ಐಪಿಎಲ್ 2022: ಚೆನ್ನೈ ಸೂಪರ್ ಕಿಂಗ್ಸ್‌ಗೆ ಆರಂಭದಲ್ಲೇ ಸಂಕಷ್ಟ; ಪ್ರಮುಖ ಆಟಗಾರನೇ ಅಲಭ್ಯ!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಟೂರ್ನಿಯ ಚೊಚ್ಚಲ ಪಂದ್ಯ ಮಾರ್ಚ್ 26ರಂದು ನಡೆಯಲಿದೆ. ಇನ್ನು ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಟ್ರೋಫಿ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಉದ್ಘಾಟನಾ ಪಂದ್ಯದಲ್ಲಿ ಸೆಣಸಾಟ ನಡೆಸಲಿದ್ದು, ಚೆನ್ನೈ ಸೂಫರ್ ಕಿಂಗ್ಸ್‌ಗೆ ಈ ಪಂದ್ಯದಲ್ಲಿ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಎದುರಾಳಿಯಾಗಲಿದೆ. ಇತ್ತಂಡಗಳ ನಡುವಿನ ಈ ಪಂದ್ಯ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಮೀಸುತ್ತಿದ್ದಂತೆ ಎಲ್ಲಾ ತಂಡಗಳೂ ಕೂಡ ಅಭ್ಯಾಸಗಳನ್ನು ಆರಂಭಿಸಿದ್ದು, ಆಟಗಾರರು ತಮ್ಮ ತಮ್ಮ ತಂಡಗಳ ಕ್ಯಾಂಪ್ ಸೇರಿಕೊಂಡಿದ್ದಾರೆ. ಆದರೆ, ಟೂರ್ನಿಯ ಚೊಚ್ಚಲ ಪಂದ್ಯವನ್ನಾಡಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದು, ತಂಡ ಆರಂಭದಲ್ಲೇ ಆಘಾತಕ್ಕೊಳಗಾಗಿದೆ. ಈ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಶಿ ವಿಶ್ವನಾಥನ್ ಮಾತನಾಡಿದ್ದು, ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ಚೊಚ್ಚಲ ಪಂದ್ಯಕ್ಕೆ ಪ್ರಮುಖ ಆಟಗಾರ ಅಲಭ್ಯ
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆಯಲಿರುವ ಈ ಬಾರಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಲ್‌ರೌಂಡರ್ ಮೊಯಿನ್ ಅಲಿ ಅಲಭ್ಯರಾಗಲಿದ್ದು, ತಂಡಕ್ಕೆ ಟೂರ್ನಿಯ ಆರಂಭದಲ್ಲೇ ಆಘಾತವಾಗಿದೆ. ಭಾರತಕ್ಕೆ ಪ್ರಯಾಣ ಬೆಳೆಸಲು ಮೊಯಿನ್ ಅಲಿಗೆ ವಿಸಾ ಸಿಗದ ಕಾರಣ ಮೊಯಿನ್ ಅಲಿ ತಡವಾಗಿ ತಂಡ ಸೇರಲಿದ್ದಾರೆ ಎನ್ನಲಾಗುತ್ತಿದೆ.

ಮೊಯಿನ್ ಅಲಿ ಬಗ್ಗೆ ಕಾಶಿ ವಿಶ್ವನಾಥನ್ ಹೇಳಿದ್ದಿಷ್ಟು
ಮೊಯಿನ್ ಅಲಿ ಟೂರ್ನಿಯ ಚೊಚ್ಚಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂಬ ವಿಷಯವನ್ನು ಸ್ವತಃ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಶಿ ವಿಶ್ವನಾಥನ್ ತಿಳಿಸಿದ್ದು, ಮೊಯಿನ್ ಅಲಿಗೆ ವಿಸಾ ಸಿಗದ ಕುರಿತು ಈಗಾಗಲೇ ಬಿಸಿಸಿಐ ಜೊತೆ ಚರ್ಚಿಸಿದ್ದೇವೆ ಹಾಗೂ ಮುಂದಿನ ಎರಡು ಮೂರು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿರುವ ಕಾಶಿ ವಿಶ್ವನಾಥನ್ ಪಾಕಿಸ್ತಾನ ಮೂಲ ಹೊಂದಿರುವ ಆಟಗಾರನಾಗಿರುವ ಕಾರಣ ಮೊಯಿನ್ ಅಲಿಗೆ ವಿಸಾ ಸಿಗುವುದರಲ್ಲಿ ತಡವಾಗುತ್ತಿರುವಂತೆ ಕಾಣುತ್ತಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಮೊಯಿನ್ ಅಲಿ ಕಳೆದ ಫೆಬ್ರವರಿ 28ರಂದೇ ಭಾರತದ ವಿಸಾಗೆ ಅರ್ಜಿ ಹಾಕಿದ್ದು, ಇಪ್ಪತ್ತಕ್ಕೂ ಹೆಚ್ಚು ದಿನಗಳು ಕಳೆದಿದ್ದರೂ ಮೊಯಿನ್ ಅಲಿಗೆ ವಿಸಾ ಮಾತ್ರ ಲಭ್ಯವಾಗಿಲ್ಲ.

ಮೊಯಿನ್ ಅಲಿ ಐಪಿಎಲ್ ಅಂಕಿಅಂಶ
ಇದುವರೆಗೂ ಒಟ್ಟು 34 ಐಪಿಎಲ್ ಪಂದ್ಯಗಳನ್ನಾಡಿರುವ ಇಂಗ್ಲೆಂಡ್ ಆಲ್‌ರೌಂಡರ್ ಮೊಯಿನ್ ಅಲಿ 4 ಅರ್ಧಶತಕ ಸಹಿತ 666 ರನ್‌ಗಳನ್ನು ಕಲೆಹಾಕಿದ್ದಾರೆ. ಹಾಗೂ ಒಟ್ಟು 16 ವಿಕೆಟ್‌ಗಳನ್ನು ಮೊಯಿನ್ ಅಲಿ ಪಡೆದುಕೊಂಡಿದ್ದಾರೆ. ಇನ್ನು ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಒಟ್ಟು 15 ಪಂದ್ಯಗಳನ್ನಾಡಿದ್ದ ಮೊಯಿನ್ ಅಲಿ 357 ರನ್ ಬಾರಿಸಿ 6 ವಿಕೆಟ್‌ಗಳನ್ನು ಬಾರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications