RR vs RCB : ರಾಜಸ್ಥಾನ್ ವಿರುದ್ಧವೂ ಕಣಕ್ಕಿಳಿಯಲ್ಲ ಆರ್‌ಸಿಬಿ ಬ್ರಹ್ಮಾಸ್ತ್ರ: ಮುಂಬೈ ವಿರುದ್ಧ ಅಬ್ಬರಿಸಲು ಸಜ್ಜು

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಂಗಳವಾರ ಈ ಆವೃತ್ತಿಯ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ. ಮೊದಲ ಎರಡು ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ಪಡೆ ಸೋಲು ಗೆಲುವಿನ ರುಚಿನ ಕಂಡಿದೆ. ಮೂರನೇ ಪಂದ್ಯವನ್ನು ಗೆದ್ದು ಅಂಕಪಟ್ಟಿಯಲ್ಲಿ ಮೇಲೇರುವ ಗುರಿಯಿಟ್ಟುಕೊಂಡಿದೆ ಆರ್‌ಸಿಬಿ. ಆದರೆ ಈ ಪಂದ್ಯದಲ್ಲಿ ಆರ್‌ಸಿಬಿ ತಂಡಕ್ಕೆ ಎದುರಾಗಿರುವುದು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್. ಟೂರ್ನಿ ಮೊದಲ ಎರಡು ಪಂದ್ಯಗಳನ್ನು ಕೂಡ ಭರ್ಜರಿಯಾಗಿ ಗೆದ್ದುಕೊಂಡಿರುವ ಆರ್‌ಆರ್ ತಂಡ ಬಲಿಷ್ಠ ಆಟಗಾರರನ್ನು ಒಳಗೊಂಡಿದ್ದು ಆರ್‌ಸಿಬಿ ಪಡೆಗೆ ಕಠಿಣ ಸವಾಲಾಗಲಿದೆ.
ಈ ಕುತೂಹಲಕಾರಿ ಪಂದ್ಯದಲ್ಲಿ ಆರ್‌ಸಿಬಿ ತಂಡದ ಪ್ರಮುಖ ಅಸ್ತ್ರ ಗ್ಲೆನ್ ಮ್ಯಾಕ್ಸ್‌ವೆಲ್ ಕಣಕ್ಕಿಳಿಯಬಹುದು ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಅದಕ್ಕೆ ಪೂರಕವಾಗಿ ಈಗಾಗಲೇ ಆರ್‌ಸಿಬಿ ಸ್ಕ್ವಾಡ್ ಸೇರಿಕೊಂಡಿರುವ ಗ್ಲೆನ್ ಮ್ಯಾಕ್ಸ್‌ವೆಲ್ ತಂಡದ ಆಟಗಾರರೊಂದಿಗೆ ಅಭ್ಯಾಸದಲ್ಲಿಯೂ ನಿರತವಾಗಿದ್ದರು. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ಆರ್‌ಆರ್ ವಿರುದ್ಧದ ಪಂದ್ಯದಲ್ಲಿಯೂ ಕಣಕ್ಕಿಳಿಯುವುದಿಲ್ಲ ಎಂಬುದನ್ನು ತಂಡದ ಕ್ರಿಕೆಟ್ ಚಟುವಟಿಕೆಗಳ ನಿರ್ದೇಶಕ ಮೈಕ್ ಹೆಸ್ಸನ್ ಹೇಳಿದ್ದಾರೆ.

ಮ್ಯಾಕ್ಸ್‌ವೆಲ್ ಅಲಭ್ಯತೆಗೆ ಕಾರಣ
ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಆರ್‌ಸಿಬಿ ಈ ಬಾರಿಯ ಹರಾಜಿಗೂ ಮುನ್ನ ರೀಟೈನ್ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿತ್ತು. ಈ ಬಾರಿಯ ಟೂರ್ನಿಯ ಆರಂಭಕ್ಕೆ ಕೆಲವೇ ದಿನಗಳ ಮುನ್ನ ಗ್ಲೆನ್ ಮ್ಯಾಕ್ಸ್‌ವೆಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾದ ಪಾಕಿಸ್ತಾನ ಪ್ರವಾಸದಿಂದಲೂ ಮ್ಯಾಕ್ಸಿ ಹಿಂದೆ ಸರಿದಿದ್ದರು. ಇದೀಗ ಆರ್‌ಸಿಬಿ ತಂಡವನ್ನು ಬೇಗನೆ ಕೂಡಿಕೊಂಡಿದ್ದರೂ ಆಡುವ ಬಳಗದಲ್ಲಿ ಸೇರ್ಪಡೆಯಾಗಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ನಿರ್ಬಂಧವೇ ಕಾರಣವಾಗಿದೆ.

ಕ್ರಿಕೆಟ್ ಆಸ್ಟ್ರೇಲಿಯಾದ ಗೈಡ್‌ಲೈನ್ಸ್
ಕ್ರಿಕೆಟ್ ಆಸ್ಟ್ರೇಲಿಯಾದ ಗೈಡ್‌ಲೈನ್ಸ್ ಪ್ರಕಾರ ಆಸ್ಟ್ರೇಲಿಯಾದ ಕಾಂಟ್ರಾಕ್ಟ್ ಹೊಂದಿರುವ ಆಟಗಾರರು ಏಪ್ರಿಲ್ 6ರ ವರೆಗೆ ಐಪಿಎಲ್‌ನ ಯಾವುದೇ ಪಂದ್ಯಗಳಿಗೆ ಲಭ್ಯವಾಗಲು ಸಾಧ್ಯವಿಲ್ಲ. ಈ ಕಾರಣದಿಂದಾಗಿಯೇ ಗ್ಲೆನ್ ಮ್ಯಾಕ್ಸ್‌ವೆಲ್ ತಂಡದಲ್ಲಿ ಅಭ್ಯಾಸದಲ್ಲಿ ಭಾಗಿಯಾಗಿದ್ದರೂ ಆಡಲು ಸಮರ್ಥರಾಗಿದ್ದರೂ ಆರ್‌ಆರ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಸಾಧ್ಯವಾಗುತ್ತಿಲ್ಲ.

ಮೈಕ್ ಹೆಸ್ಸನ್ ಸ್ಪಷ್ಟನೆ
ಈ ವಿಚಾರವನ್ನು ಮೈಕ್ ಹೆಸ್ಸನ್ ಸ್ಪಷ್ಟಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಆರ್‌ಸಿಬಿ ತಂಡದ ಮುಂದಿನ ಪಂದ್ಯಗಳಿಗೆ ಆಟಗಾರರು ಲಭ್ಯವಾಗಲಿದ್ದಾರೆ ಎಂಬುದನ್ನು ಕೂಡ ಖಚಿತಪಡಿಸಿದ್ದಾರೆ. ಆರ್‌ಸಿಬಿ ತನ್ನನ ಮುಂದಿನ ಪಂದ್ಯವನ್ನು ಏಪ್ರಿಲ್ 9ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೊಸಿಯೇಶನ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಮಾರ್ಚ್ 27ರಂದು ಮದುವೆಯಾಗಿದ್ದ ಕಾರಣ ತಡವಾಗಿ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಭಾರತ ಮೂಲದ ದೀರ್ಘ ಕಾಲದ ಗೆಳತಿ ವಿನಿ ರಾಮನ್ ಅವರೊಂದಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೇ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದರೂ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯಕ್ಕೂ ಮುನ್ನ ಗ್ಲೆನ್ ಮ್ಯಾಕ್ಸ್‌ವೆಲ್ ಆರ್‌ಸಿಬಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲು ಸಾಧ್ಯವೇ ಇಲ್ಲ.


ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಪರ ಮಿಂಚಿದ್ದ ಮ್ಯಾಕ್ಸ್‌ವೆಲ್
ಕಳೆದ ಆವೃತ್ತಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಆರ್‌ಸಿಬಿ ಪರವಾಗಿ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದರು. ಆರ್‌ಸಿಬಿ ಪ್ಕೇಆಫ್ ಹಂತಕ್ಕೇರಲು ಮ್ಯಾಕ್ಸ್‌ವೆಲ್ ಪ್ರದರ್ಶನ ಪ್ರಮುಖ ಕಾರಣವಾಗಿತ್ತು. ಮಧ್ಯಮ ಕ್ರಮಾಂಕದಲ್ಲಿ ಮ್ಯಾಕ್ಸಿ ಆರ್‌ಸಿಬಿ ಪರವಾಗಿ ಸ್ಥಿರ ಪ್ರದರ್ಶನ ನಿಡುವ ಮೂಲಕ ತಂಡಕ್ಕೆ ಆಧಾರ ಸ್ಥಂಭವಾಗಿದ್ದರು. ಹೀಗಾಗಿ ಈ ಬಾರಿಯ ಟೂರ್ನಿಯಲ್ಲಿಯೂ ಆರ್‌ಸಿಬಿ ತಂಡ ಮ್ಯಾಕ್ಸ್‌ವೆಲ್ ಅವರಿಂದ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications