಸುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಈ ಆವೃತ್ತಿಯಲ್ಲಿ ಮೂರನೇ ಶತಕ ದಾಖಲಿಸಿದ್ದಾರೆ. ಈ ಆವೃತ್ತಿಯಲ್ಲಿ ಆಡಿರುವ 7 ಪಂದ್ಯಗಳಲ್ಲಿ ಜೋಸ್ ಬಟ್ಲರ್ 3 ಶತಕ ಹಾಗೂ 2 ಅರ್ಧ ಶತಕ ಸಿಡಿಸಿದ್ದು 491 ರನ್‌ಗಳಿಸಿ ಇತರ ಎಲ್ಲಾ ಆಟಗಾರರಿಗಿಂತಲೂ ಭಾರೀ ಮುಂದಿದ್ದಾರೆ. ಜೋಸ್ ಬಟ್ಲರ್ ಅವರ ಈ ಅದ್ಭುತ ಪ್ರದರ್ಶನದ ಬಗ್ಗೆ ಅದ್ಭುತ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಬಟ್ಲರ್ ಇಂಗ್ಲೆಂಡ್ ತಂಡದ ಮುಂದಿನ ನಾಯಕ ಎಂದಿದ್ದಾರೆ.

ಇನ್ನು ಜೋಸ್ ಬಟ್ಲರ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ರಾಜಸ್ಥಾನ್ ರಾಯಲ್ಸ್ ತಂಡದ ನಿರ್ಧಾರ ಅತ್ಯಂತ ಸುಲಭದ ನಿರ್ಧಾರವಾಗಿತ್ತು ಎಂದಿದ್ದಾರೆ ಮೈಕಲ್ ವಾನ್. ಜೋಸ್ ಬಟ್ಲರ್ ಅವರನ್ನು ಟಿ20 ಕ್ರಿಕೆಟ್‌ನ ವಿಶ್ವದ ಅತ್ಯುತ್ತಮ ಆಟಗಾರ ಎಂದು ಬಣ್ಣಿಸಿದ್ದಾರೆ ಮೈಕಲ್ ವಾನ್.

"ಜೋಸ್ ಬಟ್ಲರ್ ವಿಶ್ವದ ಅತ್ಯುತ್ತಮ ಟಿ20 ಆಟಗಾರ. ಅವರನ್ನು ರೀಟೈನ್ ಮಾಡುವುದಕ್ಕೆ ಹೆಚ್ಚು ಬುದ್ದಿವಂತಿಗೆ ಬೇಕಿರಲಿಲ್ಲ. ಬಟ್ಲರ್ ಅವರಂತಾ ಆಟಗಾರನನ್ನು ಆದಷ್ಟು ಶೀಘ್ರವಾಗಿ ರೀಟೈನ್ ಮಾಡಿಕೊಳ್ಳಬೇಕು. ಅದನ್ನು ಆರ್‌ಆರ್ ಮಾಡಿದೆ. ಆತನನ್ನು ಅಗ್ರ ಕ್ರಮಾಂಕದಲ್ಲಿ ಆಡುವ ಅವಕಾಶ ನೀಡುವ ಮೂಲಕ ಆತನಿಂದ ಅದ್ಭುತ ಪ್ರದರ್ಶನ ಹೊರಬರಲು ಕಾರಣವಾಗಿದೆ. ಆತನ ಫಾರ್ಮ್, ಕೌಶಲ್ಯ, ಅನುಭವ ಎಲ್ಲವೂ ಪ್ರತಿದಿನವೂ ಉತ್ತಮವಾಗುತ್ತಿದೆ" ಎಂದಿದ್ದಾರೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್.

ಇನ್ನು ಇದೇ ಸಂದರ್ಭದಲ್ಲಿ ವಾನ್, "ಜೋಸ್ ಬಟ್ಲರ್ ಇಂಗ್ಲೆಂಡ್ ತಂಡದ ಪರವಾಗಿ ಟೆಸ್ಟ್ ತಂಡವನ್ನು ಮತ್ತೆ ಪ್ರತಿನಿಧಿಸುತ್ತಾರೆ ಎಂದು ನಾನು ಹೇಳಲಾರೆ" ಎಂದಿದ್ದಾರೆ. ಆದರೆ ಟಿ20 ಕ್ರಿಕೆಟ್ ಮಾದರಿಯಲ್ಲಿ ಜೋಸ್ ಬಟ್ಲರ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸುವ ಅವಕಾಶವನ್ನು ಪಡೆಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

"ಆತ ಮುಂದಿನ ದಿನಗಳಲ್ಲಿ ಟೆಸ್ಟ್ ಆಡಲಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಆತ ವೈಟ್‌ಬಾಲ್ ಸ್ಪೆಶಲಿಸ್ಟ್ ಆಗಿ ತಂಡಕ್ಕೆ ಕೊಡುಗೆ ನೀಡಲಿದ್ದಾರೆ. ಅವರು ಇನ್ನು ಕೂಡ ಬೆಳವಣಿಗೆ ಸಾಧಿಸಬಹುದು ಎಂದು ನಾನು ಭಾವಿಸುತ್ತೇನೆ. ಆತ ಟಿ20 ಮಾದರಿಯಲ್ಲಿ ಇಂಗ್ಲೆಂಡ್ ತಂಡದ ನಾಯಕನಾಗಲಿದ್ದಾರೆ. ಅದು ಬಹಳ ದೂರದಲ್ಲಿದೆ ಎಂದು ನಾನು ಭಾವಿಸುವುದಿಲ್ಲ. ಈ ಬಾರಿಯ ವಿಶ್ವಕಪ್‌ಗೆ ಬಟ್ಲರ್ ನಾಯಕನಾಗದಿರಬಹುದು. ಆದರೆ ಮುಂದಿನ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಬಟ್ಲರ್ ಮುನ್ನಡೆಸಲಿದ್ದಾರೆ" ಎಂದಿದ್ದಾರೆ ಮೈಕಲ್ ವಾನ್.

ರಾಜಸ್ಥಾನ್ ರಾಯಲ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಇದರಲ್ಲಿ ಜೋಸ್ ಬಟ್ಲರ್ ಪಾತ್ರ ಮಹತ್ವದ್ದಾಗಿದೆ. ಇತರ ಆಟಗಾರರಿಂದಲೂ ಉತ್ತಮ ಬೆಂಬಲ ದೊರೆಯುತ್ತಿದೆ. ಬೌಲಿಂಗ್ ವಿಭಾಗ ಕೂಡ ಆರ್‌ಆರ್ ತಂಡದ ಯಶಸ್ಸಿನಲ್ಲಿ ಪ್ರಮುಖ ಕೊಡುಗೆಯನ್ನು ನೀಡುತ್ತಿದೆ.

Story first published: Saturday, April 23, 2022, 16:43 [IST]
Other articles published on Apr 23, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+